ದುಬಾರಿ ದರ ಹೇಳಿದಾಗ ಬೇಡ ಎಂದು ರ‍್ಯಾಪಿಡೋ ಬುಕ್: ಟೆಕ್ಕಿಗೆ ಗುದ್ದಿ ಆಟೋ ಚಾಲಕನ ಗುಂಡಾವರ್ತನೆ
ರ‍್ಯಾಪಿಡೋ ಬೈಕ್ ಬೈಕ್ ಬುಕ್ ಮಾಡಿ ಕಾಯುತ್ತಿದ್ದ ಟೆಕ್ಕಿ ಮೇಲೆ ಆಟೋ ಚಾಲಕನೊಬ್ಬ ಆಟೋ ಹರಿಸಲು ಯತ್ನಿಸಿರುವ ಘಟನೆ ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿ ನಡೆದಿದೆ. ಈ ಮೂಲಕ ರಾಜಧಾನಿಯಲ್ಲಿ ರ‍್ಯಾಪಿಡೋ ಮತ್ತು ಆಟೋ ಚಾಲಕರ ನಡುವಿನ ಸಮರ ಮತ್ತೆ ಮುಂದುವರೆದಿದೆ. ಆದರೆ ಈ ಬಾರಿ ಆಟೋ ಚಾಲಕ ರ‍್ಯಾಪಿಡೋ ಪ್ರಯಾಣಿಕ ಮೇಲೆ ರೊಚ್ಚಿಗೆದಿದ್ದಾನೆ.
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ರ‍್ಯಾಪಿಡೋ ಬೈಕ್ ಸವಾರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಟೋ ಚಾಲಕರ ವಿರುದ್ದ, ರ‍್ಯಾಪಿಡೋ ಬೈಕ್ ಸವಾರರು ಕಳೆದ ಮಾರ್ಚ್ನಲ್ಲಿ ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ ಅದರ ಬೆನ್ನಲ್ಲೇ ರ‍್ಯಾಪಿಡೋ ಬೈಕ್ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ಆಟೋ ಚಾಲಕನೊಬ್ಬ ಆಟೋದಲ್ಲಿ ಗುದ್ದಿರುವ ಘಟನೆಯು ಹೆಚ್ಎಸ್ಆರ್ ಲೇಔಟ್ ಸೆಕ್ಟರ್ ನಡೆದಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಇಂದು ನಸುಕಿನ ಜಾವ 3.30ಕ್ಕೆ ಪ್ರಯಾಣಿಕರೊಬ್ಬರು ಆಟೋ ಚಾಲಕನಿಗೆ ದುಬಾರಿ ದರ ಹೇಳಿದಕ್ಕೆ, ನಿರಾಕರಿಸಿ ರ‍್ಯಾಪಿಡೋ ಅನ್ನು ಬುಕ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಪ್ರಯಾಣಿಕನಿಗೆ ಆಟೋದಿಂದ ಡಿಕ್ಕಿ ಹೊಡೆದು ಗುಂಡಾವರ್ತನೆ ತೊರಿದ್ದಾನೆ. ಆಟೋ ಚಾಲಕನ ಗೊಂಡ ವರ್ತನೆಯು ಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಲಾಗಿದೆ.
ದೂರು ದಾಖಿಲಿಸಿ, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಆಟೋದಲ್ಲಿ ತೆರಳಲು ಟೆಕ್ಕಿ ಮೊದಲು ಆಟೋದವರನ್ನು ಕರೆದಿದ್ದಾರೆ. ಅವರು ದುಬಾರಿ ದರ ಹೇಳಿದ್ದಕ್ಕೆ ಆಟೋ ಬೇಡ ಎಂದು ರ‍್ಯಾಪಿಡೋ ಬುಕ್ ಮಾಡುತ್ತೇನೆ ಎಂದು ವಾಪಸ್ ಬಂದಿದ್ದಾರೆ. ಇದರಿಂದ ಕೆರಳಿದ ಆಟೋ ಚಾಲಕ ಟೆಕ್ಕಿಗೆ ಆಟೋದಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಈ ಹಿಂದೆ, ಆಟೋ ಚಾಲಕ, ರ‍್ಯಾಪಿಡೋ ಬೈಕ್ ಚಾಲಕನಿಗೆ ಕಿರುಕುಳ ನೀಡಿದ ಘಟನೆಯು ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹಲವರು ಆಟೋ ಡ್ರೈವರ್ ಮೇಲೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರ‍್ಯಾಪಿಡೋ ಬೈಕ್ ಚಾಲಕನನ್ನು ನಿಲ್ಲಿಸಿ ಬೈದಿದ್ದ. ಅಲ್ಲದೇ ಕೋಪದಲ್ಲಿ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದಿದ್ದ. ಈ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು.
