ದಂಪತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದವನ ಬಂಧನ... BMW X5ನಲ್ಲಿ ಪತ್ತೆಯಾಯ್ತು ಮದ್ಯದ ಬಾಟಲಿ

ಗುಜರಾತ್‌ ರಾಜ್ಯದಲ್ಲಿನ ಅಹಮದಾಬಾದ್‌ನ ಸೋಲಾದಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದ ಸಂಬಂಧ ಬಿಎಂಡಬ್ಲ್ಯು ಎಕ್ಸ್5 ಐಷಾರಾಮಿ ಎಸ್‌ಯುವಿ ಚಾಲಕ ಸತ್ಯಂ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ಅಧಿಕಾರಿಗಳ ಪ್ರಕಾರ, 21 ವರ್ಷದ ಆರೋಪಿಯನ್ನು ರಾಜಸ್ಥಾನದ ಡುಂಗರ್‌ಪುರದಲ್ಲಿ ಬಂಧಿಸಲಾಗಿದೆ.

ಇಲ್ಲಿನ ಬಿಆರ್ ಪಾರ್ಕ್ ಕ್ರಾಸ್‌ರೋಡ್ಸ್ ಬಳಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ದಂಪತಿಯನ್ನು ಬಿಎಂಡಬ್ಲ್ಯು ಎಸ್‌ಯುವಿಯಲ್ಲಿ ಡಿಕ್ಕಿ ಹೊಡೆದಿದ್ದ. ಥಲ್ತೇಜ್‌ನ ಸಹಜಾನಂದ ಪ್ಯಾಲೇಸ್ ನಿವಾಸಿಯಾಗಿರುವ ಆರೋಪಿ ಸತ್ಯಂ ಶರ್ಮಾ ಡುಂಗರ್‌ಪುರದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಪರಾಧ ವಿಭಾಗದ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ತಪ್ಪಿಸಿಕೊಳ್ಳಲು ಮಾಡಿದ್ದ ಖತರ್ನಾಕ್ ಪ್ಲಾನ್‌ಗಳ ಬಗ್ಗೆ ತಿಳಿದುಬಂದಿದೆ.

ದಂಪತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದವನ ಬಂಧನ... BMW X5ನಲ್ಲಿ ಪತ್ತೆಯಾಯ್ತು ಮದ್ಯದ ಬಾಟಲಿ

ಆರೋಪಿಯು ಅಪಘಾತದ ಸ್ಥಳದಿಂದ ಪರಾರಿಯಾದ ನಂತರ ಸೋಲಾದ ನೀಲಗಿರಿ ಅಪಾರ್ಟ್‌ಮೆಂಟ್ ಬಳಿ ತನ್ನ ಕಾರನ್ನು ಬಿಟ್ಟು, ಪೊಲೀಸರಿಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಡುಂಗರ್‌ಪುರಕ್ಕೆ ಬಸ್ಸನ್ನು ಹಿಡಿದಿರುವುದು ವಿಚಾರಣೆಯಲ್ಲಿ ಬಯಲಾಗಿದೆ. ಸತ್ಯಂ ಶರ್ಮಾ ಅಹಮದಾಬಾದ್ ನಗರದ ಬಿಲ್ಡರ್ ಒಬ್ಬರ ಮಗನಾಗಿದ್ದು, ಈಗಾಗಲೇ ಈತ ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಒಮ್ಮೆ ಕುಡಿದ ಅಮಲಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಅಲ್ಲದೆ ಪಾನ್ ಶಾಪ್ ಧ್ವಂಸ ಮಾಡಿದ್ದಕ್ಕಾಗಿ ಪ್ರಕರಣ ಕೂಡ ದಾಖಲಾಗಿತ್ತು.

BMW X5 SUV ಡಿಕ್ಕಿ:
ಅಹಮದಾಬಾದ್‌ನ ಸೋಲಾದಲ್ಲಿನ ಬಿಆರ್ ಪಾರ್ಕ್ ಕ್ರಾಸಿಂಗ್ ಬಳಿಯ ವೇದಾಂತ್ ಶ್ರೀಜಿ ನಿವಾಸಿಯಾಗಿರುವ ದೂರುದಾರ ಅಮಿತ್ ಸಿಂಘಾಲ್ (44) ಅವರು ಎನ್ ಡಿವಿಷನ್ ಟ್ರಾಫಿಕ್ ಪೊಲೀಸರಿಗೆ ನೀಡಿದ ಎಫ್‌ಐಆರ್‌ನಲ್ಲಿ, ಅವರು ಮತ್ತು ಅವರ ಪತ್ನಿ ಮೇಘನಾ (40) ಇಬ್ಬರೂ ಬುಧವಾರ ರಾತ್ರಿ 9.30 ರ ಸುಮಾರಿಗೆ ಹತ್ತಿರದ ಪಾರ್ಟಿ ಸ್ಥಳದಲ್ಲಿ ತಮ್ಮ ಮಗುವಿಗೆ ಆಟಿಕೆಯನ್ನು ಖರೀದಿಸಲು ಮನೆಯಿಂದ ಹೊರಟಿದ್ದರು.

ದಂಪತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದವನ ಬಂಧನ... BMW X5ನಲ್ಲಿ ಪತ್ತೆಯಾಯ್ತು ಮದ್ಯದ ಬಾಟಲಿ

ಈ ವೇಳೆ ಬಿಆರ್ ಪಾರ್ಕ್‌ನ ದಿಕ್ಕಿನಲ್ಲಿ ರೈಲ್ವೇ ಓವರ್ ಬ್ರಿಡ್ಜ್‌ನಿಂದ ವಾಹನ ವೇಗವಾಗಿ ಬಂದು ಇಬ್ಬರಿಗೂ ಡಿಕ್ಕಿ ಹೊಡೆದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ತಮ್ಮ ಕಾಲು ಮತ್ತಿತರ ಭಾಗಗಳಲ್ಲಿ ಗಾಯಗಳಾಗಿವೆ, ನನ್ನ ಪತ್ನಿ ಕಾಲು ಮತ್ತು ಸೊಂಟಕ್ಕೆ ತೀರ್ವ ಪೆಟ್ಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡಿಕ್ಕಿಯಾದ ಸ್ಥಳದಿಂದ ಕಾರು ಪಲಾಯನಗೈದು ಇಲ್ಲಿನ ಶುಕನ್ ಮಾಲ್ ಜಂಕ್ಷನ್ ಕಡೆಗೆ ಹೋಗುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ದೂರುದಾರರು ಬಹಿರಂಗಪಡಿಸಿದ್ದಾರೆ.

ನಂತರ ಅವರನ್ನು ಆಂಬುಲೆನ್ಸ್‌ನಲ್ಲಿ ನೆರೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಸ್ಥಳದಲ್ಲಿದ್ದ ಕೆಲವರು ಕಾರನ್ನು ಹಿಂಬಾಲಿಸಲು ಪ್ರಯತ್ನಿಸಿದರು, ಆದರೆ ಒಂದು ಕಿ.ಮೀ ಪ್ರಯಾಣಿಸಿದ ನಂತರ ಸತ್ಯಂ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಅಪಘಾತದ ನಂತರ ಶರ್ಮಾ ಬಿಟ್ಟೋಗಿದ್ದ ಕಾರಿನಲ್ಲಿ ಗ್ಲಾಸ್‌ಗಳು ಮತ್ತು ವಿಸ್ಕಿ ಬಾಟಲಿಗಳು ಸಿಕ್ಕಿರುವುದಾಗಿ ವರದಿಯಾಗಿದೆ. ಆರೋಪಿಯು ಈ ಹಿಂದೆ ತನ್ನ ಕಾರಿನ್ನು 150 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಓಡಿಸಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ದಂಪತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದವನ ಬಂಧನ... BMW X5ನಲ್ಲಿ ಪತ್ತೆಯಾಯ್ತು ಮದ್ಯದ ಬಾಟಲಿ

ಹೆಚ್ಚುವರಿ ಅಪರಾಧಗಳ ಜೊತೆಗೆ ಇನ್ನೊಬ್ಬ ವ್ಯಕ್ತಿಯ ಜೀವ ಅಥವಾ ವೈಯಕ್ತಿಕ ಸುರಕ್ಷತೆಯನ್ನು ಪಣಕ್ಕಿಟ್ಟು ತೀವ್ರತರವಾದ ಗಾಯಗಳನ್ನು ಉಂಟುಮಾಡುವ ಪ್ರಾಥಮಿಕ ಪ್ರಕರಣವನ್ನು ದಾಖಲಿಸಲಾಗಿದೆಯಾದರೂ, ಆರೋಪಿಯ ಮೇಲೆ ಯಾವ ಆರೋಪಗಳನ್ನು ಹಾಕಲಾಗುವುದು ಎಂದು ಇನ್ನೂ ವರದಿಯಾಗಿಲ್ಲ. ವ್ಯಕ್ತಿಯ ಮೇಲೆ ಕೋಡ್ ಮತ್ತು ಮೋಟಾರು ವಾಹನ ಕಾಯ್ದೆಯನ್ನು ವಿಧಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಮುಂಬರುವ ದಿನಗಳಲ್ಲಿ ಹೊರಬರಲಿದ್ದು, ಆರೋಪಿ ವಿರುದ್ಧ ಯಾವೆಲ್ಲಾ ಕ್ರಮ ಕೈಗೊಂಡಿದ್ದಾರೆ ತಿಳಿಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 9, 2023, 12:16 [IST]
English summary
Arrest of the hit and run accused in gujarat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+