ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು

ಭಾರತೀಯ ಆಟೋ ಉದ್ಯಮದಲ್ಲಿ ಸದ್ಯ ಜನಪ್ರಿಯವಾಗಿ ಪ್ರಮುಖ ವಿದೇಶಿ ಕಂಪನಿಗಳ ಕಾರುಗಳು ಮಾರುಕಟ್ಟೆ ಪ್ರವೇಶಿಸುವುದಕ್ಕೂ ಮುನ್ನವೇ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು ಬಿಡುಗಡೆ ಸಜ್ಜಾಗಿ ಕೊನೆಗೆ ಸೂಕ್ತ ಮಾರುಕಟ್ಟೆ ಸಿಗದೆ ಆರಂಭದಲ್ಲೇ ಸ್ಥಗಿತಗೊಂಡ ಹಲವಾರು ಕಂಪನಿಗಳ ಉದಾಹರಣೆಗಳಿವೆ.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಅದರಲ್ಲೂ ಕ್ಲಾಸಿಕ್ ಕಾರುಗಳ ವಿಷಯಕ್ಕೆ ಬಂದಾಗ ಮೊದಲು ನೆನಪಿಗೆ ಬರುವುದು ಹಿಂದೂಸ್ತಾನ್ ಕಂಪನಿಯ ಅಂಬಾಸಿಡರ್ ಕಾರು. ಈ ಕಾರು ಭಾರತದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಅಂಬಾಸಿಡರ್ ಕಾರಿನ ಜೊತೆಗೆ ಮತ್ತೊಂದು ಕಾರು ಮಾದರಿಯನ್ನು ಅನ್ನು ನಿರ್ಮಿಸಲಾಗಿತ್ತು. ಭಾರತೀಯ ವಾಹನ ಉದ್ಯಮದ ಸ್ವಾವಲಂಬನೆ ಪ್ರತೀಕವಾಗಿದ್ದ ಹಲವು ಕಂಪನಿಗಳು ದೊಡ್ಡ ಮಟ್ಟದ ಗ್ರಾಹಕರನ್ನು ಸೆಳೆಯುವ ಮುನ್ನವೇ ಸ್ಥಗಿತಗೊಂಡವು. ಶುರುವಿನ ಆರಂಭದಲ್ಲೇ ಕಾರಣಾಂತರಗಳಿಂದ ಸ್ಥಗಿತಗೊಂಡ ಭಾರತೀಯ ಕಾರು ಕಂಪನಿಗಳಲ್ಲಿ ಅರವಿಂದ್ ಮೋಟಾರ್ಸ್‌ ಕೂಡಾ ಒಂದಾಗಿದೆ.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಹೌದು, ಅರವಿಂದ್ ಮೋಟಾರ್ಸ್ ಮಾಡೆಲ್-3 ಕಾರ್ ಅನ್ನು ಕೇರಳದ ತಿರುವನಂತಪುರಂನಲ್ಲಿ 1966ರಲ್ಲೇ ನಿರ್ಮಿಸಲಾಗಿತ್ತು. ಈ ಕಾರನ್ನು ಕೇರಳದ ಸ್ಥಳೀಯ ಮೆಕಾನಿಕ್ ಕೆಎಬಿ ಮೆನನ್ ಎಂಬುವವರು ಅಭಿವೃದ್ಧಿಪಡಿಸಿದರು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ವೃತ್ತಿಪರ ಮೆಕಾನಿಕ್ ಆಗಿದ್ದ ಅವರು ಸ್ವಂತ ಕಾರ್ ಕಂಪನಿಯನ್ನು ಆರಂಭಿಸಿ ತಮ್ಮ ಕನಸಿನ ಕಾರುಗಳನ್ನು ನಿರ್ಮಿಸಿದರು. ಈ ಕಾರು ತಯಾರಿಸಲು ಅವರು ಬೇರೆ ಯಾವ ಕಂಪನಿಯ ನೆರವನ್ನೂ ಸಹ ಪಡೆಯಲಿಲ್ಲ.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಕೆಎಬಿ ಮೆನನ್ ಈ ಕಾರನ್ನು ಭಾರತದ ಸಾಮಾನ್ಯ ನಾಗರಿಕರಿಗಾಗಿ ಪರಿಚಯಿಸಲು ಬಯಸಿದ್ದರು. 