ಕಾರು - ಸ್ಕೂಟರ್ ಅಪಘಾತ ಅಂದುಕೊಂಡ್ರಾ.. ಮುಂದೇನಾಯ್ತು? ಎಥರ್ ಕಂಪನಿ ಮಾಲೀಕ ಹಂಚಿಕೊಂಡ ವಿಡಿಯೋ ನೋಡಿ

ಸಾಮಾಜಿಕ ಜಾಲತಾಣಗಳು (Social Media) ನಮ್ಮ ಜೀವನದ ಅವಿಭಾಗ್ಯ ಅಂಗವಾಗಿದ್ದು, ಪ್ರಭಾವಿ ಮಾಧ್ಯಮವಾಗಿ ಬೆಳೆದಿವೆ. ಮೊಬೈಲ್ ಫೋನ್‌ ಸ್ಕ್ರೋಲ್ ಮಾಡಿದರೆ ಬೆರಳ ತುದಿಯಲ್ಲಿಯೇ ಸಾಕಷ್ಟು ಮಾಹಿತಿ ಲಭ್ಯವಾಗುತ್ತಿದೆ. ಇಲ್ಲಿ, ಹೆಚ್ಚಾಗಿ ಮನರಂಜನಾ ಹಾಗೂ ತಮಾಷೆ ವಿಡಿಯೋಗಳನ್ನು ಬಹುತೇಕ ನಾವು - ನೀವು ನೋಡುತ್ತೇವೆ.

ಬೆಂಗಳೂರಿನ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ (Ather Energy) ಸಹ - ಸಂಸ್ಥಾಪಕ (Co - founder) ತರುಣ್ ಮೆಹ್ತಾ ಅವರು, ತಮ್ಮ 'ಎಕ್ಸ್' ಖಾತೆಯಲ್ಲಿ ಅಪಘಾತದ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಅಪಘಾತದ ಭಾರತದಲ್ಲಿ ಸಂಭವಿಸಿಲ್ಲ. ಬೇರೆ ಎಲ್ಲೋ ವಿದೇಶದಲ್ಲಿ ನಡೆದಿದೆ. ಆದರೆ, ನಿಖರವಾದ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಈ ವಿಡಿಯೋವನ್ನು ನೋಡಿದಾಗ, ಕಾರು ರಸ್ತೆಯಲ್ಲಿ ನಿಂತಿರುತ್ತದೆ. ಅದೇ ರಸ್ತೆಯಲ್ಲಿ ಎದುರಿನಿಂದ ಸ್ಕೂಟರ್‌ವೊಂದರಲ್ಲಿ ಬಂದ ಯುವತಿಯರಿಬ್ಬರು, ಅದನ್ನು ನಿಲ್ಲಿಸಿ, ಕೆಳಗೆ ಇಳಿಯಲು ಪ್ರಯತ್ನಿಸುತ್ತಾರೆ. ಆದರೆ, ಸಮತೋಲನ (ಬ್ಯಾಲೆನ್ಸ್) ಕಳೆದುಕೊಂಡು ಬೀಳುತ್ತಾರೆ. ಬಹುಶಃ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಸ್ಕೂಟರ್‌ನ್ನು ನಿಲ್ಲಿಸಿರಬೇಕು. ಅಷ್ಟರಲ್ಲಿ ವ್ಯಕ್ತಿಯೊಬ್ಬ ಯುವತಿಯರ ಸಹಾಯಕ್ಕೆ ಬರುತ್ತಾರೆ.

ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆತ್ತಲು ನೆರವಾಗುತ್ತಾರೆ. ಆದರೆ, ಆ ಸ್ಕೂಟರ್ ಓಡಿಸಿಕೊಂಡು ಬಂದ ಯುವತಿ, ಇಗ್ನಿಷನ್ ಆಫ್ ಮಾಡುವುದನ್ನು ಮರೆತಿದ್ದಾರೆ. ತಕ್ಷಣ ಆ ವ್ಯಕ್ತಿ, ಗೊತ್ತಿಲ್ಲದೇ ಆಕ್ಸಿಲರೇಟರ್ ನೀಡಿ ಸೀದಾ ಹೋಗಿ, ಪಕ್ಕದಲ್ಲಿದ್ದ ನೀರಿನ ಹೊಂಡಕ್ಕೆ ಬಿದ್ದಿದ್ದಾರೆ. ಇದನ್ನು ಕಂಡ ಯುವತಿಯರು ಗಾಬರಿಯಿಂದ ಕಿರುಚುತ್ತಿರುವುದು, ಜೊತೆಗೆ ಸಮೀಪದ ಮನೆಯೊಂದರ ಮತ್ತೊಬ್ಬ ವ್ಯಕ್ತಿ ನೆರವಿಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಕಾರು - ಸ್ಕೂಟರ್ ಅಪಘಾತ ಅಂದುಕೊಂಡ್ರಾ.. ಮುಂದೇನಾಯ್ತು? ಎಥರ್ ಮಾಲೀಕ ಹಂಚಿಕೊಂಡ ವಿಡಿಯೋ ನೋಡಿ

