ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಜನರು ಶ್ರೀಮಂತರಾಗಲು ಬಯಸುತ್ತಾರೆ. ಹಣ ಸಂಪಾದಿಸಲು ಹಗಲು ರಾತ್ರಿ ಕಷ್ಟ ಪಡುತ್ತಾರೆ. ಕೆಲವರು ಕಠಿಣ ಪರಿಶ್ರಮದ ಮೂಲಕ ಗುರಿಯನ್ನು ತಲುಪಿದರೆ, ಇನ್ನೂ ಕೆಲವರು ಅಡ್ಡ ದಾರಿಗಳ ಮೂಲಕ ಶ್ರೀಮಂತರಾಗುತ್ತಾರೆ.

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಲಂಚ ಪಡೆದೋ, ಕಳ್ಳತನ ಇಲ್ಲವೇ ದರೋಡೆ ಮಾಡಿಯೋ ಇಲ್ಲವೇ ಸಮಾಜ ದ್ರೋಹಿ ಕೆಲಸಗಳಂತಹ ಅಡ್ಡ ದಾರಿಗಳ ಮೂಲಕ ಹಣ ಸಂಪಾದನೆಗೆ ಇಳಿಯುತ್ತಾರೆ. ಇದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಹರ್ಮನ್ ಸಿಂಗ್ ಎಂಬಾತ ತನ್ನ ದುಬಾರಿ ಬೆಲೆಯ ಆಡಿ ಎ 4 ಕಾರು ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ತನ್ನ ಕಾರನ್ನು ಒಎಲ್ಎಕ್ಸ್ ಸೈಟಿನಲ್ಲಿ ಮಾರಾಟ ಮಾಡಲು ಜಾಹೀರಾತು ನೀಡಿದ್ದೆ. ಕಾರು ನೋಡಲು ಬಂದ ಇಬ್ಬರು ಟೆಸ್ಟ್ ಡ್ರೈವ್‌ಗೆ ಎಂದು ಹೇಳಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ದುಬಾರಿ ಬೆಲೆಯ ಕಾರ್ ಆದ ಕಾರಣ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತಮ್ಮ ತನಿಖೆಯನ್ನು ಚುರುಕುಗೊಳಿಸಿದರು.

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಪೊಲೀಸರ ತನಿಖೆ ತೀವ್ರಗೊಂಡ ನಂತರ ಕಾರಿನ ಮಾಲೀಕ ಹರ್ಮನ್ ಸಿಂಗ್ ಸಿಕ್ಕಿಬಿದ್ದಿದ್ದಾನೆ. ಕಾಣೆಯಾಗಿದೆ ಎಂದು ಹೇಳಲಾಗಿದ್ದ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಹರ್ಮನ್ ಸಿಂಗ್ ತನ್ನ ಕಾರ್ ಅನ್ನು ಅಡಗಿಸಿ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿದ್ದ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ವಿಮಾ ಹಣ ಪಡೆಯುವ ಸಲುವಾಗಿ ಈ ರೀತಿ ಸುಳ್ಳು ದೂರು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹರ್ಮನ್ ಸಿಂಗ್ ಹಾಗೂ ಆತನಿಗೆ ನೆರವು ನೀಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಸಾಮಾನ್ಯವಾಗಿ ವಿಮೆ ಕಂಪನಿಗಳು ಕಳುವಾದ ವಾಹನಗಳಿಗೂ ಪರಿಹಾರವನ್ನು ನೀಡುತ್ತವೆ. ಜೊತೆಗೆ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೂ ಪರಿಹಾರ ನೀಡುತ್ತವೆ. ಇದರಿಂದ ವಾಹನ ಮಾಲೀಕರಿಗೆ ಮಾತ್ರವಲ್ಲದೆ ಮೂರನೇ ವ್ಯಕ್ತಿಗೂ ಪರಿಹಾರ ನೀಡಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಇದಕ್ಕಾಗಿ ಭಾರತೀಯ ಮೋಟಾರು ವಾಹನ ಕಾಯ್ದೆಯು ವಾಹನ ವಿಮೆಯನ್ನು ಕಡ್ಡಾಯಗೊಳಿಸಿದೆ.ಕಳುವಾಗಿದೆ ಎಂದು ಹೇಳಲಾದ ಆಡಿ ಎ4 ಹಳೆಯ ತಲೆಮಾರಿನ ಕಾರ್ ಆಗಿದ್ದು, ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ಅಪ್‌ಡೇಟ್ ಮಾಡಲಾಗದ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ.

ಅಡ್ಡ ದಾರಿ ಮೂಲಕ ಹಣ ಸಂಪಾದನೆಗೆ ಯತ್ನ, ಅಂದರ್ ಆದ ಆಡಿ ಕಾರು ಮಾಲೀಕ

ಸದ್ಯಕ್ಕೆ ಹೊಸ ತಲೆಮಾರಿನ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರ್ ಅನ್ನು ಆರು ವಿವಿಧ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.41.49 ಲಕ್ಷದಿಂದ ರೂ.46.96 ಲಕ್ಷಗಳಾಗಿದೆ.

Most Read Articles

Kannada
English summary
Audi A4 owner caught while claiming fake insurance money. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X