ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಮುಂಗಾರು ಮಳೆ ಈಗಾಗಲೇ ದೇಶದ ಹಲವಾರು ಭಾಗಗಳಿಗೆ ಕಾಲಿಟ್ಟಿದೆ. ಮಳೆಗಾಲದಲ್ಲಿ ಲಾಂಗ್ ಡ್ರೈವ್‌ಗಳಿಗೆ ಹೋಗುವುದು ಹೊಸ ಅನುಭವ ನೀಡುತ್ತದೆ. ಆದರೆ ಮಳೆಗಾಲದಲ್ಲಿ ರಸ್ತೆಗಳು ಅಪಾಯಕಾರಿಯಾಗಿರುತ್ತವೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಮಳೆಗಾಲದಲ್ಲಿ ಕಾರು ಹಾಗೂ ಬೈಕುಗಳು ಅಪಘಾತಕ್ಕೆ ಸಿಲುಕುವ ಬಗ್ಗೆ ವರದಿಯಾಗುತ್ತಲೇ ಇರುತ್ತವೆ. ಮಳೆಗಾಲದಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳಿಗೆ ಅಕ್ವಾಪ್ಲೇನಿಂಗ್ ಅಥವಾ ಹೈಡ್ರೋಪ್ಲೇನಿಂಗ್ ಪ್ರಮುಖ ಕಾರಣ. ಅಕ್ವಾಪ್ಲೇನಿಂಗ್ ಅಥವಾ ಹೈಡ್ರೋಪ್ಲೇನಿಂಗ್ ಎಂದರೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಮಳೆಗಾಲದಲ್ಲಿ ನೀರು ರಸ್ತೆಯ ಮೇಲಿರುತ್ತದೆ. ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿ ಅಲ್ಲಿಯೇ ಉಳಿಯುತ್ತದೆ. ಈ ರೀತಿ ನೀರು ಸಂಗ್ರಹವಾಗಿರುವ ಸ್ಥಳದಲ್ಲಿ ಕಾರು ವೇಗವಾಗಿ ಚಲಿಸಿದಾಗ ಸ್ಟೀಯರಿಂಗ್ ಕಂಟ್ರೋಲ್ ಕಳೆದುಕೊಳ್ಳುತ್ತದೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಇದನ್ನು ಅಕ್ವಾಪ್ಲೇನಿಂಗ್ ಎಂದು ಕರೆಯಲಾಗುತ್ತದೆ. ಅಕ್ವಾಪ್ಲೇನಿಂಗ್'ಗೆ ಸಂಬಂಧಿಸಿದ ವೀಡಿಯೊವನ್ನು ಶಮೀಂದ್ರ ಸೇನ್‌ಗುಪ್ತಾ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಈ ವೀಡಿಯೊದಲ್ಲಿ ಮಳೆಗಾಲದಲ್ಲಿ ಅತಿ ವೇಗದಲ್ಲಿ ವಾಹನಗಳನ್ನು ಏಕೆ ಚಾಲನೆ ಮಾಡಬಾರದು ಎಂಬುದನ್ನು ತೋರಿಸಲಾಗಿದೆ. ಈ ವೀಡಿಯೊ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾದ ತುಣುಕಾಗಿದೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಹಿಂಬದಿಯಲ್ಲಿ ಸಾಗುವ ವಾಹನಗಳನ್ನು ಗಮನಿಸಿದರೆ ಈ ಘಟನೆ ಕೇರಳದಲ್ಲಿ ನಡೆದಿರುವಂತೆ ಕಾಣುತ್ತದೆ. ಈ ವೀಡಿಯೊದಲ್ಲಿ ಕೆಲವು ವಾಹನಗಳು ಮಳೆ ಬೀಳುತ್ತಿರುವ ರಸ್ತೆಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಈ ವೇಳೆ ತಿರುವಿನಲ್ಲಿ ವೇಗವಾಗಿ ಬರುವ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಕಾರು ತಿರುವಿನಲ್ಲಿದ್ದ ನೀರಿನ ಮೇಲೆ ಚಲಿಸುತ್ತದೆ. ಆಗ ಕಾರು ನಿಯಂತ್ರಣ ತಪ್ಪಿ ಸೈನ್‌ಬೋರ್ಡ್'ಗೆ ಬಡಿಯುತ್ತದೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಇದರಿಂದ ಕಾರಿನ ಒಆರ್‌ವಿಎಂ ಮುರಿದು ಬೀಳುತ್ತದೆ. ಈ ಘಟನೆ ಸಂಭವಿಸಿದಾಗ ರಸ್ತೆಯಲ್ಲಿ ಕಡಿಮೆ ಸಂಖ್ಯೆಯ ವಾಹನಗಳಿದ್ದವು. ಕಾರು ನಿಲ್ಲುತ್ತಿದ್ದಂತೆಯೇ ರಸ್ತೆಯ ಎದುರು ಬದಿಯಲ್ಲಿ ಬಸ್'ವೊಂದು ಹಾದುಹೋಗುತ್ತದೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಕಾರು ನಿಲ್ಲಿಸದಿದ್ದರೆ ಬಸ್‌ಗೆ ಗುದಿಯುವ ಸಾಧ್ಯತೆಗಳಿದ್ದವು. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಅವನು ಕಾರಿನಿಂದ ಹೊರ ಬಂದು ಕಾರಿಗೆ ಯಾವುದಾದರೂ ಹಾನಿ ಸಂಭವಿಸಿದೆಯೇ ಎಂಬುದನ್ನು ಪರಿಶೀಲಿಸುತ್ತಾನೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಈ ಘಟನೆ ಅಕ್ವಾಪ್ಲೇನಿಂಗ್‌ನಿಂದಾಗಿ ಸಂಭವಿಸಿದೆ. ರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನಗಳು ವೇಗವಾಗಿ ಚಲಿಸಿದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಈ ಸಂದರ್ಭದಲ್ಲಿ ಕಾರು ಚಾಲಕರು ಸ್ಟೀಯರಿಂಗ್‌ನಿಂದ ಹಾಕುವ ಯಾವುದೇ ಇನ್‌ಪುಟ್ ವ್ಯರ್ಥವಾಗುತ್ತದೆ.

