ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

By Nagaraja

ನೀವು ಕಾರಿಗಿಂತಲೂ ಬೆಲೆ ಬಾಳುವ ಸೈಕಲ್ ನೋಡಲು ಬಯಸುವೀರಾ? ಬನ್ನಿ ನಾವಿಂದು ಪರಿಚಯಿಸಲಿದ್ದೇವೆ. ಇದುವೇ ಆಡಿ ಸ್ಪೋರ್ಟ್ ರೇಸಿಂಗ್ ಬೈಕ್. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇದರಲ್ಲಿ ಬಳಕೆ ಮಾಡಿರುವುದೇ ಸೈಕಲ್ ಇಷ್ಟೊಂದು ದುಬಾರಿಯೆನಿಸಲು ಕಾರಣವಾಗಿದೆ.

ಅಷ್ಟಕ್ಕೂ ಆಡಿ ಸ್ಪೋರ್ಟ್ ರೇಸಿಂಗ್ ಸೈಕಲ್ ನ ಬೆಲೆ ಎಷ್ಟು ಅಂತೀರಾ? ಬೆಲೆ, ವೈಶಿಷ್ಟ್ಯ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

ಆಡಿ ಸ್ಪೋರ್ಟ್ ರೇಸಿಂಗ್ ಬೈಕ್ ಸರಿ ಸುಮಾರು 12.28 ಲಕ್ಷ ರು.ಗಳಷ್ಟು (USD 19,450) ಬೆಲೆ ಬರುತ್ತದೆ. ಹ್ಹಾಂ! ಹೋಂಡಾ ಸಿಟಿ ಕಾರಿನ ಬೆಲೆ ಇದಕ್ಕಿಂತಲೂ ಕಡಿಮೆಯಲ್ಲವೇ?

ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

ಅಲ್ಟ್ರಾ ಲೈಟ್ ವೇಟ್ ಕಾರ್ಬನ್ ಫೈಬರ್ ಫ್ರೇಮ್ ನಿಂದ ಇದನ್ನು ರಚಿಸಲಾಗಿದ್ದು, ಬರಿ 790 ಗ್ರಾಂಗಳಷ್ಟು ತೂಕವಿದೆ. ಇವುಗಳಿಗೆ ಚಕ್ರಗಳನ್ನು ಜೋಡಣೆ ಮಾಡಿದಾಗಲೂ ಇದರ ಒಟ್ಟಾರೆ ಭಾರ 5.8 ಕೆ.ಜಿ ಮಾತ್ರವಾಗುತ್ತದೆ.

ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

ಇದರ ವಿಶೇಷವೆಂದರೆ ಸೀಮಿತ 50 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ. ಅದು ಕೂಡಾ ಯಾರಾದರೂ ಆಸಕ್ತಿ ವ್ಯಕ್ತಪಡಿಸಿದರೆ ಮಾತ್ರ.

ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

ಈ ಹಗುರ ಭಾರದ ಸೈಕಲ್ ರಚಿಸಲು ಜರ್ಮನಿಯ ಲೈಟ್ ವೇಟ್ ಸಂಸ್ಥೆಯೊಂದಿಗೆ ಆಡಿ ಕೈಜೋಡಿಸಿಕೊಂಡಿತ್ತು. ಅಲ್ಲದೆ ಕ್ರೀಡಾ ಕಾರುಗಳಲ್ಲಿ ಬಳಕೆಯಾಗುವ ಕಾರ್ಬನ್ ಪರಿಕರಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ.

ಕಾರಿಗಿಂತಲೂ ದುಬಾರಿ ಸೈಕಲ್ ನೋಡಲು ಬನ್ನಿ!

ಅಷ್ಟೇ ಅಲ್ಲದೆ ಡ್ಯುರಾ ಏಸ್ ಡಿಐ2 ಡಿಜಿಟಲ್ ಶಿಫ್ಟಿಂಗ್ ಸಿಸ್ಟಂ, ಡ್ಯುರಾ ಏಸ್ ಬ್ರೇಕ್, ಶಿಮಾನೊ ಡ್ಯೂರಾ ಏಸ್ ಪಿಡಿ-9000 ಪೆಡಲ್ ಮತ್ತು ಶೆಲ್ಲೆ ಇಟಲಿಯಾ ಎಸ್ ಎಲ್ ಆರ್ ಕಿಟ್ ಬಳಕೆ ಮಾಡಲಾಗಿದೆ.

More from DriveSpark

Article Published On: Friday, May 22, 2015, 9:29 [IST]
English summary
Audi has come up with a bicycle called the Audi Sport Racing Bike. Well, its costs USD 19,450 (INR 12,38,682) only!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+