ಸಾಮಾನ್ಯವಾಗಿ ಸ್ಕೂಟರ್‌ಗಳು ಕ್ಲಚ್ ಅಥವಾ ಗೇರ್ ಹೊಂದಿರುವುದಿಲ್ಲ. ಆಕ್ಸಿಲರೇಟರ್ ನೀಡಿದ ತಕ್ಷಣ ವೇಗವಾಗಿ ಚಲಿಸಲು ಪ್ರಾರಂಭಿಸುತ್ತವೆ. ಈ ಘಟನೆಯಲ್ಲಿ ಸ್ಕೂಟರ್ ನಿಲ್ಲಿಸಿದ ಕೂಡಲೇ ಯುವತಿ ಇಗ್ನಿಷನ್, ಇಲ್ಲವೇ ಎಂಜಿನ್ ಆಫ್ ಮಾಡಿದ್ದರೆ, ಆ ವ್ಯಕ್ತಿ ನೀರಿಗೆ ಬೀಳುವ ಸಂದರ್ಭ ಬರುತ್ತಿರಲಿಲ್ಲ. ಇನ್ನು, ಮೋಟಾರ್‌ಸೈಕಲ್ ಗಳು ಗೇರ್ ಹಾಗೂ ಕ್ಲಚ್ ಪಡೆದಿರುತ್ತವೆ. ಅವುಗಳಲ್ಲಿ ಇಂತಹ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ.

ಈ ಕುರಿತು 'ಎಕ್ಸ್' ಖಾತೆಯಲ್ಲಿ, ಎಥರ್ ಎನರ್ಜಿ ಸಹ - ಸಂಸ್ಥಾಪಕ ತರುಣ್ ಮೆಹ್ತಾ ಅವರು, 'ನಿಮ್ಮ ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಈ ರೀತಿಯ ಸಮಸ್ಯೆ ಕಾಣಿಸುವುದಿಲ್ಲ. ಅಪಾಯದ ಬಗ್ಗೆ ಕೊಂಚ ಸುಳಿವು ಸಿಕ್ಕರೂ ಮೋಟಾರ್ ಆಫ್ ಆಗುತ್ತದೆ. ಮುಂಬರುವ ಎಲೆಕ್ಟ್ರಿಕ್ ವಾಹನ (ಇವಿ)ಗಳಲ್ಲಿ ಮತ್ತಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಲು ನಾವುಗಳು ಯೋಚಿಸಬೇಕು' ಎಂದು ಬರೆದುಕೊಂಡಿದ್ದಾರೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 2.9 kWh ಮತ್ತು 3.7kWh ಬ್ಯಾಟರಿ ಪ್ಯಾಕ್. ಕ್ರಮವಾಗಿ, 1,38,000 ಹಾಗೂ ರೂ.1,44,921 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿವೆ. ಸಂಪೂರ್ಣ ಚಾರ್ಜ್ ನಲ್ಲಿ 115 km ರಿಂದ 145 km ರೇಂಜ್ ಕೊಡುತ್ತವೆ.

ಇನ್ನೊಂದು, ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡುವುದಾದರೆ, ಇದು ಕಂಪನಿಯಿಂದ ಕಡಿಮೆ ಬೆಲೆಗೆ ದೊರೆಯುವ ದ್ವಿಚಕ್ರ ವಾಹನವಾಗಿದೆ. ರೂ.1,29,999 ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದರಲ್ಲಿ 2.9 kWh ಬ್ಯಾಟರಿ ಪ್ಯಾಕ್ ಬಳಸಲಾಗಿದ್ದು, 115 km ರೇಂಜ್ ನೀಡುತ್ತದೆ. 3.9 ಸೆಕೆಂಡುಗಳಲ್ಲಿ 0-40 ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 17, 2023, 10:56 [IST]
English summary
Ather owner tarun mehta shares funny scooter accident video in twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+