ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ನಿನ್ನೆ ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಜೋಜಿಲಾ ಹಾಗೂ ಝಡ್ ಮೋರ್ ಸುರಂಗ ಮಾರ್ಗಗಳ ಕಾಮಗಾರಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ನಿರ್ವಹಿಸುವ ಈ ಎರಡೂ ಸುರಂಗ ಮಾರ್ಗಗಳ ಕಾಮಗಾರಿಯು ನಿಗದಿತ ಅವಧಿಗಿಂತ ಮುನ್ನ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಕಳೆದ ವಾರವಷ್ಟೇ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಸಚಿವರಾದ ಅನುರಾಗ್ ಠಾಕೂರ್ ರವರು ಸಹ ಈ ಮಾರ್ಗದ ಪ್ರಗತಿಯನ್ನು ಪರಿಶೀಲನೆ ನಡೆಸಿದ್ದರು. ಜೋಜಿಲಾ ಸುರಂಗ ಮಾರ್ಗವು ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗವಾಗಿದ್ದು, ಒಟ್ಟು 14.15 ಕಿ.ಮೀ ಉದ್ದವನ್ನು ಹೊಂದಿದೆ. ಈ ಮಾರ್ಗವನ್ನು ರೂ. 4,500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಾರ್ಗವು ಈಗ ಅಸ್ತಿತ್ವದಲ್ಲಿರುವ ಎನ್‌ಎಚ್ 01 ರಲ್ಲಿ 2,700 ಮೀಟರ್ ನಿಂದ 3,300 ಮೀಟರ್ ಎತ್ತರದಲ್ಲಿದೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಈ ಸುರಂಗ ಮಾರ್ಗವು ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ನಂತರ ಕಾಶ್ಮೀರದ ಬಾಲ್ಟಾಲ್ ಹಾಗೂ ಲಡಾಖ್‌ನ ಮಿನಮಾರ್ಗ್ ನಡುವಿನ ಅಂತರವನ್ನು 40 ಕಿ.ಮೀಗಳಿಂದ 13 ಕಿ.ಮೀಗಳಿಗೆ ಕಡಿಮೆ ಮಾಡಲಿದೆ. ಜೊತೆಗೆ ಶ್ರೀನಗರ - ಲಡಾಖ್ ನಡುವೆ ಸಂಚರಿಸುವ ಪ್ರಯಾಣಿಕರು ವರ್ಷ ಪೂರ್ತಿ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಸಂಚರಿಸಬಹುದು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಮತ್ತೊಂದೆಡೆ ಝಡ್ ಮೋರ್ ಸುರಂಗ ಮಾರ್ಗವನ್ನು ರೂ. 2,378 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಮಾರ್ಗವು ಕಾಶ್ಮೀರ ಕಣಿವೆಯಲ್ಲಿರುವ ಗಂಗಂಗೀರ್ ಜೊತೆ ಸೋನ್‌ಮಾರ್ಗ್‌ ಅನ್ನು ಸಂಪರ್ಕಿಸುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ರಸ್ತೆಗಳು ಭಾರೀ ಹಿಮಪಾತದಿಂದ ಮುಚ್ಚಲ್ಪಟ್ಟ ಸಂದರ್ಭಗಳಲ್ಲಿ ಈ ಮಾರ್ಗವು ಈ ಪ್ರದೇಶದ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಲಿದೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಚಳಿಗಾಲದಲ್ಲಿ ಭಾರೀ ಹಿಮಪಾತದಿಂದಾಗಿ, ಇತರ ಪ್ರದೇಶಗಳಿಗೆ ಸೋನ್‌ಮಾರ್ಗ್‌ನ ಸಂಪರ್ಕವು ಕಡಿತಗೊಳ್ಳುವುದರಿಂದ ಜನ ಜೀವನಕ್ಕೆ ತೊಂದರೆಯಾಗುತ್ತದೆ. ಈಸಮಸ್ಯೆಯನ್ನು