ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

Written By:

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಆಡಿ, ಓರ್ವ ವಿಶಿಷ್ಟ ವ್ಯಕ್ತಿಯ ಬೇಡಿಕೆಯ ಅನುಗುಣವಾಗಿ ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಶಕ್ತಿಶಾಲಿ ಎ8 ಎಲ್ ಆರ್ ಎಕ್ಸ್‌ಟೇಂಡಡ್ ಕಾರನ್ನು ನಿರ್ಮಿಸಿದೆ.

ಆ ವಿಶಿಷ್ಟ ವ್ಯಕ್ತಿ ಯಾರು ಗೊತ್ತೇ? ನಾರ್ವೇಜಿಯನ್ ರಾಜ ಹೆರಾಲ್ಡ್ ವಿ ಅವರ ಬೇಡಿಕೆಯಂತೇ ಆಡಿಯ ಈ ಕೋಟಿ ದುಬಾರಿಯ ಆರು ಬಾಗಿಲುಗಳ ಲಗ್ಷುರಿ ಲಿಮೊಸಿನ್ ಸೀಮಿತ ಕಾರನ್ನು ತಯಾರಿಸಲಾಗಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಸಾಮಾನ್ಯ ಆಡಿ ಎ8 ಎಲ್ ಆವೃತ್ತಿಯು 6.36 ಮೀಟರ್ ಗಳಷ್ಟು ಉದ್ದವನ್ನು ಹೊಂದಿರುತ್ತದೆ. ಆದರೆ ಆಡಿ ಎ8 ಎಲ್ ಎಕ್ಸ್‌ಟೇಂಡಡ್ ಮಾದರಿಯು ಇದಕ್ಕಿಂತಲೂ 1.09 ಮೀಟರ್ ಗಳಷ್ಟು ಹೆಚ್ಚು ಉದ್ದವನ್ನು ಪಡೆದಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಅದೇ ರೀತಿ ಸ್ಟ್ಯಾಂಡರ್ಡ್ ಆವೃತ್ತಿಯ 4.22 ಮೀಟರ್ ಉದ್ದಕ್ಕಿಂತಲೂ ಹೆಚ್ಚುವರಿ 1.09 ಮೀಟರ್ ಗಳಷ್ಟು ವರ್ಧಿತ ಚಕ್ರಾಂತರವನ್ನು ಇದು ಪೆಡದಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಕಾರಿನೊಳಗೆ ಸಂಚರಿಸುವ ವಿಶಿಷ್ಟ ವ್ಯಕ್ತಿಯ ಅದ್ಭುತ ಅನುಭವಕ್ಕಾಗಿ 2.40 ಮೀಟರ್ ಉದ್ದದ ಗ್ಲಾಸ್ ಪ್ಯಾನಲ್ ಲಗತ್ತಿಸಲಾಗಿದೆ. ಇದು ಕಾರಿನೊಳಗೆ ಹೆಚ್ಚು ಬೆಳಕು ಚೆಲ್ಲಲು ಸಹಕಾರಿಯಾಗಲಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಕಾರಿನೊಳಗೆ ಮುಂದಕ್ಕೆ ಮುಖಮಾಡಿರುವ ಆರು ಸೀಟುಗಳನ್ನು ಲಗತ್ತಿಸಲಾಗಿದೆ. ಲೆಥರ್ ಹೋದಿಕೆಯ ಸೀಟುಗಳನ್ನು ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾಗಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳಿಗೂ ಎಕ್ಸ್ ಕ್ಲೂಸಿವ್ ಮನರಂಜನಾ ಪರದೆಯ ವ್ಯವಸ್ಥೆಯು ಇರಲಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಅಂದ ಹಾಗೆ ಆಡಿ ಎ8 ಎಲ್ ಎಕ್ಸ್‌ಟೇಂಡಡ್ ಮಾದರಿಯು ಸೂಪರ್ ಚಾರ್ಜ್ಡ್ 3.0 ಲೀಟರ್ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 440 ಎನ್ ಎಂ ತಿರುಗುಬಲದಲ್ಲಿ 306 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ಅಂತೆಯೇ ಕೇವಲ 7.1 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ನಾರ್ವೇ ರಾಜನಿಗಾಗಿ ಆಡಿಯ ಶಕ್ತಿಶಾಲಿ ಕಾರು ನಿರ್ಮಾಣ

ರಜತ ಸಂಭ್ರಮದ ಅಂಗವಾಗಿ ನಾರ್ವೇ ರಾಜ ಹೆರಾಲ್ಡ್ ಈ ವಿಶಿಷ್ಟ ಕಾರನ್ನು ನಿರ್ಮಿಸುವಂತೆ ಆಡಿಗೆ ಆದೇಶಿಸಿದ್ದರು.

Read more on ಆಡಿ audi
English summary
Audi Unveils 6.36-Metre Long, Six-Door A8 L Extended
Story first published: Thursday, April 14, 2016, 11:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark