ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರು ಹಾಗೂ ಬೈಕ್ ಮಾಲೀಕರು ಸ್ಪರ್ಧಿಸುವುದು ಸಹಜ. ಈಗ ಇದೇ ರೀತಿಯ ಮತ್ತೆರಡು ರೇಸ್‌ಗಳು ನಡೆದಿವೆ. ಕ್ಯಾಚ್ ಎ ಮೈಲ್‌ನ ಯೂಟ್ಯೂಬ್ ಚಾನೆಲ್‌ಗಳಲ್ಲಿ ಈ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಈ ವೀಡಿಯೊದಲ್ಲಿ ಸುಜುಕಿ ಜಿಎಸ್ಎಕ್ಸ್-ಆರ್ 1000 ಸೂಪರ್ ಬೈಕ್ ಹಾಗೂ ಆಡಿ ಆರ್ 8 ಸೂಪರ್ ಕಾರ್ ಸ್ಪರ್ಧೆಗಿಳಿದಿರುವುದನ್ನು ಕಾಣಬಹುದು. ಈ ಎರಡು ವಾಹನಗಳು ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಹೋಗುವುದನ್ನು ಕಾಣಬಹುದು.

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಸುಜುಕಿ ಜಿಎಸ್ಎಕ್ಸ್-ಆರ್ 1000 ಬೈಕ್ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ನಂತರ ತನ್ನ ವೇಗವನ್ನು 250 ಕಿ.ಮೀಗಳಿಗೆ ಹೆಚ್ಚಿಸಿಕೊಂಡು ಆಡಿ ಆರ್ 8 ಕಾರನ್ನು ಹಿಂದಿಕ್ಕುತ್ತದೆ. ಇಷ್ಟು ವೇಗದಲ್ಲಿ ಬೈಕ್ ಚಾಲನೆ ಮಾಡುವುದು ನಿಜಕ್ಕೂ ಅಪಾಯಕಾರಿ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಅನುಭವಿಗಳಂತೆ ಕಾಣುವ ಬೈಕ್ ಸವಾರ ಹಾಗೂ ಕಾರು ಡ್ರೈವರ್ ಇಬ್ಬರೂ ತಮ್ಮ ವಾಹನಗಳ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ಕ್ಯಾಚ್ ಎ ಮೈಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಸುಜುಕಿ ಜಿಎಸ್ಎಕ್ಸ್-ಆರ್ 1000 ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀಗಳಾಗಿದೆ.

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಸುರಕ್ಷತಾ ಕಾರಣಗಳಿಗಾಗಿ ಆಡಿ ಆರ್ 8 ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 301 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ. ವೀಡಿಯೊದಲ್ಲಿರುವ ಈ ಕಾರು 2013ರ ಆಡಿ ವಿ10 ಮಾದರಿಯಾಗಿದ್ದು, 5.2 ಲೀಟರ್ ಎಫ್‌ಎಸ್‌ಐ ಎಂಜಿನ್ ಹೊಂದಿದೆ. ಈ ಎಂಜಿನ್ 517 ಬಿಹೆಚ್‌ಪಿ ಪವರ್ ಹಾಗೂ 530 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಈ ಕಾರಿನಲ್ಲಿ 7-ಸ್ಪೀಡಿನ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ. ಈ ಕಾರು 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಇನ್ನು ಸುಜುಕಿ ಜಿಎಸ್ಎಕ್ಸ್-ಆರ್ 1000 ಬೈಕ್, 197 ಬಿಹೆಚ್‌ಪಿ ಪವರ್ ಹಾಗೂ 117 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸುಜುಕಿ ಜಿಎಸ್ಎಕ್ಸ್-ಆರ್ 1000 ಬೈಕ್, ಆಡಿ ಆರ್ 8 ಕಾರಿಗಿಂತ ಕಡಿಮೆ ತೂಕವನ್ನು ಹೊಂದಿದೆ. ಸುಜುಕಿ ಜಿಎಸ್ಎಕ್ಸ್-ಆರ್ 1000 ಬೈಕ್, ಆಡಿ ಆರ್ 8 ಕಾರಿಗಿಂತ ವೇಗವಾಗಿ ಅಂದರೆ ಕೇವಲ 3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ವೀಡಿಯೊದಲ್ಲಿದಲ್ಲಿರುವ ಬೈಕ್ ಸವಾರ ಹಾಗೂ ಕಾರು ಚಾಲಕ ಉತ್ತಮ ಅನುಭವವನ್ನು ಹೊಂದಿದ್ದರೂ ಸಹ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟು ಹೆಚ್ಚಿನ ವೇಗದಲ್ಲಿ ಬೈಕು ಅಥವಾ ಕಾರನ್ನು ಓಡಿಸುವುದು ಅಪಾಯಕಾರಿ. ಅದು ಕಾನೂನುಬಾಹಿರವೂ ಹೌದು.

ಅಚ್ಚರಿಯಾದರೂ ಸತ್ಯ: ಆಡಿ ಸೂಪರ್ ಕಾರ್ ಅನ್ನು ಹಿಂದಿಕ್ಕಿದ ಸುಜುಕಿ ಬೈಕ್

ಇಷ್ಟು ವೇಗದಲ್ಲಿ ವಾಹನಗಳನ್ನು ಓಡಿಸುವಾಗ ಮಾಡುವ ಒಂದು ಸಣ್ಣ ತಪ್ಪು ಸಹ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ರಸ್ತೆ ಅಪಘಾತದಿಂದಾಗಿ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಾವುನೋವುಗಳು ಉಂಟಾಗುತ್ತಿವೆ. ಪ್ರತಿ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.

Most Read Articles

Kannada
English summary
Suzuki GSX R1000 superbike overtakes Audi R8 supercar in street racing. Read in Kannada.
Story first published: Wednesday, May 20, 2020, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X