ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಭಾರತದಲ್ಲಿ ಹೆಚ್ಚಾಗುತ್ತಿರುವ ಇಂಧನ ಮೇಲಿನ ಅವಲಂಬನೆ ಹಾಗೂ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಣಕ್ಕೆ ತರಲು ಇರುವ ಪರಿಣಾಮಕಾರಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ಮೊದಲ ಆಯ್ಕೆಯಾಗಿದೆ. ಹಾಗಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಇದು ಕೇವಲ ಆಯಾ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ಮಾತ್ರವಲ್ಲದೇ ಬಾರ್ಡರ್‌ಗಳಲ್ಲಿನ ಸೈನಿಕರಿಗೂ ಅಗತ್ಯವಾಗಿದೆ. ಹಾಗಾಗಿ ಭಾರತೀಯ ಸೈನ್ಯದಲ್ಲಿನ ಆಯ್ದ ಘಟಕಗಳಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಖರೀದಿಸಲು ಭಾರತೀಯ ಸೇನೆ ನಿರ್ಧರಿಸಿದೆ ಎಂದು ಉನ್ನತ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಯೋಜನೆಯ ಪ್ರಕಾರ, ಆಯ್ದ ಘಟಕಗಳಲ್ಲಿ ಶೇ 25 ರಷ್ಟು ಲಘು ವಾಹನಗಳು, ಶೇ 38 ರಷ್ಟು ಬಸ್‌ಗಳು ಮತ್ತು ಶೇಕಡಾ 48 ರಷ್ಟು ಮೋಟಾರ್‌ಸೈಕಲ್‌ಗಳನ್ನು ಖರೀದಿಸಲು ಸೇನೆ ಸಜ್ಜಾಗಿದೆ. ಮುಂಬರುವ ದಿನಗಳಲ್ಲಿ ಸಮಯಕ್ಕೆ ಅನುಗುಣವಾಗಿ ಈಗಾಗಲೇ ಇರುವ ಇಂಧನ ಚಾಲಿತ ವಾಹನಗಳಿಗೆ ಬದಲಿಯಾಗಿ ಎಲೆಕ್ಟ್ರಿಕ್ ವಾಹನಗಳನ್ನು ತರಲಾಗುತ್ತದೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಇವಿ ವಾಹನಗಳನ್ನು ಖರೀದಿಸುವ ಮುನ್ನ ಭಾರತೀಯ ಸೇನೆಯ ಉದ್ಯೋಗಶೀಲತೆ, ಕಾರ್ಯ ನಿರ್ವಹಿಸುವ ದೂರದ ಸ್ಥಳಗಳು ಮತ್ತು ಕಾರ್ಯಾಚರಣೆಯ ಸಂದರ್ಭಗಳಲ್ಲಿ ಬಳಸಬಹುದಾದ ವಾಹನ ವಿಧಗಳನ್ನು ಪರಿಗಣಿಸಲಾಗಿದ್ದು, ಇದರ ಆಧರದ ಮೇಲೆ ಯಾವೆಲ್ಲಾ ವಾಹನಗಳ ಅಗತ್ಯವಿದೆ ಎಂಬುದನ್ನು ನೋಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಭಾರತೀಯ ಸೇನೆಯು ಹಳೆಯ ಇಂಧನ ಚಾಲಿತ ವಾಹನಗಳ ಬಳಕೆಯಿಂದ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ, ಸೇನೆಯಲ್ಲಿ ಸಾಧ್ಯವಿರುವಲ್ಲೆಲ್ಲಾ ಇವಿಗಳನ್ನು ಸೇರಿಸಲು ಮಾರ್ಗಸೂಚಿಯನ್ನು ಯೋಜಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ತರುವುದೇನೋ ಸುಲಭ ಆದರೆ ಇಲ್ಲಿ ಮುಖ್ಯವಾಗಿ ಬೇಕಿರುವುದು ಅವುಗಳ ಚಾರ್ಜಿಂಗ್ ವ್ಯವಸ್ಥೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸೇನಾ ಘಟಕಗಳಲ್ಲಿ ಕಾರ್ಯಸಾಧ್ಯವಾದ EV ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಸಲುವಾಗಿ, EV ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಂತೆ ಅಗತ್ಯ ಬೆಂಬಲ ಮೂಲಸೌಕರ್ಯವನ್ನು ಕಲ್ಪಿಸಲು ಸಜ್ಜಾಗಿದೆ. ಇದಕ್ಕಾಗಿ ಈಗಾಗಲೇ ಹಲವೆಡೆ ಸೇನಾ ಸ್ಥಳಗಳನ್ನು ಗುರ್ತಿಸಿರುವುದಾಗಿ ತಿಳಿದುಬಂದಿದೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಈ EV ಚಾರ್ಜಿಂಗ್ ಸ್ಟೇಷನ್‌ಗಳು ಕನಿಷ್ಠ ಒಂದು ವೇಗದ ಚಾರ್ಜರ್ ಮತ್ತು ಎರಡರಿಂದ ಮೂರು ನಿಧಾನ ಚಾರ್ಜರ್‌ಗಳನ್ನು ಹೊಂದಿರುತ್ತದೆ. ಎಲೆಕ್ಟ್ರಿಕ್ ಸರ್ಕ್ಯೂಟ್ ಕೇಬಲ್‌ಗಳು, ಪ್ರತಿ ನಿಲ್ದಾಣದ ನಿರೀಕ್ಷಿತ ಸಂಖ್ಯೆಯ EV ಗಳ ಆಧಾರದ ಮೇಲೆ ಸಾಕಷ್ಟು ಲೋಡ್ ಬೇರಿಂಗ್ ಸಾಮರ್ಥ್ಯದೊಂದಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಜಾರಿಗೆ ತರಲಾಗುವುದು ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಎಲೆಕ್ಟ್ರಿಕ್ ಚಾರ್ಜಿಂಗ್ ಜೊತೆಜೊತೆಯಾಗಿ ಸೈನ್ಯವು ಸೋಲಾರ್ ಪ್ಯಾನಲ್ ಚಾಲಿತ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ, ಇವುಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಯಾವುದೇ ಸಂದರ್ಭದಲ್ಲೂ ಸೈನಿಕರಿಗೆ ಅಗತ್ಯವಿದ್ದಲ್ಲಿ ಕೂಡಲೇ ಸ್ಥಳೀಯವಾಗಿ ಚಾರ್ಜಿಂಗ್ ಸ್ಟೇಷನ್ ಸಿಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಸೇನೆಯು ರಾಜಧಾನಿ ಮಾರ್ಗದ ಮೂಲಕ ಇವಿಗಳನ್ನು ಸಂಗ್ರಹಿಸುತ್ತಿದೆ. ಈ ಯೋಜನೆಗಳ ಪ್ರಕಾರ, ಆರಂಭಿಕವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಮೂಲಕ ಅಸ್ತಿತ್ವದಲ್ಲಿರುವ ಬಸ್‌ಗಳ ಕೊರತೆಯನ್ನು ನಿರ್ಮೂಲಿಸಲಾಗುತ್ತದೆ. ನಂತರ 24 ಫಾಸ್ಟ್ ಚಾರ್ಜರ್‌ಗಳ ಜೊತೆಗೆ 60 ಬಸ್‌ಗಳ ಖರೀದಿಗೆ ಆರಂಭಿಕ ಟೆಂಡರ್ ಅನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಅವರು ಹೇಳಿದರು.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಸರ್ಕಾರವು ಅಳವಡಿಸಿಕೊಳ್ಳುತ್ತಿರುವ ಎಲೆಕ್ಟ್ರಿಕ್ ವಾಹನಗಳ ವೇಗವನ್ನು ಪರಿಗಣಿಸಿ ಹಾಗೂ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಪರಿಗಣಿಸಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುವುದು ಅವಶ್ಯಕವಾಗಿದೆ. ಇದಕ್ಕೆ ಸೇನೆಯಿಂದಲೂ ಸಹಕಾರವಾಗಬೇಕಿದೆ ಎಂದು ಸೇನಾಧಿಕಾರಿ ಹೇಳಿದರು.