ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್
ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಎಲ್ಲಾ ರೀತಿಯ ವ್ಯವಹಾರಗಳು ಕುಂಟಿತಗೊಂಡಿದ್ದು, ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ.

ಭಾರತದಲ್ಲಿ ಮಾರ್ಚ್ 24ರಂದು ಮೊದಲ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಗೊಳಿಸಲಾಯಿತು. ಆಟೋ ಹಾಗೂ ಟ್ಯಾಕ್ಸಿಗಳ ಸೇವೆಯನ್ನು ಸಹ ಸ್ಥಗಿತಗೊಳಿಸಲಾಯಿತು.

ಬಹುತೇಕ ಆಟೋ ಹಾಗೂ ಟ್ಯಾಕ್ಸಿ ಚಾಲಕರು ದೈನಂದಿನ ಆದಾಯದ ಮೇಲೆ ಜೀವನ ನಡೆಸುತ್ತಾರೆ. ಇದ್ದಕ್ಕಿದ್ದಂತೆ ಆಟೋ, ಟ್ಯಾಕ್ಸಿಗಳ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣಕ್ಕೆ ಇವುಗಳನ್ನೇ ನಂಬಿದ್ದವರು ಆದಾಯವಿಲ್ಲದೆ ಇರುವಂತಾಯಿತು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇವರಲ್ಲಿ ಅಬ್ದುಲ್ ಸಮದ್ ಸಹ ಒಬ್ಬರು. ಕೊಯಮತ್ತೂರು ಮೂಲದ ಅಬ್ದುಲ್ ಸಮದ್ ಸುಮಾರು 8 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಇತರ ಆಟೋ ಚಾಲಕರಂತೆ ಅಬ್ದುಲ್ ಸಮದ್ ಕೂಡ ಸಂಕಷ್ಟಕ್ಕೆ ಸಿಲುಕಿದರು.

ಸುಮಾರು 2 ತಿಂಗಳು ಆಟೋ ಓಡಿಸದ ಕಾರಣ, ಅಬ್ದುಲ್ ಸಮದ್‌ರವರಿಗೆ ಯಾವುದೇ ಆದಾಯವಿರಲಿಲ್ಲ. ಇದರಿಂದ ದೃತಿಗೆಡದ ಅವರು ತಮ್ಮ ಆಟೋದಿಂದಲೇ ಆದಾಯಗಳಿಸಲು ಮುಂದಾದರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತಮ್ಮ ಆಟೋವನ್ನೇ ಬಾಕ್ಸ್ ಅಂಗಡಿಯಾಗಿ ಪರಿವರ್ತಿಸಿ ನೀರಿನ ಬಾಟಲ್ ಹಾಗೂ ಸ್ನ್ಯಾಕ್ಸ್‌ಗಳ ಮಾರಾಟವನ್ನು ಆರಂಭಿಸಿದರು. ಇದರಿಂದ ಅವರು ಆದಾಯ ಗಳಿಸುತ್ತಿದ್ದಾರೆ.

ಈಗ ಆಟೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕರೋನಾ ಹರಡಬಹುದೆಂಬ ಭಯದಿಂದಾಗಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಹೆಚ್ಚು ಪ್ರಯಾಣಿಸುತ್ತಿಲ್ಲ. ಈ ಕಾರಣಕ್ಕೆ ಆಟೋ ಡ್ರೈವರ್‌ಗಳಿಗೆ ಮೊದಲಿನಂತೆ ಆದಾಯವಿಲ್ಲದಂತಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರಣಕ್ಕೆ ಅಬ್ದುಲ್ ಸಮದ್‌ರವರು ಇನ್ನೂ ತಮ್ಮ ಆಟೋದಲ್ಲಿ ಅಂಗಡಿಯನ್ನು ಮುಂದುವರೆಸುತ್ತಿದ್ದಾರೆ. ಈಗ ಅವರು ಆಟೋ ಚಾಲನೆಯನ್ನು ಆರಂಭಿಸಿದ್ದಾರೆ. ಪ್ರಯಾಣಿಕರು ಇಲ್ಲದ ವೇಳೆಯಲ್ಲಿ ಆಟೋದ ಹಿಂಬದಿಯ ಕರ್ಟೇನ್ ಮೇಲಕ್ಕೆತ್ತಿ ಬಾಕ್ಸ್ ಅಂಗಡಿಯಾಗಿ ಬಳಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ ಸಮದ್‌ರವರು ಆಟೋ ಹಿಂಭಾಗವನ್ನು ಬಾಕ್ಸ್ ಅಂಗಡಿಯಂತೆ ಸಿದ್ದಪಡಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲಎಂದು ಹೇಳಿದ್ದಾರೆ. ಅಬ್ದುಲ್ ಸಮದ್‌ರವರ ಈ ವೀಡಿಯೊವನ್ನು ದಿನಮಲರ್ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮದೇ ಆದ ವಾಹನಗಳಲ್ಲಿ ಓಡಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಆಟೋ, ಟ್ಯಾಕ್ಸಿಗಳನ್ನೇ ಅವಲಂಬಿಸಿರುವವರು ಈ ರೀತಿಯಲ್ಲಿ ಆಲೋಚನೆ ಮಾಡುವುದು ಅವಶ್ಯಕ.


Click it and Unblock the Notifications