ಟಯರ್ ಗ್ರಿಪ್ ಕಡಿಮೆಯಾಗಿ ಕಾರು ಜಾರಲು ಆರಂಭಿಸುತ್ತದೆ. ಮಳೆಗಾಲದಲ್ಲಿ ವಾಹನಗಳನ್ನು 40 ಕಿ.ಮೀ ವೇಗದಲ್ಲಿ ಚಾಲನೆ ಮಾಡಲು ಸೂಚಿಸಲಾಗುತ್ತದೆ.ಈ ವೇಳೆ ಸ್ಟೀಯರಿಂಗ್ ಹಗುರವಾಗಿದ್ದು, ಟಯರ್‌ಗಳಿಗೆ ಯಾವುದೇ ಎಳೆತವಿಲ್ಲದ ಕಾರಣ ಟ್ಯಾಕೋಮೀಟರ್ ರೀಡಿಂಗ್ ಹೆಚ್ಚಾಗುತ್ತದೆ.

ಮಳೆಗಾಲದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ ಅಕ್ವಾಪ್ಲೇನಿಂಗ್

ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಆಕ್ಸಲರೇಟರ್ ಪೆಡಲ್‌ನಿಂದ ಕಾಲನ್ನು ಎತ್ತುವುದು. ವೇಗ ಕಡಿಮೆಯಾದ ನಂತರ ಟಯರ್‌ಗಳು ರಸ್ತೆ ಸಂಪರ್ಕಕ್ಕೆ ಬರುತ್ತವೆ.

Most Read Articles

Kannada
English summary
Aquaplaning causes accident during rainy season. Read in Kannada.
Story first published: Friday, July 9, 2021, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X