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಕಳೆದ ಏಪ್ರಿಲ್‌ನಲ್ಲಿ ಭಾರತೀಯ ಸೇನೆಯು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪ್ರಸ್ತುತ ಲಭ್ಯವಿರುವ ದೇಶೀಯ ಇವಿಗಳ ಪ್ರದರ್ಶನವನ್ನು ಆಯೋಜಿಸಿತ್ತು. ಅಲ್ಲಿ ಇವಿ ತಯಾರಕರಾದ ಟಾಟಾ ಮೋಟಾರ್ಸ್, ಪರ್ಫೆಕ್ಟ್ ಮೆಟಲ್ ಇಂಡಸ್ಟ್ರೀಸ್ (ಪಿಎಂಐ) ಮತ್ತು ರಿವೋಲ್ಟ್ ಮೋಟಾರ್ಸ್ ತಮ್ಮ ಇವಿಗಳನ್ನು ಪ್ರದರ್ಶಿಸಿದ್ದರು.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಆ ಸಂಧರ್ಭದಲ್ಲಿ ನಡೆದ ಸೇನಾ ಕಮಾಂಡರ್‌ಗಳ ಸಭೆಯಲ್ಲಿ, ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಸಿಂಗ್ ಯಾದವ್ ಅವರು ಸೇನಾ ಮುಖ್ಯಸ್ಥರು, ಕಮಾಂಡರ್‌ಗಳು ಮತ್ತು ಹಿರಿಯ ಸೇನಾ ಅಧಿಕಾರಿಗಳಿಗೆ ಇವಿಗಳ ಯೋಜಿತ ಪರಿಚಯದ ಕುರಿತು ವಿವರಿಸಿದ್ದರು. ಬಳಿಕ ಕಾರು, ಬಸ್‌ ಮತ್ತು ಮೋಟಾರ್‌ಸೈಕಲ್‌ಗಳು ಒಳಗೊಂಡ ಮೂರು ವಿಭಾಗಗಳಲ್ಲಿ EV ಗಳನ್ನು ಸ್ವಾಧೀನಪಡಿಸಿಕೊಳ್ಳಲು ಚರ್ಚಿಸಿದ್ದರು.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಭಾರತೀಯ ಸೇನೆಯಲ್ಲಿ ಇವಿಗಳನ್ನು ಅಳವಡಿಸಿಕೊಳ್ಳಲು ನಿರ್ದಿಷ್ಟ ವೇಳಾಪಟ್ಟಿಯನ್ನು ಅಭಿವೃದ್ಧಿಪಡಿಸಲು ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಸಿಂಗ್ ಯಾದವ್, ಪೂರೈಕೆ ಮತ್ತು ಸಾರಿಗೆ (ಡಿಜಿಎಸ್‌ಟಿ) ಮಹಾನಿರ್ದೇಶಕರೊಂದಿಗೆ ಈ ಅಧಿಕಾರಿಗಳ ಮಂಡಳಿಯನ್ನು ರಚಿಸಿ ನಿರ್ದೇಶಿಸಿದ್ದರು.

ಮಾಲಿನ್ಯ ನಿಯಂತ್ರಣದಲ್ಲೂ ಸೇನೆಯ ದೇಶ ಸೇವೆ: ಇವಿಗಳ ಖರೀದಿಗೆ ಸಜ್ಜಾದ ಇಂಡಿಯನ್ ಆರ್ಮಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಇವಿ ಕಂಪನಿಗಳಾದ ಟಾಟಾ ಮೋಟಾರ್ಸ್, ಪರ್ಫೆಕ್ಟ್ ಮೆಟಲ್ ಇಂಡಸ್ಟ್ರೀಸ್ (ಪಿಎಂಐ) ಮತ್ತು ರಿವೋಲ್ಟ್ ಮೋಟಾರ್ಸ್ ದೇಶ ಸೇವೆಗೆ ಉನ್ನತ ಮಟ್ಟದ ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸುವ ಸಾಧ್ಯತೆಗಳಿವೆ. ಇವೆಲ್ಲವೂ ಸಾಮಾನ್ಯ ಎಲೆಕ್ಟ್ರಿಕ್ ವಾಹನಗಳಂತಲ್ಲದೇ ಸೈನಿಕರ ಕಾರ್ಯಾಚರಣೆಗೆ ಅನುಗುಣವಾಗಿ ಹೆಚ್ಚು ಪವರ್‌ಫುಲ್ ಆಗಿ ಇರಲಿವೆ. ಭಾರತೀಯ ಸೇನೆಗೆ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Friday, October 14, 2022, 12:01 [IST]
English summary
Armys national service in pollution control Indian army set to buy electric vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+