ಎಂಥಾ ಮೂರ್ಖ ಕಳ್ಳರು... ಕಾರಿಗೆ ಎಟಿಎಂ ಕಟ್ಟಿ ಎಳೆದೊಯ್ಯಲು ಯತ್ನ, ವಿಡಿಯೋ ನೋಡಿ

ಇಬ್ಬರು ಕಳ್ಳರು ಹಾಲಿವುಡ್ ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದಂತೆ ತೋರುತ್ತಿದೆ. ಎಟಿಎಂ ಕೌಂಟರ್‌ಗೆ ನುಗ್ಗಿ ಸಾಹಸ ಮಾಡಿ ಹಣ ದೋಚಲು ಯತ್ನಿಸಿ ವಿಫಲವಾಗಿದ್ದಾರೆ. ಸಿನಿಮಾ ನೋಡಿ ನಿಜ ಜೀವನದಲ್ಲಿ ಅನುಸರಿಸಿದರೆ ಜೈಲು ಗ್ಯಾರೆಂಟಿ ಎಂಬುದನ್ನು ಕೊನೆಗೂ ಅರಿತುಕೊಂಡಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎಟಿಎಂ ಕೌಂಟರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಇಡೀ ದೃಶ್ಯ ಸೆರೆಯಾಗಿದೆ. ಇದೇ ವೀಡಿಯೊವನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿದೆ. ಕಳ್ಳರ ಕುರಿತು ತಮಷೆಯಾಗಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ವಿಡಿಯೋದಲ್ಲಿ ಸೆರೆಯಾದ ದೃಷ್ಯಗಳು ಕಳ್ಳರ ಮೂರ್ಖತನವನ್ನು ತೋರಿಸಿದೆ.

atm-robbery-marashtra-goes-wrong-video-viral

ವಿಷಯಕ್ಕೆ ಬಂದರೆ ಈ ವೀಡಿಯೊದಲ್ಲಿ, ಎಟಿಎಂ ಕೌಂಟರ್‌ನ ಹೊರಗೆ ಮುಖವಾಡ ಧರಿಸಿರುವ ಇಬ್ಬರು ವ್ಯಕ್ತಿಗಳನ್ನು ನಾವು ನೋಡಬಹುದು. ಅವರು ಎಟಿಎಂ ಮೆಷಿನ್ ಸುತ್ತ ಹಗ್ಗವನ್ನು ಕಟ್ಟಿ ಎಳೆದೊಯ್ಯುವ ಪ್ಲಾನ್ ಹಾಕಿದ್ದಾರೆ. ಇದಕ್ಕಾಗಿ ಕಾರೊಂದನ್ನು ಸಿದ್ಧಪಡಿಸಿ ಹಗ್ಗದ ಮತ್ತೊಂದು ತುದಿಯನ್ನು ಕಾರಿಗೆ ಕಟ್ಟಿದ್ದಾರೆ. ವಿಪರ್ಯಾಸ ಎಂದರೆ ಈ ಇಬ್ಬರು ಕಳ್ಳರಿಗೆ ಇದೇ ಮೊದಲ ಕಳ್ಳತನವೆಂಬಂತೆ ತೋರುತ್ತಿದೆ.

ಏಕೆಂದರೆ ಅವರ ಪ್ಲಾನೇ ಬೇರೆ ಆಗಿದ್ದೇ ಬೇರೆ. ಹಗ್ಗವನ್ನು ಕಟ್ಟಿದ ನಂತರ ಒಬ್ಬ ಕಳ್ಳ ಕಾರನ್ನು ಹತ್ತಿ ವೇಗವಾಗಿ ಮುನ್ನುಗ್ಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಹೊರಗೆ ಇನ್ನೊಬ್ಬ ಕಳ್ಳ ಎಟಿಎಂ ಬಾಗಿಲ ಬಳಿ ನಿಂತು ಕಾರನ್ನು ಮುಂದೆ ಹೇಗೆ ಓಡಿಸಬೇಕು ಎಂಬುದರ ಕುರಿತು ಕೆಲವು ಸೂಚನೆಗಳನ್ನು ನೀಡಿದ್ದಾನೆ. ಸೂಚನೆಗಳ ಪ್ರಕಾರ ಎರಡನೇ ಕಳ್ಳ ವೇಗವಾಗಿ ಕಾರನ್ನು ಮುನ್ನುಗ್ಗಿಸಿದ್ದಾನೆ.

