ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಕಳೆದ ಕೆಲವು ದಿನಗಳ ಹಿಂದೆ ಕರೋನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಅಟ್ಟಹಾಸ ಮೆರೆದಿತ್ತು. ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಈ ಪ್ರಮಾಣವು 50 ಸಾವಿರದ ಆಜು ಬಾಜಿನಲ್ಲಿದೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಈ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆಗೆ ಹಲವಾರು ಜನರು ಕೈಜೋಡಿಸಿದ್ದಾರೆ. ಈಗ ಚೆನ್ನೈನಲ್ಲಿ ವಾಸಿಸುವ ಕಲಾವಿದರೊಬ್ಬರು ಕರೋನಾ ಲಸಿಕೆಯಿಂದಾಗುವ ಪ್ರಯೋಜನಗಳ ಬಗ್ಗೆ ಹೇಳಲು ಹೊಸ ಮಾರ್ಗವನ್ನು ಹುಡುಕಿದ್ದಾರೆ. ಲಸಿಕೆ ಪಡೆಯುವಂತೆ ಜನರನ್ನು ಪ್ರೋತ್ಸಾಹಿಸಲು ಇವರು ಆಟೋ ರಿಕ್ಷಾದಲ್ಲಿ ಕೋವಿಡ್ 19 ಲಸಿಕೆಗಳನ್ನು ಚಿತ್ರಿಸಿದ್ದಾರೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಮೂಲಗಳ ಪ್ರಕಾರ ಈ ಆಟೋ ರಿಕ್ಷಾವನ್ನು ಆರ್ಟ್ ಕಿಂಗ್ಡಮ್ ಸಂಸ್ಥಾಪಕರಾದ ಬಿ. ಗೌತಮ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಆಟೋ ರಿಕ್ಷಾವನ್ನುವೇಸ್ಟ್ ಪೈಪ್, ಹಳೆ ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲೈವುಡ್'ನಂತಹ ತ್ಯಾಜ್ಯ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿದೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಈ ಆಟೋ ರಿಕ್ಷಾವನ್ನು ಮೇಲಿನಿಂದ ಕೆಳಕ್ಕೆ ತಿಳಿ ನೀಲಿ ಬಣ್ಣದಲ್ಲಿ ಚಿತ್ರಿಸಲಾಗಿದ್ದು, ಎಲ್ಲಾ ಕಡೆ ಸಿರಿಂಜ್ ಹಾಗೂ ಲಸಿಕೆ ಬಾಟಲಿಗಳ ದೊಡ್ಡ ಪ್ರತಿಕೃತಿಗಳನ್ನು ಅಳವಡಿಸಲಾಗಿದೆ. ಕೋವಿಡ್ 19 ಲಸಿಕೆಗಳ ಮಹತ್ವವನ್ನು ವಿವರಿಸಲು, ಆಟೋ ರಿಕ್ಷಾದ ರೂಫ್ ಮೇಲೆ ಲಸಿಕೆ ಬಾಟಲಿಯಂತಹ ಪ್ರತಿಕೃತಿಗಳನ್ನು ಇಡಲಾಗಿದೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಈ ಆಟೋ ರಿಕ್ಷಾದ ಹೆಡ್‌ಲೈಟ್ ಮೇಲೆ ಮತ್ತೊಂದು ಸಣ್ಣ ಲಸಿಕೆ ಬಾಟಲಿಯಂತಹ ಪ್ರತಿಕೃತಿಯನ್ನು ಕಾಣಬಹುದು. ಇದರ ಜೊತೆಗೆ ಆಟೋ ರಿಕ್ಷಾದ ಎರಡೂ ಬದಿಗಳಲ್ಲಿ ದೊಡ್ಡ ಸಿರಿಂಜ್ ತರಹದ ಪ್ರತಿಕೃತಿಯನ್ನು ಅಳವಡಿಸಲಾಗಿದೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಈ ಆಟೋ ರಿಕ್ಷಾವನ್ನು ವಿನ್ಯಾಸಗೊಳಿಸಿರುವ ಬಿ. ಗೌತಮ್'ರವರು ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನೊಂದಿಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೌತಮ್, ನಾನು ಎರಡು ತಿಂಗಳ ಹಿಂದೆ ಈ ಆಟೋ ವಿನ್ಯಾಸದ ಬಗ್ಗೆ ಚೆನ್ನೈ ಕಾರ್ಪೊರೇಶನ್‌ಗೆ ತಿಳಿಸಿದೆ. ಚೆನ್ನೈ ಕಾರ್ಪೊರೇಶನ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಆಟೋ ರಿಕ್ಷಾವನ್ನು ಈ ರೀತಿ ಪೂರ್ತಿಯಾಗಿ ವಿನ್ಯಾಸಗೊಳಿಸಲು ಸುಮಾರು ಹತ್ತು ದಿನ ಬೇಕಾಯಿತು ಎಂದು ಹೇಳಿದರು. ಅಂದ ಹಾಗೆ ಗೌತಮ್'ರವರು ವಿನ್ಯಾಸಗೊಳಿಸಿರುವ ಈ ಆಟೋ ರಿಕ್ಷಾ ಮತ್ತೊಬ್ಬ ಆಟೋ ಡ್ರೈವರ್‌ಗೆ ಸೇರಿದೆ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಈ ಆಟೋ ರಿಕ್ಷಾಗೆ ಲಸಿಕೆ ಆಟೋ ಎಂದು ಹೆಸರಿಡಲಾಗಿದೆ. 15 ವಲಯಗಳಲ್ಲಿ ಲಸಿಕೆ ಪಡೆಯಲು ಜನರನ್ನು ಪ್ರೋತ್ಸಾಹಿಸಲು ಈ ಆಟೋ ರಿಕ್ಷಾವನ್ನು ಬಳಸಲಾಗುತ್ತಿದೆ. ಈ ಕ್ರಮಕ್ಕೆ ಚೆನ್ನೈ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂಬುದು ವಿಶೇಷ.

ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುತ್ತದೆ ಈ ಲಸಿಕೆ ಆಟೋ

ಆಟೋಗಳು ಮೂಲೆ ಮೂಲೆಗಳನ್ನು ತಲುಪಿ ಲಸಿಕೆ ಪಡೆಯಲು ಹಿಂದೇಟು ಹಾಕುವವರನ್ನು ಲಸಿಕೆ ಪಡೆಯುವಂತೆ ಉತ್ತೇಜನ ನೀಡಬಹುದು. ಜನರು ಈ ಆಟೋ ರಿಕ್ಷಾದ ವರ್ಣರಂಜಿತ ಕಲಾಕೃತಿಗಳನ್ನು ಬಳಸಿ ಲಸಿಕೆ ಪಡೆಯಲು ಜನರಿಗೆ ಉತ್ತೇಜಿಸಬಹುದು ಎಂದು ಗೌತಮ್ ಹೇಳಿದ್ದಾರೆ.

ಚಿತ್ರ ಕೃಪೆ: ಬಿ ಗೌತಮ್

Most Read Articles

Kannada
English summary
Artist designs auto rickshaw as Covid vaccine auto. Read in Kannada.
Story first published: Monday, June 28, 2021, 21:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X