1960ರ ದಶಕದಲ್ಲಿ ಭಾರತದಲ್ಲಿದ್ದ ಹೆಚ್ಚಿನ ಕಾರು ಕಂಪನಿಗಳು ಅಮೆರಿಕಾ ಹಾಗೂ ಯುರೋಪಿಗೆ ಸೇರಿದ್ದವು. ಆ ಸಮಯದಲ್ಲಿ ಸಾಮಾನ್ಯ ಭಾರತೀಯನೊಬ್ಬ ಕಾರು ಕಂಪನಿಯನ್ನು ತೆರೆಯುವುದು ದೊಡ್ಡ ವಿಷಯವಾಗಿತ್ತು. ಮಾಡೆಲ್ -3 ಕಾರಿನ ವಿನ್ಯಾಸವು ಅಮೆರಿಕಾದ ಕಾರ್ ಕ್ಯಾಡಿಲಾಕ್'ನಿಂದ ಸ್ವಲ್ಪಮಟ್ಟಿಗೆ ಸ್ಫೂರ್ತಿ ಪಡೆದಿತ್ತು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಮಾಡೆಲ್ 3 ಕಾರು ಉದ್ದವಾದ ಬಾನೆಟ್ ಹಾಗೂ ಅಷ್ಟೇ ಉದ್ದವಾದ ಬೂಟ್ ಸ್ಪೇಸ್ ಹೊಂದಿತ್ತು. ಆ ಸಮಯದಲ್ಲಿ ಅಮೆರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಮಾತ್ರ ಲಭ್ಯವಿದ್ದ ದೊಡ್ಡ ಸೆಡಾನ್ ಕಾರುಗಳ ಗಾತ್ರಕ್ಕೆ ಈ ಕಾರಿನ ಗಾತ್ರವನ್ನು ಹೋಲಿಸಬಹುದಾಗಿತ್ತು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಕಾರಿನ ವಿನ್ಯಾಸ ಸರಳವಾಗಿದ್ದರೂ ಆಕರ್ಷಕವಾಗಿತ್ತು. ಕಾರಿನಲ್ಲಿ ಹೆಡ್‌ಲೈಟ್, ಗ್ರಿಲ್, ವಿಂಡೋ ಜೊತೆಗೆ ಹಲವು ಭಾಗಗಳಲ್ಲಿ ಕ್ರೋಮ್ ಫಿನಿಶಿಂಗ್'ಗಳನ್ನು ನೀಡಲಾಗಿದೆ. ಕಾರಿನ ಮುಂಭಾಗದಲ್ಲಿರುವ ಬಾನೆಟ್‌ನಲ್ಲಿ ಸ್ಯಾಂಡ್ ಕಾಸ್ಟಿಂಗ್'ನಿಂದ ತಯಾರಿಸಿದ ಅರವಿಂದ್ ಲೋಗೋವನ್ನು ಕಾಣಬಹುದು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಮಾಡೆಲ್ 3 ಕಾರಿನಲ್ಲಿ ಫಿಯೆಟ್ ನಿರ್ಮಾಣದ 1100 ಮಾದರಿ ಡೀಸೆಲ್ ಎಂಜಿನ್ ಅನ್ನು ಬಳಸಲಾಗುತ್ತಿತ್ತು. ಈ ಎಂಜಿನ್ ಆ ಸಮಯದಲ್ಲಿ ಹೆಚ್ಚು ಉತ್ತಮವಾದ ಎಂಜಿನ್ ಎಂದು ಪರಿಗಣಿತವಾಗಿತ್ತು. ನಂತರ ಈ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಎಂಜಿನ್ ಅನ್ನು ಬಳಸಲಾಯಿತು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಈ ಕಾರಿನ ಬಹುತೇಕ ಭಾಗಗಳನ್ನು ಅರವಿಂದ್ ಮೋಟಾರ್ಸ್ ಸ್ಥಾವರದಲ್ಲಿ ತಯಾರಿಸಲಾಯಿತು. ಬಂಡವಾಳ ಹೂಡಿಕೆಯ ಕೊರತೆಯಿಂದಾಗಿ ಮೆನನ್ ತಮ್ಮ ವ್ಯವಹಾರವನ್ನು ವಿಸ್ತರಿಸಲು ತೊಂದರೆ ಎದುರಿಸಿದರು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

