ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಟೊಯೊಟಾ ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಜನಪ್ರಿಯ ಫಾರ್ಚೂನರ್‌ ಎಸ್‌ಯು‌ವಿಯ 2021ರ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇತ್ತೀಚಿಗೆ ಫಾರ್ಚೂನರ್ ಎಸ್‌ಯು‌ವಿಯ ಲೆಜೆಂಡರ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ.

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಫಾರ್ಚೂನರ್‌ ಎಸ್‌ಯು‌ವಿಗೆ ಹೋಲಿಸಿದರೆ ಲೆಜೆಂಡರಿ ಆವೃತ್ತಿಯು ಒರಟು ನೋಟವನ್ನು ಹೊಂದಿದೆ. ಈ ಎಸ್‌ಯು‌ವಿಯಲ್ಲಿ ಹೆಚ್ಚುವರಿ ಪ್ರೀಮಿಯಂ ಅಂಶಗಳನ್ನು ಅಳವಡಿಸಲಾಗಿದೆ. ಲೆಜೆಂಡರ್ ಎಸ್‌ಯು‌ವಿಯು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ.

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿಯ ಅಭಿಮಾನಿಯೊಬ್ಬರು ಈ ಎಸ್‌ಯುವಿಯನ್ನು ಮರದಲ್ಲಿ ನಿರ್ಮಿಸಿದ್ದಾರೆ. ಮರದಲ್ಲಿ ನಿರ್ಮಿಸಿರುವ ಲೆಜೆಂಡರ್ ಎಸ್‌ಯುವಿಯ ಬಗೆಗಿನ ಮಾಹಿತಿಯನ್ನು ವುಡ್ ವರ್ಕಿಂಗ್ ಆರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಫಾರ್ಚೂನರ್ ಲೆಜೆಂಡರ್ ಕಾರಿನ ಚಿತ್ರವನ್ನು ನೋಡುವ ಮೂಲಕ ಈ ವೀಡಿಯೊ ಆರಂಭವಾಗುತ್ತದೆ. ಕಾರು ತಯಾರಿಸಿರುವ ಕಲಾವಿದರು ಕಾರಿನ ಮುಂಭಾಗ, ಬದಿಹಾಗೂ ಹಿಂಭಾಗಕ್ಕಾಗಿ ಮೂರು ಮರದ ತುಂಡುಗಳನ್ನು ಕತ್ತರಿಸುತ್ತಾರೆ.

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಅಗತ್ಯವಿರುವಷ್ಟು ಮರವನ್ನು ಗರಗಸದ ಸಹಾಯದಿಂದ ಕತ್ತರಿಸಿ ಕಾರಿನ ಬದಿಯ ಭಾಗವನ್ನು ವಿನ್ಯಾಸಗೊಳಿಸಲಾಗುತ್ತದೆ. ಮೊದಲು ಡೋರುಗಳಿಲ್ಲದ ಕಾರಿನ ಸೈಡ್ ಭಾಗಗಳನ್ನು ರಚಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ನಂತರ ಡೋರ್ ಹಾಗೂ ವ್ಹೀಲ್ ಆರ್ಕ್'ಗಳನ್ನು ಹೆಚ್ಚುವರಿ ಮರದ ತುಂಡುಗಳಲ್ಲಿ ತಯಾರಿಸಲಾಗುತ್ತದೆ. ಇದಾದ ನಂತರ ಪ್ರತ್ಯೇಕವಾಗಿ ಕತ್ತರಿಸಿದ ಮರಗಳನ್ನು ಪಕ್ಕದ ಮರಗಳ ಮುಂಭಾಗ ಹಾಗೂ ಹಿಂಭಾಗದಲ್ಲಿಡಲಾಗುತ್ತದೆ.

