ಬೆಂಗಳೂರಿನಲ್ಲಿ ಅನಕೊಂಡ ಪ್ರತ್ಯಕ್ಷ; ಫೇಸ್‌ಬುಕ್‌ನಲ್ಲಿ ಮಿಂಚಿದ ಟಾಪ್ 10 ಲೇಖನ
ವರ್ಷಾಂತ್ಯ ಆಗಮನವಾಗುತ್ತಿರುವಂತೆಯೇ ಕಳೆದೂಂದು ವರ್ಷದ ಆಗು ಹೋಗುಗಳ ಬಗ್ಗೆ ಪುನ: ಅವಲೋಕಿಸುವ ಕಾಲ ಹತ್ತಿರ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕನ್ನಡ ಡ್ರೈವ್ ಸ್ಪಾರ್ಕ್ ಸುದ್ದಿಗಳನ್ನು ಫೇಸ್ ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗುತ್ತದೆ.
ಹೀಗೆ ಕಳೆದೊಂದು ವರ್ಷದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ವ್ಯಾಪಿಸಿರುವ ಟಾಪ್ 10 ಲೇಖನಗಳ ಬಗ್ಗೆ ನಾವಿಂದು ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ನಮ್ಮ ಚಿತ್ರಪುಟದತ್ತ ಭೇಟಿ ಕೊಡಿರಿ.

10. 'ಬಾಹುಬಲಿ' ಸೂಪರ್ ಹಿಟ್; ಪ್ರಭಾಸ್ ಅದೃಷ್ಟ ಖುಲಾಯಿಸಿತೇ?
10ನೇ ಸ್ಥಾನದಲ್ಲಿರುವ ಬಾಹುಬಲಿ ಚಿತ್ರದ ಹೀರೊ ಪ್ರಭಾಸ್ ಅವರ ನೂತನ ಕಾರು ಜಾಗ್ವಾರ್ ಎಕ್ಸ್ ಜೆ ಐಷಾರಾಮಿ ಕಾರಿನ ಸುದ್ದಿಯು 6,142 ಮಂದಿಯನ್ನು ತಲುಪುವ ಮೂಲಕ ಗಮನ ಸೆಳೆದಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

09. ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ
ಅತ್ಯಂತ ಬಲಿಷ್ಠ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ವಾಹನವನ್ನು ಖರೀದಿಸಿರುವ ದೇಶದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಓರ್ವರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಖೇಶ್ ಅಂಬಾನಿ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮವಾಗಿ ನಿಂತಿರುವುದು ಬಹಳಷ್ಟು ಕ್ರೇಜ್ ಹುಟ್ಟಿಸಿತ್ತು. ಪ್ರಸ್ತುತ ಸುದ್ದಿ 7,032 ಮುಂದಿಯನ್ನು ತಲುಪಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

08. ಮಹೀಂದ್ರ ಹೊಸ ಎಸ್‌ಯುವಿ
ಇನ್ನಷ್ಟೇ ಮಾರುಕಟ್ಟೆ ತಲುಪಬೇಕಾಗಿರುವ ಮಹೀಂದ್ರದ ನೂತನ ಮಿನಿ ಎಸ್‌ಯುವಿ ಈಗಾಗಲೇ ವಾಹನ ಪ್ರೇಮಿಗಳಲ್ಲಿ ಬಹಳಷ್ಟು ಕುತೂಹಲವನ್ನುಂಟು ಮಾಡಿದೆ. 7,301 ಜನರನ್ನು ತಲುಪಿರುವ ಈ ಲೇಖನವೇ ಇದನ್ನು ಸಾರಿ ಸಾರಿ ಹೇಳುತ್ತಿದೆ. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

07. ಅಂಬಾನಿ ಶತಕೋಟಿಯ ಬಂಗಲೆಯಲ್ಲಿ ಏನೇನಿದೆ?
8,092 ಓದುಗರನ್ನು ತಲುಪಿರುವ ಮುಖೇಶ್ ಅಂಬಾನಿ ಅವರ ವಿಶ್ವದ ಎರಡನೇ ವೈಭವೋಪೇತ ಬಂಗಲೆಯಲ್ಲಿ 160ರಷ್ಟು ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

06. ಮಗನಿಗೆ ಡಿವಿಎಸ್ ಬೆಲೆಬಾಳುವ ಉಡುಗೊರೆ
ಉದ್ಯಮಿ ಕೂಡಕಂಡಿ ನಾಣಯ್ಯ ಅವರ ಪುತ್ರಿ ರಾಜಶ್ರೀ ಅವರನ್ನು ವರಿಸಿರುವ ಪುತ್ರ ಕಾರ್ತಿಕ್ ಗೌಡ ಅವರಿಗೆ ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಇತ್ತೀಚೆಗಷ್ಟೇ ಕೋಟಿ ಬೆಲೆಬಾಳುವ ಆಡಿ ಎ6 ಕಾರನ್ನು ಉಡುಗೊರೆಯಾಗಿ ನೀಡಿರುವುದು ವಾಹನ ಲೋಕದಲ್ಲೂ ಭಾರಿ ಪ್ರಚಾರ ಮೂಡಿಸಿತ್ತಲ್ಲದೆ 10,463 ಮಂದಿಯನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

