ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಭಾರತದಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತಿವೆ. ವೇಗವಾಗಿ ವಾಹನ ಚಾಲನೆ ಮಾಡುವುದು ಸಹ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕೆ ವೇಗವಾಗಿ ವಾಹನ ಚಾಲನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತದೆ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ. ಇದರ ಅಂಗವಾಗಿ ಪ್ರಮುಖ ನಗರಗಳ ಪ್ರಮುಖ ಪ್ರದೇಶಗಳಲ್ಲಿ ಸ್ವಯಂಚಾಲಿತ ವೇಗ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಈ ಕ್ಯಾಮೆರಾಗಳು ನಿಗದಿತ ವೇಗಕ್ಕಿಂತ ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಆ ವಾಹನಗಳ ಫೋಟೋಗಳನ್ನು ತೆಗೆಯುತ್ತವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ರೀತಿಯ ಕ್ಯಾಮೆರಾಗಳನ್ನು ಹಲವು ಸ್ಥಳಗಳಲ್ಲಿ ಅಳವಡಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಈ ಕ್ಯಾಮರಾಗಳು ಪೊಲೀಸರ ಕೆಲಸವನ್ನು ಸುಲಭವಾಗಿಸುತ್ತವೆ. ಆದರೆ ಈ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸದೇ ತಪ್ಪಾಗಿ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳೂ ಸಹ ಇರುತ್ತವೆ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಇದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಲಾಗಿದೆ ಎಂಬ ಕಾರಣಕ್ಕೆ ಜಾವಾ 42 ಬೈಕಿಗೆ ದಂಡ ವಿಧಿಸಲಾಗಿದೆ. ವಾಸ್ತವವಾಗಿ ಬ್ಯಾಟರಿಯಲ್ಲಿ ತೊಂದರೆಯುಂಟಾದ ಕಾರಣಕ್ಕೆ ಜಾವಾ 42 ಬೈಕ್ ಅನ್ನು ಟೆಂಪೊದಲ್ಲಿ ಕೊಂಡೊಯ್ಯಲಾಗುತ್ತಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಟೆಂಪೊದಲ್ಲಿ ಸಾಗುತ್ತಿರುವ ಜಾವಾ 42 ಬೈಕ್ ಅತಿ ವೇಗದಲ್ಲಿ ಚಲಿಸಲು ಹೇಗೆ ಸಾಧ್ಯ. ಆಟೋಮ್ಯಾಟಿಕ್ ಸ್ಪೀಡ್ ಕ್ಯಾಮೆರಾಗಳು ಒಂದು ವ್ಯಾಪ್ತಿಯವರೆಗೆ ಮಾತ್ರ ಸರಿಯಾಗಿ ಕಾರ್ಯನಿರ್ವಹಿಸಬಲ್ಲವು ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ದೆಹಲಿಯ ಎರಡು ಸ್ಥಳಗಳಲ್ಲಿ ವೇಗವಾಗಿ ಸಾಗಿದೆ ಎಂಬ ಕಾರಣಕ್ಕೆ ಈ ಜಾವಾ 42 ಬೈಕಿಗೆ ದಂಡ ವಿಧಿಸಲಾಗಿದೆ. ಈ ಬೈಕಿನ ಮಾಲೀಕ ಮನೋಜ್ ಕುಮಾರ್ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಫೇಸ್‌ಬುಕ್ ಪೇಜ್'ನಲ್ಲಿ ತಮಗಾದ ಅನುಭವವನ್ನು ಇತರರೊಂದಿಗೆ ಶೇರ್ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಇಲ್ಲಿ ಎದುರಾಗಿರುವ ಸಮಸ್ಯೆಯೆಂದರೆ ಆಟೋಮ್ಯಾಟಿಕ್ ಸ್ಪೀಡ್ ಕ್ಯಾಮರಾಗಳಿಗೆ ಬೇರೊಂದು ವಾಹನದಲ್ಲಿ ಸಾಗುತ್ತಿರುವ ಬೈಕ್ ಹಾಗೂ ತಾನೇ ಸ್ವತಃ ಸಾಗುತ್ತಿರುವಬೈಕುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೌಶಲ್ಯವಿಲ್ಲ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಮನುಷ್ಯರು ಈ ವ್ಯತ್ಯಾಸವನ್ನು ಸುಲಭವಾಗಿ ಗ್ರಹಿಸುತ್ತಾರೆ. ಆದರೆ ಆಟೋಮ್ಯಾಟಿಕ್ ಸ್ಪೀಡ್ ಕ್ಯಾಮರಾಗಳು ಯಾವುದಕ್ಕಾಗಿ ಪ್ರೋಗ್ರಾಮ್ ಮಾಡಲಾಗಿದೆಯೋ ಅವುಗಳನ್ನು ಮಾತ್ರ ನಿಖರವಾಗಿ ಮಾಡುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಈ ಕಾರಣಕ್ಕೆ ಟೆಂಪೋದಲ್ಲಿ ಸಾಗಿದ ಜಾವಾ 42 ಬೈಕಿಗೆ ತಪ್ಪಾಗಿ ದಂಡ ವಿಧಿಸಲಾಗಿದೆ. ಭಾರತದಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ.

ಟೆಂಪೋದಲ್ಲಿ ಸಾಗಿದ ಬೈಕಿಗೂ ದಂಡ ವಿಧಿಸಿದ ಸ್ಪೀಡ್ ಕ್ಯಾಮರಾ

ಇದರಿಂದಾಗಿ ತಪ್ಪು ಮಾಡದ ವಾಹನ ಸವಾರರು ಸಹ ಅನಗತ್ಯವಾಗಿ ದಂಡ ತೆರುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಸಾಧನಗಳನ್ನು ಬಳಸುವುದು ಅವಶ್ಯಕ. ಈ ಚಿತ್ರಗಳನ್ನು ಮನೋಜ್ ಕುಮಾರ್'ರವರಿಂದ ಪಡೆಯಲಾಗಿದೆ.

Most Read Articles

Kannada
English summary
Automatic speed camera imposes wrong fine on Jawa 42 bike in Delhi. Read in Kannada.
Story first published: Saturday, February 20, 2021, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X