Ather: ಶಕ್ತಿಯುತ ಟಾಟಾ ನೆಕ್ಸಾನ್ ಇವಿಯನ್ನು ತಳ್ಳಿದ ಬೆಂಗಳೂರಿನ ಎಥರ್ ಸ್ಕೂಟರ್, ವಿಡಿಯೋ ಹಂಚಿಕೊಂಡ ಕಂಪನಿ

ಭಾರತದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸುತ್ತಿವೆ. ಅದರಲ್ಲೂ ಬೆಂಗಳೂರು ಮೂಲಕ ಎಥರ್ ಎನರ್ಜಿ (Ather Energy) ಮಾರಾಟ ಮಾಡುವ ಇ-ಸ್ಕೂಟರ್‌ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ, ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಪುಟ್ಟ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಚಾಲಕ, ಕೆಟ್ಟಿದೆ ಎನ್ನಲಾದ ಬೃಹತ್ ಗಾತ್ರದ ಶಕ್ತಿಯುತ ಟಾಟಾ ನೆಕ್ಸಾನ್ ಇವಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ವಿ.ಎಸ್.ಸುನೀಲ್ ಎಂಬ ಟ್ವಿಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಎಥರ್ ಎನರ್ಜಿ ರೀ-ಪೋಸ್ಟ್ ಮಾಡಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಲ್ ಚಲ್ ಸೃಷ್ಟಿಸಿದೆ.

Ather: ಶಕ್ತಿಯುತ ಟಾಟಾ ನೆಕ್ಸಾನ್ ಇವಿಯನ್ನು ತಳ್ಳಿದ ಬೆಂಗಳೂರಿನ ಎಥರ್ ಸ್ಕೂಟರ್: ವಿಡಿಯೋ ಹಂಚಿಕೊಂಡ ಕಂಪನಿ

ಸಾಮಾನ್ಯ ಎಥರ್ ಎಲೆಕ್ಟ್ರಿಕ್ ಸ್ಕೂಟರ್, ದೊಡ್ಡದಾದ ಟಾಟಾ ನೆಕ್ಸಾನ್ ಇವಿಯನ್ನು ತಳ್ಳಲು ಸಾಧ್ಯವೇ ಎಂಬ ಕುತೂಹಲ ಹಲವರಲ್ಲಿ ಇರಬಹುದು. ಅದಕ್ಕೆ ಉತ್ತರವು ಇಲ್ಲಿದೆ. ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 26 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಇದು ಹೆಚ್ಚು ಶಕ್ತಿಯುತವಾಗಿದೆ ಎಂದು ಹೇಳಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 2.9 kWh ಹಾಗೂ 3.7kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಕ್ರಮವಾಗಿ, 1,38,000 ಹಾಗೂ ರೂ.1,44,921 ಎಕ್ಸ್ ಶೋರೂಂ ದರವನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್, ನಗರದ ಪ್ರದೇಶದ ಓಡಾಟಕ್ಕೆ ಅತ್ಯುತ್ತಮವಾಗಿದ್ದು, ಎಲ್ಇಡಿ ಹೆಡ್‌ಲೈಟ್ ಸೇರಿದಂತೆ ಯುವ ಗ್ರಾಹಕರನ್ನು ಸೆಳೆಯುವ ವಿನ್ಯಾಸವನ್ನು ಹೊಂದಿದೆ.

ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ ಸ್ಮಾರ್ಟ್‌ಇಕೋ, ಇಕೋ, ರೈಡ್, ಸ್ಪೋರ್ಟ್ ಮತ್ತು ವಾರ್ಪ್ ಎಂಬ ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ, ಸಂಪೂರ್ಣ ಚಾರ್ಜ್ ನಲ್ಲಿ 115 km ರಿಂದ 145 km ರೇಂಜ್ ಕೊಡುತ್ತದೆ. 7 ಇಂಚಿನ TFT ಟಚ್‌ಸ್ಕ್ರೀನ್, ಡಿಸ್ಕ್ ಬ್ರೇಕ್ ಹಾಗೂ 12 - ಇಂಚಿನ ಅಲಾಯ್ ವೀಲ್ಸ್ ಅನ್ನು ಒಳಗೊಂಡಿದೆ.

ಮತ್ತೊಂದು, ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ರೂ.1,29,999 ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದರಲ್ಲಿ 2.9 kWh ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗಿದ್ದು, 115 km ಕ್ರಮಿಸುವ ಸಾಮರ್ಥ್ಯ ಹೊಂದಿದೆ. 3.9 ಸೆಕೆಂಡುಗಳಲ್ಲಿ 0-40 ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಒಳಗೊಂಡಿದೆ. ಡೀಪ್‌ವ್ಯೂ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಎಥರ್ ಕಂಪನಿ ಪ್ರತಿಸ್ಪರ್ಧಿ ಕಂಪನಿಗೆ ಪೈಪೋಟಿ ನೀಡಲು ಅಧಿಕ ದೂರ ಕ್ರಮಿಸುವ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗೆ 450ಎಸ್ ಹೆಚ್ಆರ್ ಎಂದು ಹೆಸರಿಡಬಹುದು. ಇದು, ದೊಡ್ಡದಾದ ಬ್ಯಾಟರಿ, ಆಕರ್ಷಕ ವೈಶಿಷ್ಟ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 13, 2023, 16:22 [IST]
English summary
Ather 450x e scooter pushes tata nexon ev video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+