ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಪ್ರತಿದಿನ ಲಕ್ಷಾಂತರ ಜನರು ಈ ವೈರಸ್ ಸೋಂಕಿಗೀಡಾಗುತ್ತಿದ್ದಾರೆ. ಭಾರತದಲ್ಲಿ 1 ಕೋಟಿಗೂ ಹೆಚ್ಚು ಜನರು ಕರೋನಾ ವೈರಸ್ ಸೋಂಕಿಗೀಡಾಗಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಈ ಪರಿಸ್ಥಿತಿಯು ಜನರಲ್ಲಿ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕೆಲವು ರಾಜ್ಯಗಳಲ್ಲಿ ವೀಕ್ ಎಂಡ್ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ವೈದ್ಯ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ನಡುವೆ ಕೆಲವು ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಈಗ ಆಟೋ ಡ್ರೈವರ್ ಒಬ್ಬರು ತಮ್ಮ ವಿಶಿಷ್ಟ ಬಗೆಯ ಸಹಾಯದಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಜಾರ್ಖಂಡ್‌ನ ರಾಂಚಿಯ ನಿವಾಸಿ ರವಿ ಅಗರ್‌ವಾಲ್ ಎಂಬ ಆಟೋ ಡ್ರೈವರ್ ಕರೋನಾ ವೈರಸ್ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ಸಾಗಲು ಯಾವುದೇ ಹಣ ಪಡೆಯದೇ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ರವಿ ಅಗರ್‌ವಾಲ್ ತಮ್ಮ ಆಟೋದಲ್ಲಿ ತುರ್ತು ಸನ್ನಿವೇಶದಲ್ಲಿ ಉಚಿತ ಸೇವೆ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಇದರ ಜೊತೆಗೆ ಈ ಪೋಸ್ಟರ್‌ನಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಇದರಿಂದ ಜನರು ಅವರನ್ನು ಸುಲಭವಾಗಿ ಸಂಪರ್ಕಿಸಬಹುದು. ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಲು ಹಾಗೂ ಅಭಿಯಾನವನ್ನು ಮತ್ತಷ್ಟುದೊಡ್ಡದಾಗಿಸಲು ರವಿ ಅಗರ್‌ವಾಲ್ ಸಾಮಾಜಿಕ ಜಾಲತಾಣಗಳ ನೆರವನ್ನೂ ಸಹ ಪಡೆದಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಸಾಮಾಜಿಕ ಜಾಲತಾಣದಲ್ಲಿಯೂ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಈ ಅಭಿಯಾನದ ಬಗ್ಗೆ ಮಾತನಾಡಿರುವ ರವಿ ಅಗರ್‌ವಾಲ್ ನಾನು ಈ ಅಭಿಯಾನವನ್ನು ಏಪ್ರಿಲ್ 15ರಂದು ಆರಂಭಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಅಂದು ಒಬ್ಬ ಮಹಿಳೆ ರಿಮ್ಸ್ ಆಸ್ಪತ್ರೆಗೆ ಹೋಗ ಬಯಸಿದ್ದರು. ಆದರೆ ಯಾರೊಬ್ಬರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಿಲ್ಲ. ನಾನೇ ಆಕೆಯನ್ನು ಆಸ್ಪತ್ರೆಗೆ ಬಿಟ್ಟು ಬಂದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ಆಸ್ಪತ್ರೆಗೆ ಹೋಗಬೇಕಾದ ಪ್ರತಿಯೊಬ್ಬರಿಗೆ ನಾನು ಉಚಿತ ಸೇವೆಯನ್ನು ನೀಡುತ್ತೇನೆ. ಇದಕ್ಕಾಗಿ ನನ್ನ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದೇನೆ. ಇದರಿಂದ ಅಗತ್ಯವಿರುವವರು ನನ್ನನ್ನು ಸುಲಭವಾಗಿ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕರೋನಾ ವೈರಸ್ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಾರೆ ಈ ಆಟೋ ಡ್ರೈವರ್

ರವಿ ಅಗರ್‌ವಾಲ್ ಮಾತ್ರವಲ್ಲದೇ ಬಿಹಾರದ ಪಾಟ್ನಾ ಮೂಲದ ವ್ಯಕ್ತಿಯೊಬ್ಬರು ಕರೋನಾ ವೈರಸ್ ಸೋಂಕಿತರಿಗೆ ತಮ್ಮ ಮಾರುತಿ ವ್ಯಾಗನ್ಆರ್ ಕಾರು ಬಳಸಿ ಆಕ್ಸಿಜನ್ ಸಿಲಿಂಡರ್'ಗಳನ್ನು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Auto driver from Ranchi giving free service for needy people. Read in Kannada.
Story first published: Friday, April 23, 2021, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X