ಪರಿಹಾರಿಸಲು ಝಡ್ ಮೋರ್ ಸುರಂಗ ಮಾರ್ಗವನ್ನು ನಿರ್ಮಿಸುವ ಅವಶ್ಯಕತೆ ಇತ್ತು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಜೋಜಿಲಾ ಪಾಸ್ ಸುಮಾರು 8,500 ಅಡಿ ಎತ್ತರದಲ್ಲಿದ್ದು, ವರ್ಷದಲ್ಲಿ 5 - 6 ತಿಂಗಳು ಮುಚ್ಚಿರುತ್ತದೆ. ಇದರಿಂದ ಪ್ರತಿ ವರ್ಷ 5 - 6 ತಿಂಗಳುಗಳ ಕಾಲ ಕಾಶ್ಮೀರದೊಂದಿಗೆ ಲಡಾಖ್'ನ ಸಂಪರ್ಕವು ಕಡಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಸರ್ವ ಋತು ಸಂಪರ್ಕಕ್ಕಾಗಿ ಸೋನ್‌ಮಾರ್ಗ್‌ - ಲಡಾಖ್ ಅನ್ನು ಸಂಪರ್ಕಿಸುವ ಸುರಂಗ ಮಾರ್ಗವನ್ನು ನಿರ್ಮಿಸುವ ಅವಶ್ಯಕತೆಯಿತ್ತು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಈ ಎರಡೂ ಸುರಂಗ ಮಾರ್ಗಗಳು ಪಾಕಿಸ್ತಾನದ ಜೊತೆಗಿನ ನಿಯಂತ್ರಣ ರೇಖೆಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುವುದರಿಂದ ಭಾರತಕ್ಕೆ ಹೆಚ್ಚು ಮಹತ್ವದ್ದಾಗಿವೆ. ಈಗಿರುವ ಶ್ರೀನಗರ - ಲಡಾಖ್ ಹೆದ್ದಾರಿಯು ವರ್ಷದಲ್ಲಿ ಕನಿಷ್ಠ ಆರು ತಿಂಗಳು ಮುಚ್ಚಿರುತ್ತದೆ. ಇದರಿಂದ ಈ ಪ್ರದೇಶಕ್ಕೆ ಪ್ರಪಂಚದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿದ್ದವಾದ ನಂತರ ಈ ಸುರಂಗ ಮಾರ್ಗಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಸಶಸ್ತ್ರ ಪಡೆಗಳ ಚಲನೆಗೆ ನೆರವಾಗುತ್ತವೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಭಾರತದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2020ರ ಅಕ್ಟೋಬರ್ 3 ರಂದು ರೋಹ್ಟಾಂಗ್‌ನಲ್ಲಿ ರೂ.3,300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿರವರು ಉದ್ಘಾಟಿಸಿದ್ದರು. ರೋಹ್ಟಾಂಗ್‌ನಲ್ಲಿ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ರ ಜೂನ್ 3ರಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಈ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ 2002ರಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 2010ರಿಂದ ನಿರ್ಮಾಣ ಹಂತದಲ್ಲಿದ್ದ ಈ ಸುರಂಗ ಮಾರ್ಗವು ಕಳೆದ ವರ್ಷ ಉದ್ಘಾಟನೆಗೊಂಡಿತ್ತು. ಈ ಸುರಂಗವು ಸಮುದ್ರ ಮಟ್ಟದಿಂದ ಸುಮಾರು 3100 ಮೀಟರ್ ಎತ್ತರದಲ್ಲಿದೆ. ಈ ಮಾರ್ಗವನ್ನು ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲಡಾಖ್‌ನ ಲೇಹ್ ಪ್ರದೇಶದ ನಡುವೆ ನಿರ್ಮಿಸಲಾಗಿದೆ. ಇದರ ಉದ್ದ 9.02 ಕಿ.ಮೀಗಳಾಗಿದೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಅಟಲ್ ಬಿಹಾರಿ ವಾಜಪೇಯಿರವರು ನೀಡಿದ ಕೊಡುಗೆಯನ್ನು ಗೌರವಿಸಲು ರೋಹ್ಟಂಗ್ ಸುರಂಗ ಮಾರ್ಗಕ್ಕೆ ಅಟಲ್ ಸುರಂಗ ಎಂದು ಹೆಸರಿಡಲು ಕೇಂದ್ರ ಸಚಿವ ಸಂಪುಟ 2019ರಲ್ಲಿ ತೀರ್ಮಾನಿಸಿತ್ತು. ಈ ಸುರಂಗವನ್ನು ರೋಹ್ಟಾಂಗ್ ಎಂದೂ ಸಹ ಕರೆಯಲಾಗುತ್ತದೆ. ಪರ್ಷಿಯನ್ ಭಾಷೆಯಲ್ಲಿ ರೋಹ್ಟಾಂಗ್ ಎಂದರೆ ಮೃತ ದೇಹಗಳ ರಾಶಿ. ಅಟಲ್ ಸುರಂಗದ ಕಾರ್ಯಸಾಧ್ಯತೆಯ ಅಧ್ಯಯನವನ್ನು 1990ರಲ್ಲಿ ಆರಂಭಿಸಲಾಯಿತು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಡ್ರಿಲ್ ಹಾಗೂ ಬ್ಲಾಸ್ಟ್ ಎನ್ಎಟಿಎಂ (ನ್ಯೂ ಆಸ್ಟ್ರಿಯಾ ಟನೆಲಿಂಗ್ ವಿಧಾನ) ತಂತ್ರಗಳನ್ನು ಬಳಸಿ ಈ ಸುರಂಗವನ್ನು ನಿರ್ಮಿಸಲಾಗಿದೆ. 9.02 ಕಿ.ಮೀ ಉದ್ದದ ಈ ಸುರಂಗವು ವರ್ಷ ಪೂರ್ತಿ ಮನಾಲಿಗೆ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕ ನೀಡುತ್ತದೆ. ಹಿಮಪಾತದಿಂದಾಗಿ ಪ್ರತಿವರ್ಷ ಸುಮಾರು ಆರು ತಿಂಗಳ ಕಾಲ ಈ ರಸ್ತೆಯ ಮೇಲೆ ಪರಿಣಾಮ ಉಂಟಾಗುತ್ತಿತ್ತು.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಹಿಮಾಲಯದ ಪಿರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 3100 ಮೀಟರ್ (10,000 ಅಡಿ) ಎತ್ತರದಲ್ಲಿ ಅಲ್ಟ್ರಾ-ಆಧುನಿಕ ವಿಶೇಷತೆಗಳೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದೆ. ಹಾರ್ಸ್ ಶೂ ಶೇಪಿನಲ್ಲಿರುವ ಸಿಂಗಲ್ ಟ್ಯೂಬ್ ಡಬಲ್ ಲೇನ್ ನ ಈ ಈ ಸುರಂಗವು 8 ಮೀಟರ್ ಗಳ ರಸ್ತೆಯನ್ನು ಹೊಂದಿದೆ. ಈ ಸುರಂಗವು 5.525 ಮೀಟರ್ ಓವರ್ ಹೆಡ್ ಕ್ಲಿಯರೆನ್ಸ್ ಹೊಂದಿದೆ.

ನಿಗದಿತ ಅವಧಿಗಿಂತ ಮುನ್ನ ಬಳಕೆಗೆ ಸಿದ್ಧವಾಗಲಿದೆ ಏಷ್ಯಾದ ಅತಿ ಉದ್ದದ ದ್ವಿ ದಿಕ್ಕಿನ ಸುರಂಗ ಮಾರ್ಗ

ಈ ಸುರಂಗವು 10.5 ಮೀಟರ್ ಅಗಲವಿದ್ದು, 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿ ನಿರ್ಮಿಸಲಾಗಿದೆ. ಯಾವುದೇ ದುರಂತ ಸಂಭವಿಸಿದರೆ ಜನರನ್ನು ರಕ್ಷಿಸಲು ಪ್ರತಿ 500 ಮೀಟರ್ ಗಳಿಗೆ ಎಮರ್ಜೆನ್ಸಿ ಎಕ್ಸಿಟ್ ಗಳನ್ನು ನೀಡಲಾಗಿದೆ. ಈ ಸುರಂಗ ಮಾರ್ಗವು ಮನಾಲಿ - ಲೇಹ್ ನಡುವಿನ ರಸ್ತೆ ದೂರವನ್ನು 46 ಕಿ.ಮೀಗಳವರೆಗೆ ಹಾಗೂ ಪ್ರಯಾಣ ಅವಧಿಯನ್ನು ನಾಲ್ಕರಿಂದ ಐದು ಗಂಟೆಗಳವರೆಗೆ ಕಡಿಮೆಗೊಳಿಸುತ್ತದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Asia s longest bi directional tunnel to be ready by 2026 details
Story first published: Wednesday, September 29, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X