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಈ ಕಲಾವಿದ ಕಾರಿನ ಹೊರಭಾಗವನ್ನು ವಿನ್ಯಾಸಗೊಳಿಸಲು ಕೆಲವು ಸಾಧನಗಳನ್ನು ಬಳಸಿದರೂ ಕಾರಿನ ಇಂಟಿರಿಯರ್ ಅನ್ನು ಕೈಯಿಂದ ಕೆತ್ತಿದ್ದಾನೆ. ಇಂಟಿರಿಯರ್ ಕೆಲಸ ಮುಗಿದ ನಂತರ ಈ ಮರದ ಕಾರಿನ ಮೇಲ್ ರೂಫ್ ಅನ್ನು ವಿನ್ಯಾಸಗೊಳಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಡೋರ್, ಬಾನೆಟ್ ಹಾಗೂ ಬೂಟ್ ಜಾಗವನ್ನು ತಯಾರಿಸಲು ಕಾರಿನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದಲ್ಲಿರುವ ಲೆಜೆಂಡರ್ ಕಾರು ಹಾಗೂ ಈ ಮರದ ಲೆಜೆಂಡರ್ ಕಾರುಗಳಲ್ಲಿ ಸ್ವಲ್ಪ ವ್ಯತ್ಯಾಸವಿರುವುದನ್ನು ಗಮನಿಸಬಹುದು.

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ವಿಂಡೋಗಳಲ್ಲಿರುವ ಗಾಜಿನಂತೆ ವಿನ್ಯಾಸಗೊಳಿಸಲು ವಿಂಡೋಗಳನ್ನು ಕಪ್ಪು ಬಣ್ಣದಿಂದ ಚಿತ್ರಿಸಲಾಗಿದೆ. ಹೆಡ್‌ಲೈಟ್‌ ಹಾಗೂ ಟೇಲ್‌ಲೈಟ್‌ಗಳಿಗೆ ಅವುಗಳನ್ನು ಹೊಂದಿಸಲು ಬಣ್ಣಗಳನ್ನು ಸಹ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಈ ಮರದ ಕಾರಿನ ಮುಂಭಾಗದ ಬಂಪರ್, ಹೆಡ್‌ಲ್ಯಾಂಪ್‌, ಗ್ರಿಲ್ ಹಾಗೂ ಎಂಜಿನ್ ಭಾಗವನ್ನು ಸಹ ಮರದಿಂದ ಕೆತ್ತನೆ ಮಾಡಲಾಗಿದೆ. ಈ ಮರದ ಕಾರಿನ ವ್ಹೀಲ್'ಗಳನ್ನು ಸಹ ಮರದಿಂದಲೇ ವಿನ್ಯಾಸಗೊಳಿಸಲಾಗಿದೆ ಎಂಬುದು ಗಮನಾರ್ಹ.

ಟಯರ್‌ಗಳಿಗಾಗಿ ದುಂಡಾದ ಲಾಗ್‌ಗಳ ಹೊರ ಮೇಲ್ಮೈಯನ್ನು ಸಣ್ಣ ಗ್ರಿಡ್‌ಗಳಾಗಿ ವಿಂಗಡಿಸಲಾಗಿದೆ. ಈ ಕಲಾವಿದರು ಲೆಜೆಂಡರ್‌ ಎಸ್‌ಯುವಿಯಲ್ಲಿರುವಂತೆಯೇ ಅಲಾಯ್ ವ್ಹೀಲ್'ಗಳನ್ನು ವಿನ್ಯಾಸಗೊಳಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮರದಿಂದ ತಯಾರಾಯ್ತು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿ ಮಾದರಿ

ಈ ಮರದ ಲೆಜೆಂಡರ್ ಎಸ್‌ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಸಸ್ಪೆಂಷನ್ ಸಿಸ್ಟಂ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಮರದ ಲೆಜೆಂಡರ್ ಎಸ್‌ಯುವಿಯ ಇಂಟಿರಿಯರ್'ನಲ್ಲಿ ಮೂರು ಸಾಲಿನ ಸೀಟುಗಳನ್ನು ನೀಡಲಾಗಿದೆ.

ಚಿತ್ರಕೃಪೆ: ವುಡ್ ವರ್ಕಿಂಗ್ ಆರ್ಟ್

Most Read Articles

Kannada
English summary
Artist carves wooden Toyota Fortuner legender. Read in Kannada.
Story first published: Monday, April 19, 2021, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X