ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಕೇಂದ್ರ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರಾದ ಪ್ರಕಾಶ್ ಜಾವಡೇಕರ್ ವರ್ಚುವಲ್ ಸಮಾರಂಭದ ಮೂಲಕ ಇಂದೋರ್‌ನ ಪಿತಾಂಪುರದಲ್ಲಿರುವ ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್ ಅನ್ನು ಉದ್ಘಾಟಿಸಿದರು.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಈ ಟೆಸ್ಟ್ ಟ್ರ್ಯಾಕ್ ಅನ್ನು ನ್ಯಾಷನಲ್ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ (ನ್ಯಾಟ್ರಾಕ್ಸ್) ಅಭಿವೃದ್ಧಿಪಡಿಸಿದೆ. ಈ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಪರೀಕ್ಷಿಸಲು ವಿಶ್ವ ದರ್ಜೆಯ ಸೌಲಭ್ಯವನ್ನು ಒದಗಿಸಲಾಗಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಹೊಸ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್ 11.3 ಕಿ.ಮೀ ಉದ್ದ ಹಾಗೂ 16 ಮೀಟರ್ ಅಗಲದ ನಾಲ್ಕು ಪಥಗಳನ್ನು ಹೊಂದಿದೆ. ಈ ಟ್ರ್ಯಾಕ್ ಏಷ್ಯಾದ ಅತಿ ಉದ್ದದ ಟ್ರ್ಯಾಕ್ ಹಾಗೂ ವಿಶ್ವದ ಐದನೇ ಅತಿ ಉದ್ದದ ಟ್ರ್ಯಾಕ್ ಆಗಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಭಾರತದಲ್ಲಿಯೇ ವಾಹನ ಕಂಪನಿಗಳಿಗೆ ವಾಹನಗಳನ್ನು ಪರೀಕ್ಷಿಸಲು ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಟೆಸ್ಟ್ ಟ್ರ್ಯಾಕ್ ಅನ್ನು ನಿರ್ಮಿಸಲಾಗಿದೆ. ಈ ಟ್ರ್ಯಾಕ್ ಆರಂಭವಾಗುವುದರಿಂದ ಇನ್ನು ಮುಂದೆ ಭಾರತದಲ್ಲಿರುವ ಆಟೋಮೊಬೈಲ್ ಕಂಪನಿಗಳು ದೇಶದಲ್ಲಿಯೇ ವಾಹನಗಳ ವಿಶ್ವ ದರ್ಜೆಯ ಪರೀಕ್ಷೆ ಮಾಡಲು ಸಾಧ್ಯವಾಗಲಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಈ ಟೆಸ್ಟ್ ಟ್ರ್ಯಾಕ್‌ನಲ್ಲಿ ಗಂಟೆಗೆ 250 ಕಿ.ಮೀ ವೇಗದಲ್ಲಿ ಹಾಗೂ ಕರ್ಬ್ ಪ್ಯಾಚ್‌ನಲ್ಲಿ ಗಂಟೆಗೆ 375 ಕಿ.ಮೀ ವೇಗದಲ್ಲಿ ವಾಹನಗಳನ್ನು ಪರೀಕ್ಷಿಸಬಹುದು. ನೇರ ಟ್ರ್ಯಾಕ್‌ನಲ್ಲಿ ಗರಿಷ್ಠ ವೇಗಕ್ಕೆ ಯಾವುದೇ ಮಿತಿಯಿಲ್ಲ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಈ ಟ್ರ್ಯಾಕ್ 0%ನಷ್ಟು ರೇಖಾಂಶದ ಇಳಿಜಾರನ್ನು ಹೊಂದಿದ್ದು, ವಾಹನಗಳ ನಿಖರ ಪರೀಕ್ಷೆಗೆ ಸೂಕ್ತವಾಗಿದೆ. ಈ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್ ವಾಹನದ ಗರಿಷ್ಠ ವೇಗ, ವೇಗವರ್ಧನೆ, ಇಂಧನ ಬಳಕೆ, ಹೆಚ್ಚಿನ ವೇಗ ನಿರ್ವಹಣೆ, ನಿಯಂತ್ರಣದಂತಹ ಪರೀಕ್ಷೆಗಳನ್ನು ಹೊಂದಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಎಲ್ಲಾ ರೀತಿಯ ವಾಹನಗಳ ಪರೀಕ್ಷೆಗಾಗಿ ನ್ಯಾಟ್ರಾಕ್ಸ್ ಹೈ ಸ್ಪೀಡ್ ಟೆಸ್ಟ್ ಟ್ರ್ಯಾಕ್ ತೆರೆಯಲಾಗಿದೆ. ವಾಹನ ಬಿಡುಗಡೆ, ಸೂಪರ್‌ಕಾರ್ ರೇಸಿಂಗ್ ಹಾಗೂ ಡೀಲರ್ ಈವೆಂಟ್‌ಗಳಿಗೆ ಈ ಟ್ರ್ಯಾಕ್ ಲಭ್ಯವಾಗಲಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಪ್ರಪಂಚದಾದ್ಯಂತವಿರುವ ಆಟೋಮೊಬೈಲ್ ಕಂಪನಿಗಳು ಈ ಟೆಸ್ಟ್ ಟ್ರ್ಯಾಕ್ ಬಗ್ಗೆ ಉತ್ಸುಕವಾಗಿವೆ. ನ್ಯಾಟ್ರಾಕ್ಸ್ ಪ್ರಕಾರ ಫೋಕ್ಸ್‌ವ್ಯಾಗನ್, ಎಫ್‌ಸಿಎ, ರೆನಾಲ್ಟ್, ಪಿಯಾಜಿಯೊ ಹಾಗೂ ಲ್ಯಾಂಬೊರ್ಗಿನಿ ಸೇರಿದಂತೆ ಹಲವು ಕಂಪನಿಗಳು ಈ ಟ್ರ್ಯಾಕ್ ಬಳಸಲು ಮುಂದಾಗಿವೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಈ ಟ್ರ್ಯಾಕ್ ನಿರ್ಮಾಣದ ಉದ್ದೇಶ ಭಾರತೀಯ ಕಂಪನಿಗಳನ್ನು ತಮ್ಮ ಅಗತ್ಯಗಳಿಗಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂದು ಹೇಳಿದರು.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಈ ಮೊದಲು ಭಾರತದ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಪರೀಕ್ಷಿಸಲು ಯುರೋಪ್ ಹಾಗೂ ಅಮೆರಿಕಾ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಇನ್ನು ಮುಂದೆ ಕಂಪನಿಗಳು ಭಾರತದಲ್ಲಿಯೇ ವಾಹನಗಳನ್ನು ಪರೀಕ್ಷಿಸಲು ಸಾಧ್ಯವಾಗಲಿದೆ.

ಬಳಕೆಗೆ ಸಿದ್ದವಾಯ್ತು ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟೆಸ್ಟ್ ಟ್ರ್ಯಾಕ್

ಇದರಿಂದ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸುವ ಸಮಯ ಉಳಿಯಲಿದೆ. ನ್ಯಾಟ್ರಾಕ್ಸ್ ನಿರ್ಮಿಸಿರುವ ಈ ಟ್ರ್ಯಾಕ್ ಮಧ್ಯಪ್ರದೇಶದ ರಾಜಧಾನಿ ಇಂದೋರ್‌ನಿಂದ 50 ಕಿ.ಮೀ ದೂರದಲ್ಲಿರುವ ಪಿತಾಂಪುರದಲ್ಲಿದೆ. ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ಟ್ರ್ಯಾಕ್ ಅನ್ನು 3,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ.

Most Read Articles

Kannada
English summary
Asia's longest high speed automobile testing track inaugurated in Indore. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X