1970ರ ದಶಕದ ಆರಂಭದಲ್ಲಿ ಧನ ಸಹಾಯಕ್ಕಾಗಿ ಮೆನನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಜೊತೆಗೆ ಕಂಪನಿಯನ್ನು ವಿಸ್ತರಿಸಲು ಪರವಾನಗಿ ಕೋರಿದರು. ಆದರೆ ಸರ್ಕಾರವು ಅರವಿಂದ ಮೋಟಾರ್ಸ್ ಅನ್ನು ನಿರ್ಲಕ್ಷಿಸಿ ಮಾರುತಿ ಕಂಪನಿಗೆ ಪರವಾನಗಿ ನೀಡಿತು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಕೇಂದ್ರ ಸರ್ಕಾರದ ಈ ನಿರ್ಧಾರವು ಸ್ವದೇಶಿ ಕನಸಿನ ಹಲವು ಆಟೋ ಕಂಪನಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಪರಿಣಾಮವಾಗಿ ಹಲವಾರು ಹೊಸದಾಗಿ ಆರಂಭಬೇಕಿದ್ದ ಭಾರತೀಯ ಆಟೋ ಕಂಪನಿಗಳು ಕದಮುಚ್ಚಿದವು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಅರವಿಂದ ಮೋಟಾರ್ಸ್ ಸಹ ಇದೇ ಸಂಕಷ್ಟಕ್ಕೆ ಒಳಾಗಿ ಉದ್ಯಮವನ್ನು ಮುಂದುವರಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಸ್ಥಗಿತಗೊಂಡಿತು. ಸದ್ಯ ಉಳಿದಿರುವ ಒಂದೇ ಒಂದು ಮಾಡೆಲ್ 3 ಕಾರನ್ನು ಮೆನನ್ ಅವರ ಮೊಮ್ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಮಾಡೆಲ್ -3 ಕಾರನ್ನು ಆ ಸಮಯದಲ್ಲಿ ರೂ.5 ಸಾವಿರಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಕಾರು ತಿರುವನಂತಪುರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಈ ಕಾರನ್ನು ಹಲವು ಚಿತ್ರ ನಟರು ಸಹ ಖರೀದಿಸಿದ್ದರು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಕಡಿಮೆ ಮಾರಾಟ ಹಾಗೂ ಹೂಡಿಕೆಯ ಕೊರತೆಯಿಂದಾಗಿ 1971ರಲ್ಲಿ ಅರವಿಂದ್ ಮೋಟಾರ್ಸ್ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಅದೇ ವರ್ಷ ಕೆಎಬಿ ಮೆನನ್ ಹೃದಯಾಘಾತದಿಂದ ನಿಧನರಾದರು.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಮೆನನ್ ಅವರ ನಂತರ ಅವರ ಪತ್ನಿ ಅರವಿಂದ್ ಮೋಟಾರ್ಸ್ ಕಂಪನಿಯ ವ್ಯವಹಾರವನ್ನು ನೋಡಿಕೊಳ್ಳಲು ಆರಂಭಿಸಿದರು. ಮೆನನ್ ಮರಣಾನಂತರ ಅರವಿಂದ್ ಮೋಟಾರ್ಸ್ ಕಂಪನಿಯು ಹಂತವಾಗಿ ಸಂಪೂರ್ಣವಾಗಿ ಮುಚ್ಚಿಹೊಗಿದೆ.

ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಕಾರು

ಕೆಲವು ಮಾಹಿತಿಗಳ ಪ್ರಕಾರ, ಅರವಿಂದ್ ಮೋಟಾರ್ಸ್ ಕಂಪನಿಗೆ ಮರು ಚಾಲನೆ ನೀಡಬೇಕೆಂಬ ಪ್ರಯತ್ನಗಳು ನಡೆಯುತ್ತಿದ್ದು, ಈ ಬಾರಿಗೆ ಕಂಪನಿಯು ಎಲೆಕ್ಟ್ರಿಕ್ ಕಾರಿಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಬರಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ.

Most Read Articles

Kannada
English summary
Aravind Model 3 India's first indigenous car and its story. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X