ಕರೋನಾ ವೈರಸ್ ತಡೆಗೆ ಹೊಸ ಯೋಜನೆ ರೂಪಿಸಿದ ಆಟೋ ಚಾಲಕರು
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ನಿಂದ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ಜೂನ್ 8ರಿಂದ ಸಾರಿಗೆ ಸೇವೆಗಳು ಆರಂಭವಾಗಲಿವೆ. ಮುಂಬೈ ನಗರವು ಕರೋನಾ ವೈರಸ್ ಸೋಂಕಿನಿಂದ ಹೆಚ್ಚು ತತ್ತರಿಸಿದೆ. ಈ ಕಾರಣಕ್ಕೆ ಕ್ಯಾಬ್ ಹಾಗೂ ಆಟೋ ಚಾಲಕರು ತಮ್ಮದೇ ಆದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಮುಂಬೈ ನಗರದಲ್ಲಿ ಲಾಕ್‌ಡೌನ್ ವಿನಾಯಿತಿ ಹಿನ್ನೆಲೆಯಲ್ಲಿ ಆಟೋ ಹಾಗೂ ಕ್ಯಾಬ್ ಸೇವೆಗಳನ್ನು ಪುನರಾರಂಭಿಸಲಾಗಿದೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಆಟೋರಿಕ್ಷಾ ಚಾಲಕರು ಆಟೋಗಳಲ್ಲಿ ಪ್ಲಾಸ್ಟಿಕ್ ಶೀಲ್ಡ್‌ಗಳನ್ನು ಅಳವಡಿಸುತ್ತಿದ್ದಾರೆ. ಆಟೋ ರಿಕ್ಷಾಗಳಲ್ಲಿ ಮಾತ್ರವಲ್ಲದೇ ಕ್ಯಾಬ್ ಹಾಗೂ ಟ್ಯಾಕ್ಸಿಗಳಲ್ಲೂ ಈ ಶೀಲ್ಡ್‌ಗಳನ್ನು ಅಳವಡಿಸಲಾಗಿದೆ.

ಈ ಶೀಲ್ಡ್‌ಗಳನ್ನು ಡ್ರೈವರ್ ಕ್ಯಾಬಿನ್ ಹಾಗೂ ಹಿಂದಿನ ಸೀಟುಗಳ ನಡುವೆ ಇರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಖಾಸಗಿ ವಾಹನ, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕಾಗಿ ಹಲವಾರು ನಿಯಮಗಳನ್ನು ಮಾಡಲಾಗಿದೆ. ಟ್ಯಾಕ್ಸಿಯಲ್ಲಿ ಚಾಲಕನ ಜೊತೆಗೆ ಇಬ್ಬರು ಪ್ರಯಾಣಿಕರು ಪ್ರಯಾಣಿಸಬಹುದು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ತ್ರಿಚಕ್ರ ವಾಹನಗಳಲ್ಲಿ ಚಾಲಕನ ಹೊರತಾಗಿ ಒಬ್ಬರು ಪ್ರಯಾಣಿಸಬಹುದು. ದ್ವಿಚಕ್ರ ವಾಹನದಲ್ಲಿ ಒಬ್ಬರು ಮಾತ್ರ ಸವಾರಿ ಮಾಡಬಹುದು. ಸಾರ್ವಜನಿಕ ಸಾರಿಗೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಇದರಲ್ಲಿ ವಾಹನಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಆದೇಶಿಸಲಾಗಿದೆ. ಮಹಾರಾಷ್ಟ್ರದ ಹೊರತಾಗಿ, ತಮಿಳುನಾಡು, ಕೇರಳ, ದೆಹಲಿ, ಗುಜರಾತ್‌ನಂತಹ ರಾಜ್ಯಗಳಲ್ಲಿ ಕ್ಯಾಬ್ ಹಾಗೂ ಆಟೋ ಚಾಲಕರು ಸೋಂಕು ತಡೆಗಟ್ಟಲು ಈ ರೀತಿಯ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗಾಗಿ ಸುರಕ್ಷತಾ ಸಾಮಗ್ರಿಗಳನ್ನು ತಯಾರಿಸುತ್ತಿದೆ. ಇವುಗಳಲ್ಲಿ ಕಾರುಗಳಿಗಾಗಿ ಪಾರದರ್ಶಕವಾದ ಶೀಲ್ಡ್, ಫೇಸ್ ಶೀಲ್ಡ್, ಫೇಸ್ ಮಾಸ್ಕ್‌ನಂತಹ ಸುರಕ್ಷತಾ ಸಾಧನಗಳು ಸೇರಿವೆ.

ವರದಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 82,968 ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 42,609 ಪ್ರಕರಣಗಳು ಸಕ್ರಿಯವಾಗಿವೆ. 37,390 ಜನರು ಗುಣಮುಖರಾಗಿದ್ದರೆ, 2,969 ಜನರು ಸಾವನ್ನಪ್ಪಿದ್ದಾರೆ.


Click it and Unblock the Notifications