atm-robbery-marashtra-goes-wrong-video-viral

ಆದರೆ ಎಟಿಎಂ ಮೆಷಿನ್ ಮುರಿದು ಬಂದು ಎಟಿಂಎಂ ಕೌಂಟರ್‌ನ ಬಾಗಿಲಿಗೆ ಬಡಿದಿದ್ದು, ಒಂದು ಬಾಗಿಲು ಮುರಿದಿದೆ. ಇದೇ ಮುರಿದ ಬಾಗಲು ಅಲ್ಲೇ ನಿಂತಿದ್ದ ಕಳ್ಳನಿಗೆ ಅಪ್ಪಳಿಸಿದೆ. ಸಿನಿಮಾದಲ್ಲಂತೂ ಕಾರನ್ನು ಬಳಸಿ ಎಟಿಎಂ ಅನ್ನು ಎಳೆಯುವ ಪ್ರಯತ್ನದಲ್ಲಿ ಅವರು ಯಶಸ್ವಿಯಾದರೆ ಇಲ್ಲಿ ಕಡಿಮೆ ಬಜೆಟ್‌ನ ಕಳ್ಳರು ವಿಫಲವಾಗಿದ್ದಾರೆ. ಅದಕ್ಕೂ ಸಣ್ಣ ಕಾರಣವಿದೆ. ಕಾರಿನ ಹೊರಗೆ ನಿಂತಿದ್ದ ವ್ಯಕ್ತಿ ಬಾಗಿಲನ್ನು ಬಿಟ್ಟು ಹೊರಬಂದಿದ್ದರೆ ಪ್ಲಾನ್ ಯಶಸ್ವಿಯಾಗುತ್ತಿತ್ತೇನೋ.

ಆದರೆ ಮೆಷಿನ್ ಹೊರಬರುವ ಮುನ್ನವೇ ಕೌಂಟರ್‌ನ ಬಾಗಿಲು ಮುರಿದು ಬಿದ್ದಿದ್ದು, ಅಲ್ಲೇ ನಿಂತಿದ್ದ ಕಳ್ಳನಿಗೆ ಬಡಿದು ನೆಲಕ್ಕೆ ಬಿದ್ದಿದ್ದಾನೆ. ಇದರ ನಂತರ ಕಳ್ಳನಿಗೆ ಗಾಯವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರು ಎಟಿಎಂ ಯಂತ್ರವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು, ಆದರೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಿಂದ ತಮ್ಮೊಂದಿಗೆ ಹೊತ್ತೊಯ್ಯಲು ಸಾಧ್ಯವಾಗಲಿಲ್ಲ. ಪೊಲೀಸರು ಬರುವ ಮುನ್ನವೇ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದಾರೆ.

atm-robbery-marashtra-goes-wrong-video-viral

ಯಾವ ಸಿನಿಮಾ ಪ್ರೇರಣೆ: ಹಾಲಿವುಡ್ ಚಲನಚಿತ್ರವಾದ "ಫಾಸ್ಟ್ ಅಂಡ್ ಫ್ಯೂರಿಯಸ್" ಸಿನಿಮಾದ ಒಂದು ಭಾಗದಲ್ಲಿ, ಪ್ರಮುಖ ಪಾತ್ರಗಳು ವಾಸ್ತವವಾಗಿ ಬ್ಯಾಂಕ್‌ನಿಂದ ವಾಲ್ಟ್ ಅನ್ನು ಲೂಟಿ ಮಾಡುತ್ತಾರೆ. ಎರಡು ಅಮೇರಿಕನ್ ಮಸಲ್ ಕಾರ್‌ಗಳನ್ನು ಬಳಸಿಕೊಂಡು ದೊಡ್ಡ ಮೆಟಲ್ ವಾಲ್ಟ್ ಅನ್ನು ಬೀದಿಗೆ ಎಳೆದು ಅಲ್ಲಿಂದ ಪರಾರಿಯಾಗುತ್ತಾರೆ.

ವಿಷಯ ಹೇಗೆ ಹೊರಬಂತು: ಎಟಿಎಂ ಅನ್ನು 24/7 ಮೇಲ್ವಿಚಾರಣೆ ಮಾಡುವ ಭದ್ರತಾ ತಂಡವು ದರೋಡೆಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿತು. ಕುಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಇತ್ತ ಮೂರ್ಖ ಕಳ್ಳರು ಪೊಲೀಸರನ್ನು ಕಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಲ್ಲಿ ಕಳ್ಳನೊಬ್ಬನಿಗೆ ತೀವ್ರ ಗಾಯಗಳಾಗಿರಬಹುದು ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 13, 2023, 17:12 [IST]
English summary
Atm robbery marashtra goes wrong video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+