ಆಡಿ ಕಾರು vs ಡುಕಾಟಿ ಬೈಕ್ ರೇಸಿಂಗ್‌ನಲ್ಲಿ ಯಾವುದು ವಿಜಯಿ?
ರೇಸಿಂಗ್ ಆಟೋ ಉತ್ಸಾಹಿಗಳಲ್ಲಿ ತುಂಬಾ ಕ್ರೇಜ್ ಹುಟ್ಟಿಸಲು ಕಾರಣವಾಗುತ್ತದೆ. ಇದರಿಂದಲೇ ವಿಶ್ವದ ಎರಡು ಶ್ರೇಷ್ಠ ವಾಹನ ತಯಾರಕ ಕಂಪನಿಗಳ ನಡುವೆ ರೇಸಿಂಗ್ ಹಮ್ಮಿಕೊಳ್ಳಲಾಗಿತ್ತು.
ಸೂಪರ್ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಆಡಿ ಆರ್8 ಹಾಗೂ ಕ್ರೂಸರ್ ಬೈಕ್ ಸ್ಪೆಷಲಿಸ್ಟ್ ಬುಕಾಟಿ ಡೈಯವಾಲ್ ನಡುವೆ ಡ್ರಾಗ್ ರೇಸ್ ಆಯೋಜನೆ ಮಾಡಲಾಗಿತ್ತು.
ಕಾರು ಹಾಗೂ ಬೈಕ್ ನಡುವಣ ರೇಸಿಂಗ್ ಆಗಿದ್ದರಿಂದ ಯಾರು ವಿಜಯಿ ಆಗಬಹುದು ಎಂಬುದು ಭಾರಿ ಕುತೂಲಹ ಮೂಡಿಸಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿರುವ ಡುಕಾಟಿ ಬೈಕ್ ಆಡಿ ಸೂಪರ್ ಕಾರನ್ನು ಹಿಂದಿಕ್ಕುವ ಮೂಲಕ ಗಮನ ಸೆಳೆದಿದೆ.

ಬ್ರಿಟನ್‌ನ ಆಟೋ ಮ್ಯಾಗಜೀನ್‌ವೊಂದು ಈ ರೋಚಕ ಡ್ರಾಗ್ ರೇಸಿಂಗ್ ಆಯೋಜಿಸಿತ್ತು.

ಇದರಲ್ಲಿ 0-150 ಮೈಲ್ ವೇಗತೆಯಲ್ಲಿ ಸಾಗಿ ಮತ್ತೆ 0ಕ್ಕೆ ಬಂದು ನಿಲ್ಲಬೇಕಾಗಿತ್ತು. ಇಲ್ಲಿ ಡುಕಾಟಿ ಅತ್ಯುತ್ತಮ ರೇಸಿಂಗ್ ಬೈಕ್ ಎಂಬುದನ್ನು ಸಾಬೀತುಪಡಿಸಿದೆ.



ವೀಡಿಯೋ ವೀಕ್ಷಿಸಿ


Click it and Unblock the Notifications