ಈ ಬಗ್ಗೆ ಆಟೋ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುಂತೆ ಪೊಲೀಸರಿಗೆ ಸೂಚಿಸಿದ್ದರು. ಇನ್ನು ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಯಲ್ಲಿ ಬುಕ್ಕಿಂಗ್ ಮಾಡಿ ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಟ್ರಾಫಿಕ್ ನಲ್ಲಿ ಬೈಕ್ ಟ್ಯಾಕ್ಸಿ ಮೂಲಕ ಸುಲಭವಾಗಿ ಹೋಗಬಹುದು. ಬೇರೆ ಊರುಗಳಿಂದ ಬೆಂಗಳೂರಿಗೆ ಬಂದಾಗ ಸಂದರ್ಶನಕ್ಕೆ ಅಥವಾ ಇತರ ಕೆಲಸಕ್ಕೆ ಸಮಯಕ್ಕೆ ಕಡಿಮೆ ದರಲ್ಲಿ ಹೋಗಲು ಬೈಕ್ ಟ್ಯಾಕ್ಸಿಯನ್ನು ಅಶ್ರಯಿಸುತ್ತಾರೆ.
ಹೆಚ್ಚಿನ ಆಟೋ ಚಾಲಕರು ನಾವು ಹೇಳಿದ ಸ್ಥಳಕ್ಕೆ ಬರಲು ಒಪ್ಪುದಿಲ್ಲ. ಕೆಲವು ಕಿ.ಮೀ ದೂರಕ್ಕೆ ದೊಡ್ಡ ಮೊತ್ತವನ್ನು ಹೇಳುತ್ತಾರೆ. ಇದರಿಂದ ಹೆಚ್ಚಿನವರು ಬ್ಯಾಕ್ಸಿ ಟ್ಯಾಕ್ಸಿಯನ್ನು ಬುಕ್ ಮಾಡುತ್ತಾರೆ. ಕೆಲವು ಬಾರಿ ಸ್ಮೇಹಿತರು ನಮ್ಮನ್ನು ಬಸ್ ಸ್ಟ್ಯಾಂಡ್ಗೆ ಕರೆದುಕೊಂಡು ಬರಲು ಬಂದಾಗ, ಆಟೋ ಚಾಲಕರು ತಡೆದು ರ‍್ಯಾಪಿಡೋ ಬೈಕ್ ಆ ಎಂದು ಮೊಬೈಲ್ ಕಸಿದುಕೊಂದು ಪರಿಶೀಲನೆ ಮಾಡಿದ ಅನುಭವ ಹಲವರಿಗೆ ಇದೆ.
ಎಲ್ಲಾ ಆಟೋ ಚಾಲಕರು ಕೂಡ ಆ ರೀತಿ ಇಲ್ಲ. ಕೆಲವರು ಜನರೊಗೆ ಸಹಾಯ ಮಾಡುವ ವ್ಯಕ್ತಿಗಳಿದ್ದಾರೆ. ಆದರೆ ಈ ನಡುವೆ ಗುಂಡಾವರ್ತನೆ ತೂರುವ ಆಟೋ ಚಾಲಕರಿಂದ ಎಲ್ಲಾರಿಗೂ ಕೆಟ್ಟ ಹೆಸರು ಬರುತ್ತಿದೆ. ಇನ್ನು ರ‍್ಯಾಪಿಡೋ ಬೈಕ್ ಸೇವೆಯಿಂದ ತಮ್ಮ ಬಾಡಿಗೆ ನಷ್ಟವಾಗುತ್ತಿದೆ ಎಂಬುದು ಆಟೋ ಚಾಲಕರ ಆರೋಪ ಆಗಿದೆ. ಇನ್ನು ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಎಂದು ಪ್ರತಿಭಟನೆ ಹಲವು ಬಾರಿ ನಡೆಸಿದ್ದಾರೆ.


Click it and Unblock the Notifications