ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಭಾರತದಲ್ಲಿ ಈಗ ಮಳೆಗಾಲ ಆರಂಭವಾಗಿದೆ. ಸಕಾಲಕ್ಕೆ ಸುರಿಯುವ ಮಳೆಯಿಂದ ಪರಿಸರಕ್ಕೆ ಹಾಗೂ ದೇಶದ ರೈತರಿಗೆ ಅನುಕೂಲವಾಗುತ್ತದೆ. ಆದರೆ ನಿರೀಕ್ಷೆಗೂ ಮೀರಿ ಸುರಿಯುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಕೆಲವು ಸಂದರ್ಭಗಳಲ್ಲಿ ಭಾರೀ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾದಾಗ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡ ಬೇಕಾಗುತ್ತದೆ. ಇದರಿಂದ ವಾಹನಗಳು ಕಿ.ಮೀಗಟ್ಟಲೇ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಮಳೆ ಸೃಷ್ಟಿಸುವ ಅವಾಂತರದಿಂದ ಕೆಲವೊಮ್ಮೆ ವಾಹನಗಳಿಗೂ ಭಾರೀ ಹಾನಿ ಉಂಟಾಗುತ್ತದೆ. ನವದೆಹಲಿಯಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಈ ಘಟನೆ ನೋಡುಗರಲ್ಲಿ ಅಚ್ಚರಿಯನ್ನುಂಟು ಮಾಡುತ್ತದೆ.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ 10 ಕಾರು ರಸ್ತೆಯಲ್ಲಿರುವ ಗುಂಡಿಯೊಳಗೆ ಬಿದ್ದಿದೆ. ಹ್ಯುಂಡೈ ಐ 10 ಕಾರು ರಸ್ತೆ ಗುಂಡಿಯಲ್ಲಿ ಬಿದ್ದಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ನಂತರ ಈ ಕಾರನ್ನು ಕ್ರೇನ್ ಸಹಾಯದಿಂದ ಗುಂಡಿಯಿಂದ ಹೊರ ತೆಗೆಯಲಾಗಿದೆ. ವೀಡಿಯೊದಲ್ಲಿರುವ ಬಿಳಿ ಬಣ್ಣದ ಹ್ಯುಂಡೈ ಗ್ರ್ಯಾಂಡ್ ಐ 10 ಕಾರು ರಸ್ತೆ ಗುಂಡಿಯೊಳಗೆ ಬಿದ್ದ ನಂತರ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಈ ನಿರಂತರ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆಯೊಂದು ದೇಶದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲೂ ನಡೆದಿತ್ತು.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಆ ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಹ್ಯುಂಡೈ ಕ್ರೆಟಾ ಕಾರು ರಸ್ತೆ ಕುಸಿದ ಕಾರಣ ಗುಂಡಿಯೊಳಗೆ ಬಿದ್ದು ಸಂಪೂರ್ಣವಾಗಿ ಮುಳುಗಿತ್ತು. ಮುಂಬಯಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಈ ಘಟನೆ ಸಂಭವಿಸಿತ್ತು.

ಮುಂಬಯಿನಲ್ಲಿ ಹ್ಯುಂಡೈ ಕ್ರೆಟಾ ಕಾರ್ ಅನ್ನು ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ಭಾರೀ ಮಳೆಯಿಂದಾಗಿ ವಾಹನಗಳು ನಿಲ್ಲಿಸಿದ್ದ ಪಾರ್ಕಿಂಗ್ ಪ್ರದೇಶವು ದುರ್ಬಲಗೊಂಡು, ಕುಸಿದ ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿತ್ತು.

ಹದಗೆಟ್ಟ ರಸ್ತೆಗಳಿಂದಾಗಿ ರಸ್ತೆ ಗುಂಡಿಯೊಳಗೆ ಬಿದ್ದ ಹ್ಯುಂಡೈ ಐ 10 ಕಾರು

ಭಾರೀ ಪ್ರಮಾಣದ ಮಳೆಯಾಗುತ್ತಿರುವುದರಿಂದ ರಸ್ತೆಗಳು ನೀರಿನಿಂದ ಜಲಾವೃತಗೊಂಡಿವೆ. ರಸ್ತೆ ತುಂಬೆಲ್ಲಾ ನೀರು ನಿಂತಿರುವುದರಿಂದ ವಾಹನ ಸವಾರರಿಗೆ ರಸ್ತೆಯಲ್ಲಿರುವ ಗುಂಡಿಗಳು ಗೋಚರಿಸದೇ ಅವಘಡಗಳು ಸಂಭವಿಸುತ್ತಿವೆ.

Most Read Articles

Kannada
English summary
Bad roads makes Hyundai Grand i10 to fall into sinkhole in New Delhi. Read in Kannada.
Story first published: Tuesday, July 20, 2021, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X