ಅಯೋಧ್ಯೆ ಮಾತ್ರವಲ್ಲ, ಅಮೇರಿಕಾದಲ್ಲೂ ರಾಮಜಪ: ಬೀದಿ ಬೀದಿಯೂ ಕೇಸರಿಮಯ, ಕಾರ್‌‌ಶೋ!

ಇಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗುವ ಕಾರಣ ಭಾರತದ ಮೂಲೆ ಮೂಲೆಯಲ್ಲಿ ರಾಮ, ರಾಮ ಎಂದು ಮೊಳಗುತ್ತಿದೆ. ದೇಶದ ನಾನಾ ಕಡೆಯಿಂದ ಜನರು ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಅಲ್ಲಿಗೆ ಹೋಗಲು ಆಗದೇ ಇರುವವರು ತಮ್ಮ ತಮ್ಮ ಮನೆ ಮತ್ತು ಊರಿನಲ್ಲಿ ಇದನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇದಿಷ್ಟು ಭಾರತದ ಒಳಗೆ ನಡೆಯುತ್ತಿರುವ ವಿಷಯವಾದರೆ, ಭಾರತದ ಹೊರಗೆ ಬೇರೆಯದೇ ನಡೆಯುತ್ತಿದೆ. ಹೌದು, ಭಾರತದ ರಾಮ ಮಂದಿರ (Ayodhya Ram Mandir) ಉದ್ಘಾಟನೆಯನ್ನು ಕಣ್ಣು ತುಂಬಿಕೊಳ್ಳಲು ಸಾಧ್ಯವಾಗದೇ ಇರುವ ಹೊರ ದೇಶದ ಭಾರತೀಯರು ಅಲ್ಲಿಯೂ ಸಹ ರಾಮ ನಾಮ ಜಪವನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಅಮೇರಿಕಾದಲ್ಲಿರುವ ಭಾರತೀಯ ಹಿಂದುಗಳು.

Ayodhya Ram Mandir Fever Spread Across California America, car rally and More

ಅಮೇರಿಕಾದ ಕ್ಯಾಮಿಫೋರ್ನಿಯಾದಲ್ಲಿ ನಡೆದ ಘಟನೆಗಳ ಚಿತ್ರಗಳನ್ನು ನೋಡಿದರೆ ಅದು ಕ್ಯಾಲಿಫೋರ್ನಿಯಾ ಅಥವಾ ಅಯೋಧ್ಯೆಯಾ ಎಂಬ ಸಂಶಯ ಮೂಡುವುದಂತೂ ಖಂಡಿತ. ಇಲ್ಲಿನ ಭಾರತೀಯ ಸಮುದಾಯದವರು ಸಾವಿರಕ್ಕೂ ಅಧಿಕ ಮಂದಿಯೊಂದಿಗೆ ಸೇರಿ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ರಾಮ ಜಪವನ್ನು ಮಾಡಲು ಆರಂಭಿಸಿದ್ದಾರೆ. ಇದರ ಜೊತೆಗೆ ಬೃಹತ್‌ ಕಾರ್‌ ರ್ಯಾಲಿಯನ್ನು ಸಹ ಶನಿವಾರ ಆಯೋಜನೆ ಮಾಡಿದ್ದರು.

ಶನಿವಾರ ರಾತ್ರಿ ಇಲ್ಲಿನ ಸನ್‌ವಾಲೆ ಯಿಂದ ಹಿಡಿದು ಸ್ಪ್ರಿಂಗ್‌ ಬಾರ್ಟ್‌ ಸ್ಟೇಷನ್‌ ಮತ್ತು ಗೋಲ್ಡನ್‌ ಗೇಟ್‌ ವರೆಗೂ ಈ ಕಾರು ಜಾಥಾ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಜೊತೆಗೆ ಸ್ಪೆಷಲ್‌ ಟೆಸ್ಲಾ ಕಾರ್‌ ಲೈಟ್‌ ಶೋ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಮುಗಿಸಲಾಗಿತ್ತು.

Ayodhya Ram Mandir Fever Spread Across California America, car rally and More

ಡಿಜಿಟಲ್‌ ಬಿಲ್‌ಬೊರ್ಡ್‌ ಅನ್ನು ಕಾರುಗಳಲ್ಲಿ ಅಳವಡಿಸಲಾಗಿದ್ದು, ಇದರ ಮೂಲಕ ರಾಮಾಯಣದ ಹಲವಾರು ದೃಶ್ಯಗಳು, ಈಗಿನ ರಾಮ ಮಂದಿರದ ಚಿತ್ರಗಳು ಮತ್ತು ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭ ಮತ್ತು ಇತರ ವಿಷಯಗಳನ್ನು ತೋರಿಸಲಾಗಿತ್ತು. ಇದರಿಂದಲೇ ತಿಳಿಯುತ್ತದೆ ರಾಮ ಮಂದಿರ ಭಾರತೀಯ ಹಿಂದೂಗಳಿಗೆ ಎಷ್ಟೊಂದು ಮುಖ್ಯವಾದುದು ಎಂದು.

ಇನ್ನು ಭಾರತದ ಹಲವಾರು ಕಡೆಯಿಂದ ಹಲವು ಗಣ್ಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಅಯೋಧ್ಯೆಗೆ ಚಿತ್ರರಂಗದ ಬಹಳಷ್ಟು ಸೆಲೆಬ್ರಿಟಿಗಳು ಭೇಟಿ ಕೊಟ್ಟಿದ್ದಾರೆ. ಚಿತ್ರರಂಗದ ಗಣ್ಯರಿಗೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಈಗ ಸೆಲೆಬ್ರಿಟಿಗಳು ಒಟ್ಟಾಗಿ ರಾಮ ಜನ್ಮಭೂಮಿಗೆ ಬಂದಿದ್ದಾರೆ.

ಅಯೋಧ್ಯೆಯಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಾಲಿವುಡ್ ನಟ ಅನುಪಮ್ ಖೇರ್ ಭೇಟಿಯಾಗಿದ್ದಾರೆ. ಇವರಿಬ್ಬರೂ ಅಯೋಧ್ಯೆಗೆ ಒಂದು ದಿನ ಮೊದಲೇ ಬಂದಿದ್ದರು. ರಜನಿ ಧನುಷ್ ಜೊತೆಯಾಗಿ ಬಂದಿದ್ದರು. ಯಾವುದೇ ಜಾತಿ ಭೇಧವಿಲ್ಲದೆ ಹಲವು ಧರ್ಮದವರೂ ಸಹ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಈ ಭವ್ಯವಾದ ರಾಮ ಮಂದಿರದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಂದು ರಾಮಲಲ್ಲಾನ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ದೇಶಾದ್ಯಂತ ಅನೇಕ ಗಣ್ಯ ಅತಿಥಿಗಳು ಕಾರ್ಯಕ್ರಮವನ್ನು ಅಲಂಕರಿಸಲಿದ್ದಾರೆ. ಈ ದಿನದಂದು ದೇಶಾದ್ಯಂತ ಹಬ್ಬದ ವಾತಾವರಣವಿದ್ದು, ಪ್ರತಿ ರಾಜ್ಯದಲ್ಲೂ ರಾಮಭಕ್ತರು ತಮ್ಮ ಮನೆಗಳಲ್ಲಿ ವಿಶೇಷ ಆಚರಣೆ ಹಾಗೂ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ಕೆಲವು ಸುಂದರವಾದ ಶುಭಾಶಯ ಸಂದೇಶಗಳು ಇಲ್ಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 22, 2024, 17:04 [IST]
English summary
Ayodhya ram mandir fever spread across california america car rally and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+