ಬೆವರಿಳಿಸುವ ಬಿಸಿಲು... ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಶ್ವಾನ!

ಬೆಂಗಳೂರಿನ ಟ್ರಾಫಿಕ್ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ, ನಗರದಲ್ಲಿ ಆ್ಯಂಬುಲನ್ಸ್ ಕೂಡ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಲು ಪರದಾಡುವಷ್ಟು ಟ್ರಾಫಿಕ್ ಇರುತ್ತದೆ. ಇನ್ನು ಸಾಮಾನ್ಯರ ಪರಿಸ್ಥಿತಿ ಹೇಳತೀರದ್ದು, ಆದರೆ ಇತ್ತೀಚಗೆ ಆಟೋ ಚಾಲಕ ಟ್ರಾಫಿಕ್‌ನಲ್ಲಿ ಶ್ವಾನದೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.

ಈ ಆಟೋ ಚಾಲಕ ನಗರದ ಟ್ರಾಫಿಕ್‌ ಅನ್ನು ಕಳೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾನೆ. ಚಾಲಕ ತನ್ನ ತೊಡೆಯ ಮೇಲೆ ಶ್ವಾನವನ್ನು ಕೂರಿಸಿಕೊಂಡು ಟ್ರಾಫಿಕ್ ಜಾಮ್‌ನಲ್ಲಿ ಕಾಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶ್ವಾನ ಕೂಡ ಯಾವುದೇ ಕೀಟಲೆ ಮಾಡದೇ ಚಾಲಕನೊಂದಿಗೆ ಶಾಂತವಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Dog stuck in traffic jam

ವಿಡಿಯೋ ಕುರಿತು ವಿವರಿಸುವುದಾದರೆ, ಆಟೋ ಚಾಲಕ ತನ್ನ ಶ್ವಾನದೊಂದಿಗೆ ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವುದನ್ನು ನೋಡಬಹುದು. ಇಬ್ಬರ ನಡುವಿನ ಮುದ್ದಾದ ಸಂವಾದವು ಎಂಥವರ ಮನಸ್ಸಿಗೂ ಏನೋ ತಿಳಿಯದ ಮುದ ನೀಡುತ್ತದೆ. ಚಾಲಕ ತನ್ನ ಶ್ವಾನದ ಮುಖವನ್ನು ಬಟ್ಟೆಯಿಂದ ಒರೆಸಿ ಸ್ವಚ್ಚಗೊಳಿಸಿದರೆ ಸುಮ್ಮನೆ ಕೂತ ಶ್ವಾನಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಅಲ್ಕಾ ಇಟಿಸ್ ಎಂಬಾಕೆ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ "ಬೆಂಗಳೂರಿನಲ್ಲಿ ಇದೊಂದು ಸಾಮಾನ್ಯ ದಿನ" ಎಂದು ಶೀರ್ಷಿಕೆ ಕೊಟ್ಟಿದ್ದಾರೆ. 2.3 ಮಿಲಿಯನ್ ವೀಕ್ಷಣೆಗಳೊಂದಿಗೆ, ವೀಡಿಯೊ Instagram ನಲ್ಲಿ ಹಲವರ ಹೃದಯಗಳನ್ನು ಗೆದ್ದಿದ್ದರೇ, ಶ್ವಾನ ಪ್ರೇಮಿಗಳ ಒಂದು ವಿಭಾಗವು ಬಿಸಿಲಿನಲ್ಲಿ ನಾಯಿಗಳನ್ನು ಹೊರಗೆ ಕರೆದೊಯ್ಯುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ನಮಗೆ ತಿಳಿದಿರುವಂತೆ ಚಾಲಕ ಟೈಮ್‌ಪಾಸ್‌ಗಾಗಿ ಶ್ವಾನವನ್ನು ಹೀಗೆ ಹೊರಗೆ ಕರೆತಂದಿಲ್ಲ. ಬದಲಾಗಿ ಅದಕ್ಕೆ ಆರೋಗ್ಯ ಸಮಸ್ಯೆ ಇರುವಂತೆ ಕಾಣುತ್ತಿದೆ. ಚಾಲಕ ಶ್ವಾನದ ಮುಖವನ್ನು ಒರೆಸುತ್ತಾ ಅದನ್ನು ಆರೈಕೆ ಮಾಡುವ ರೀತಿಯನ್ನು ಕಂಡರೆ ಆರೋಗ್ಯ ಸಮಸ್ಯೆ ಇರುವಂತೆ ಕಾಣುತ್ತಿದೆ. ಅಲ್ಲದೇ ಇಂತಹ ಬಿಸಿಲಿನಲ್ಲಿ ಯಾರೂ ಕೂಡ ನಾಯಿಗಳನ್ನು ಟೈಮ್‌ಪಾಸ್‌ಗೆಂದು ಟ್ರಾಫಿಕ್‌ನಲ್ಲಿ ಹೊರಗೆ ಕರೆತರುವುದಿಲ್ಲ.

ಹಾಗಾಗಿ ಶ್ವಾನವನ್ನು ವೆಟರ್ನರಿ ಆಸ್ಪತ್ರೆಗೆ ಕರೆದೊಯುತ್ತಿರಬಹುದು. ಅಲ್ಲದೇ ಶ್ವಾನ ಕೂಡ ಸುಸ್ತಾಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು, ಆದರೆ ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ತುಂಬಾ ಹೊತ್ತು ಬಿಸಿಲಿನಲ್ಲಿ ಇರುವುದರಿಂದ ಹೀಗಾಗಿರಬಹುದು ಎಂದು ಬಹುತೇಕರು ಕಮೆಂಟ್ ಮಾಡಿದ್ದಾರೆ. ಆದ್ರೂ ನಾಯಿಗಳಿಗೆ ಎಲ್ಲಾ ರೀತಿಯ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿ ಇರುವುದರಿಂದ ಹಾಗಾಗಿರುವುದಿಲ್ಲ ಎಂದು ಇನ್ನೂ ಕೆಲವರು ವಾದಿಸಿದ್ದಾರೆ.

ಏನೇ ಆಗಲಿ ಸೋಷಿಯಲ್ ಮೀಡಿಯಾದಲ್ಲಿ ನಾಯಿಗಳು ಆಟೋ ವಲಯಕ್ಕೆ ಸಂಬಂಧಪಟ್ಟಂತೆ ಯಾವುದೋ ಒಂದು ವಿಷಯಕ್ಕೆ ವೈರಲ್ ಆಗುತ್ತಿವೆ. ಇತ್ತೀಚೆಗೆ ಮುಂಬೈ ರೈಲಿನಲ್ಲಿ ಶ್ವಾನವೊಂದು ಪ್ರಯಾಣಿಸುವ ವಿಡಿಯೋ ಕೂಡ ವೈರಲ್ ಆಗಿತ್ತು. ಬೆಳಗ್ಗೆ ಒಂದು ರೈಲಿನಲ್ಲಿ ಪ್ರಯಾಣಿಸಿ ಸಂಜೆ ವೇಳೆಗೆ ಇನ್ನೊಂದು ರೈಲಿನಲ್ಲಿ ವಾಪಸ್ ತನ್ನ ಗೂಡನ್ನು ಸೇರುತ್ತಿತ್ತು. ಇದಕ್ಕೂ ಕೂಡ ಮಿಲಿಯನ್ ಗಟ್ಟಲೆ ವೀಕ್ಷಣೆಗಳು ಬಂದಿದ್ದವು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Saturday, May 27, 2023, 9:50 [IST]
English summary
Auto driver dog got stuck in bangalore traffic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+