05. ಬಿಎಂಟಿಸಿ ಬಂದ್
ಕೇಂದ್ರ ಸರಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು 2015 ಸೆಪ್ಟೆಂಬರ್ 02 ಬುಧವಾರದಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನಮ್ಮ ಫೇಸ್ ಬುಕ್ ಪುಟದಲ್ಲೂ ವ್ಯಾಪಕವಾಗಿ ಪಸರಿಸಿತ್ತಲ್ಲದೆ 12,623 ಮಂದಿಯನ್ನು ತಲುಪಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

04. 'ದೊಡ್ಮನೆ ಹುಡುಗ' ಪುನೀತ್ ಸೂಪರ್ ಬೈಕ್ ಕರಾಮತ್ತು
ಮೊದಲೇ ಬೈಕ್ ಕ್ರೇಜ್ ಹೊಂದಿರುವ 'ದೊಡ್ಮನೆ ಹುಡುಗ' ಪುನೀತ್ ರಾಜ್ ಕುಮಾರ್ ಹಾರ್ಲೆ ಡೇವಿಡ್ಸನ್ ಸೂಪರ್ ಬೈಕ್ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಪ್ರಸ್ತುತ ಪೋಸ್ಟ್ 13,496 ಮಂದಿಯನ್ನು ತಲುಪಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

03. ಅನುಷ್ಕಾಗೆ ಕೈಕೊಟ್ಟ ಕೊಹ್ಲಿ?
ಈ ನಡುವೆ ತಮ್ಮ ನೆಚ್ಚಿನ ಆಡಿ ಬ್ರಾಂಡ್‌ನ ಐಷಾರಾಮಿ ಎ8ಎಲ್ ಡಬ್ಲ್ಯು12 ಕಾರನ್ನು ಖರೀದಿಸಿರುವ ಕೊಹ್ಲಿ ಡೇಟಿಂಗ್ ಮಾಡಿಕೊಂಡಿರುವುದು ಹೆಚ್ಚಿನ ಗಮನ ಸೆಳೆಯಲು ಸಾಧ್ಯವಾಗಿತ್ತು. ಪ್ರಸ್ತುತ ಸುದ್ದಿಯು 18,373 ಮಂದಿಯನ್ನ ತಲುಪಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

02. ಶಿವಣ್ಣ ಮಗಳಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಪುತ್ರಿ ಡಾ. ನಿರುಪಮಾ ಹಾಗೂ ಅಳಿಯ ಡಾ. ದಿಲೀಪ್ ದಂಪತಿಗೆ 50 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಬಿಎಂಡಬ್ಲ್ಯು 3 ಸಿರೀಸ್ ಕಾರನ್ನು ಉಡುಗೊರೆಯಾಗಿ ನೀಡಿರುವುದು ಅತಿ ಹೆಚ್ಚು ಸುದ್ದಿಗೆ ಪಾತ್ರವಾಗಿತ್ತು. ಪ್ರಸ್ತುತ ಸುದ್ದಿ 32,428 ಜನರನ್ನು ತಲುಪಿತ್ತು. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

01. ಬೆಂಗಳೂರು ಅನಕೊಂಡ ಪ್ರತ್ಯಕ್ಷ
40,426 ಮಂದಿಯನ್ನು ತಲುಪಿರುವ ಬೆಂಗಳೂರಿನಲ್ಲಿ ಅನಕೊಂಡ ಪ್ರತ್ಯಕ್ಷಗೊಂಡಿರುವ ಸುದ್ದಿಯು ನಗರದ್ಯಾಂತ ವ್ಯಾಪಕವಾಗಿ ಪಸರಿಸಿತ್ತು. ಪ್ರಸ್ತುತ ಲೇಖನವನ್ನು 131 ಮಂದಿ ಹಂಚಿಕೊಂಡಿದ್ದು, ಡ್ರೈವ್ ಸ್ಪಾರ್ಕ್ ಕನ್ನಡದ ವರ್ಷದ ಶ್ರೇಷ್ಠ ಫೇಸ್ ಬುಕ್ ಸುದ್ದಿಯೆಂಬ ಮನ್ನಣೆಗೆ ಪಾತ್ರವಾಗಿದೆ. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ


Click it and Unblock the Notifications








