ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಲಾಕ್ ಡೌನ್ ಅವಧಿಯಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಮಾದರಿ ತಯಾರಿಸಿ ಕುಂದಾಪುರ ಮೂಲದ ಪ್ರಶಾಂತ್‌ ಆಚಾರ್ ಅವರು ಗಮನಸೆಳೆದಿದ್ದರು. ಇವರು ತಯಾರಿಸಿದ ಕೆಎಸ್ಆರ್‌ಟಿಸಿ ಬಸ್‌ಗಳ ಮಾದರಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಜಾರಿಗೊಳಿಸಿದ್ದ ವೇಳೆ ಹಲವರು ಭೀತಿಯಲ್ಲೇ ಸಮಯವನ್ನು ಕಳೆದರು. ಇನ್ನು ಹಲವರಿಗೆ ವರ್ಕ್ ಫ್ರಂ ಹೋಂ ಆಯ್ಕೆ ಇದ್ದ ಕಾರಣ ಮನೆಯಲ್ಲಿ ತಮ್ಮ ಉದ್ಯೋಗವನ್ನು ಮುಂದುವರೆಸಿದ್ದರು. ಇದರ ನಡುವೆ ತಮ್ಮ ವಿಶಿಷ್ಟ ಪ್ರತಿಭೆಗಳನ್ನು ಪ್ರದರ್ಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಕಲಾವಿದರು ಸದ್ದು ಮಾಡಿದ್ದರು. ಇದೇ ರೀತಿ ಕುಂದಾಪುರ ಮೂಲದ ಪ್ರಶಾಂತ್‌ ಆಚಾರ್ ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡಿದ್ದರು.

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಕಲಾವಿದ ಪ್ರಶಾಂತ್‌ ಆಚಾರ್ ಅವರು ತಯಾರಿಸಿದ ಕೆಎಸ್ಆರ್‌ಟಿಸಿ ಬಸ್‌ಗಳ ಮಾದರಿ ಚಿತ್ರಗಳು ನೋಡಿದಾಗ ಒರಿಜಿನಲ್ ಬಸ್ ರೀತಿಯಲ್ಲಿ ಕಂಡು ಬರುತ್ತದೆ. ಸಾಮಾನ್ಯವಾದ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇರುವ ರೀತಿಯ ವಿಂಡೋಗಳು, ಮಿರರ್, ತುರ್ತು ನಿರ್ಗಮನ್ ಡೋರ್, ಟಯರ್ ಮತ್ತು ವಿನ್ಯಾಸವು ಒರಿಜಿನಲ್ ರೀತಿಯಂತೆ ಇದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಇವರು ಫೋಮ್ ಶೀಟ್ ಬಳಿಸಿ ಕೆಎಸ್ಆರ್‌ಟಿಸಿ ಬಸ್ ಮಾದರಿಗಳನ್ನು ತಯಾರಿಸುತ್ತಾರೆ. ಫೋಮ್ ಶೀಟ್ ಬಳಿಸಿ ಬಸ್ ಬಾಡಿಯನ್ನು ನಿರ್ಮಿಸಿ ಅಣ್ಣನ ಗ್ಯಾರೇಜ್ ನಲ್ಲಿ ಥೇಟ್ ಕೆಎಸ್ಆರ್‌ಟಿಸಿ ಬಸ್ ರೀತಿಯ ಪೇಟೆಂಗ್ ಅನ್ನು ಮಾಡಿದ್ದಾರೆ.

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಐರಾವತ ಬಸ್ ನಲ್ಲಿ ಹೆಡ್ ಲೈಟ್, ಇಂಡಿಕೇಟೆರ್, ಫಾಗ್ ಲ್ಯಾಂಪ್, ಗ್ರಿಲ್ ಮತ್ತು ಒಳಾಂಗಣದ ಸೀಟುಗಳು ಥೇಟ್ ಒರಿಜಿನಲ್ ರೀತಿಯಲ್ಲಿ ಬಹಳ ಉತ್ತಮವಾಗಿ ನಿರ್ಮಿಸಿದ್ದಾರೆ. ಇನ್ನು ವೇಗದೂತ ಬಸ್ ರಾತ್ರಿ ಹೊತ್ತಿನಲ್ಲಿ ಹೆಡ್ ಲೈಟ್ ಮತ್ತು ಒಳಾಂಗಣದ ಲೈಟ್ ನಿಂದ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಪ್ರಶಾಂತ್ ಆಚಾರ್ ತಯಾರು ಮಾಡಿದ ಬಸ್‌ಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಕೆಎಸ್ಆರ್‌ಟಿಸಿ ಬಸ್ ಮಾದರಿಗಳಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಲಾವಿದ ಪ್ರಶಾಂತ್ ಆಚಾರ್ ಅವರು ಇತ್ತೀಚೆಗೆ ಶಾಂತಿನಗರದ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಿಗಮ ವ್ಯವಸ್ಥಾಪಕ ನಿರ್ದೇಶಿಕ ಶಿವಯೋಗಿ ಅವರು ಭೇಟಿ ಮಾಡಿದ್ದಾರೆ. ಅವರಿಗೆ ತಾವು ತಯಾರಿಸಿದ ಬಸ್ ಮಾದರಿಯನ್ನು ತೋರಿಸಿದ್ದಾರೆ. ಬಸ್ ಮಾದರಿಗಳನ್ನು ನೋಡಿ ಅವರು 10 ಐರಾವತ ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ್ದಾರೆ.

ಕಲಾವಿದ ಪ್ರಶಾಂತ್‌ ಆಚಾ​ರ್‌ಗೆ 10 ಬಸ್ ಮಾದರಿಗಳನ್ನು ತಯಾರಿಸಿ ಕೊಡಲು ಆರ್ಡರ್ ನೀಡಿದ ಕೆಎಸ್ಆರ್‌ಟಿಸಿ

ಪ್ರಶಾಂತ್ ಆಚಾರ್ ಅವರು ತಯಾರಿಸಿದ ಬಸ್ ಮಾದರಿಗಳನ್ನು ಕೆಎಸ್ಆರ್‌ಟಿಸಿಯು ಗಣ್ಯ ವ್ಯಕ್ತಿಗಳಿಗೆ ಉಡುಗೊರೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಪ್ರಶಾಂತ್ ಆಚಾರ್ ತಯಾರಿ ಮಾಡಿ ನೀಡುವ ಪ್ರತಿ ಬಸ್ ಮಾದರಿಗೆ ರೂ.8 ಸಾವಿರ ನೀಡುವುದಾಗಿ ಕೆಎಸ್ಆರ್‌ಟಿಸಿ ಹೇಳಿದೆ. ಇದನ್ನು ಕಲಾವಿದ ಪ್ರಶಾಂತ್ ಆಚಾರ್ ಅವರು ಸಂತಸದಿಂದ ಒಪ್ಪಿಕೊಂಡಿದ್ದಾರೆ.

Image Courtesy: Krishnamohana Thalengala

Most Read Articles

Kannada
English summary
Udupi artist’s KSTRC bus model rewarded. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X