ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಹಾರುವ ಟ್ಯಾಕ್ಸಿಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿವೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಹಲವಾರು ಕಂಪನಿಗಳು ಕಮರ್ಷಿಯಲ್ ಆಗಬಹುದಾದ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಇತ್ತೀಚಿಗೆ ಅಮೆರಿಕಾ ಮೂಲದ ಆರ್ಚರ್ ಏವಿಯೇಷನ್ ತನ್ನ ಮೇಕರ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಪ್ರದರ್ಶಿಸಿತು. ಈ ಮೂಲಕ ಆರ್ಚರ್ ಏವಿಯೇಷನ್ ​​ತನ್ನ ಹಾರುವ ಟ್ಯಾಕ್ಸಿಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಫ್ಲೈಯಿಂಗ್ ಟ್ಯಾಕ್ಸಿ ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಈ ಫ್ಲೈಯಿಂಗ್ ಟ್ಯಾಕ್ಸಿಯನ್ನು ಶೀಘ್ರದಲ್ಲೇ ಸಂಚಾರಕ್ಕಾಗಿ ಬಳಸಬಹುದು. ಈ ಫ್ಲೈಯಿಂಗ್ ಟ್ಯಾಕ್ಸಿ ಅತಿ ವೇಗದ ಸಂಚಾರ ಮಾರ್ಗವಾಗಿದೆ. ಒಮ್ಮೆ ಇಂಧನ ತುಂಬಿಸಿದ ಬಳಿಕ ಈ ಫ್ಲೈಯಿಂಗ್ ಟ್ಯಾಕ್ಸಿ ನಾಲ್ಕು ಪ್ರಯಾಣಿಕರೊಂದಿಗೆ 100 ಕಿ.ಮೀ ಹಾರಾಡಬಲ್ಲದು.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಮೇಕರ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ತಯಾರಿಸಿರುವ ಆರ್ಚರ್ ಏವಿಯೇಷನ್ ಸದ್ಯಕ್ಕೆ ಕಮರ್ಷಿಯಲ್ ವಾಯುಯಾನ ಕ್ಷೇತ್ರದಲ್ಲಿಲ್ಲ. ಆದರೆ ಕಂಪನಿಯು ಈ ಫ್ಲೈಯಿಂಗ್ ಟ್ಯಾಕ್ಸಿಯ ಮೂಲಕ ಈ ಉದ್ಯಮಕ್ಕೆ ಪಾದಾರ್ಪಣೆ ಮಾಡಲಿದೆ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಕಮರ್ಷಿಯಲ್ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ನಗರಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಸಾಗಣೆಗೆ ಬಳಸುವ ಗುರಿಯನ್ನು ಹೊಂದಲಾಗಿದೆ ಎಂದು ಆರ್ಚರ್ ಏವಿಯೇಷನ್ ​​ಹೇಳಿದೆ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಫ್ಲೈಯಿಂಗ್ ಟ್ಯಾಕ್ಸಿಗಳು ಇಂಟರ್ ಸಿಟಿ ಸಾರಿಗೆಗೆ ಆಯ್ಕೆಯಾಗುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

4 ಡಾಲರ್ ಪಾವತಿಸುವ ಮೂಲಕ ಈ ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಒಂದು ಮೈಲಿ ಪ್ರಯಾಣಿಸಬಹುದು ಎಂದು ಆರ್ಚರ್ ಏವಿಯೇಷನ್ ಕಂಪನಿ ಹೇಳಿದೆ. ಈ ದರವು ತುಂಬಾ ಆರ್ಥಿಕವಾಗಿಲ್ಲ.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಆದರೆ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗುವವರು ಅಥವಾ ಇನ್ನಿತರ ತುರ್ತು ಕೆಲಸಗಳಿಗೆ ಹೋಗುವವರು ಈ ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಉಳಿಸಬಹುದು.

ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ

ಆರ್ಚರ್ ಏವಿಯೇಷನ್ ​​2024ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್ ಹಾಗೂ ಮಿಯಾಮಿ ನಗರಗಳಲ್ಲಿ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಕಮರ್ಷಿಯಲ್ ಆಗಿ ಆರಂಭಿಸುವ ನಿರೀಕ್ಷೆಗಳಿವೆ. ಸರ್ಕಾರದಿಂದ ಫ್ಲೈಯಿಂಗ್ ಟ್ಯಾಕ್ಸಿಗಳಿಗೆ ಪರವಾನಗಿ ಪಡೆಯಲು ಸ್ವಲ್ಪ ತಡವಾಗಬಹುದು ಎಂದು ಕಂಪನಿ ಹೇಳಿದೆ.

Most Read Articles

Kannada
English summary
Archer Aviation showcases Maker flying taxi in America. Read in Kannada.
Story first published: Friday, June 11, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X