ಅತಿ ಶೀಘ್ರದಲ್ಲೇ ಬಜಾಜ್ NS 400 ಮಾರುಕಟ್ಟೆಗೆ: CNG ಬೈಕನ್ನೂ ತರಲಿದೆ "ಹಮಾರಾ ಬಜಾಜ್'!
ಭಾರತದ ಪ್ರಸಿದ್ದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಅಭಿಮಾನಿ ಗ್ರಾಹಕರನ್ನು ಹೊಂದಿರುವ ಬಜಾಜ್, ಹಲವರ ನೆಚ್ಚಿನ ಬೈಕ್ ಬ್ರ್ಯಾಂಡ್ ಆಗಿ ಬದಲಾಗಿ ದಶಕಗಳೇ ಕಳೆದಿವೆ ಎಂಬುದು ನೀವೆಲ್ಲರೂ ತಿಳಿದಿರುವ ವಿಚಾರ.
ಸದಾ ಒಂದಿಲ್ಲೊಂದು ವಿಷಯದಲ್ಲಿ ಜನರ ಮನದಲ್ಲಿ ಸದ್ದು ಮಾಡುತ್ತಿರುವ ಬಜಾಜ್ ಇದೀಗ ಹೊಸ ಸುದ್ದಿಯೊಂದನ್ನು ಹೊರ ತಂದಿದ್ದು, ಇದನ್ನು ತಿಳಿದ ಬಜಾಜ್ ಪ್ರೀಯರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು, ಮಾಹಿತಿಗಳ ಪ್ರಕಾರ ಬಜಾಜ್ ಇನ್ನೇನು ಕೆಲವೇ ತಿಂಗಳಲ್ಲಿ ಹಲವಾರು ಬೈಕ್‌ಗಳನ್ನು ಮಾರುಕಟ್ಟೆಗೆ ತರಲಿದ್ದು, ಇದರಲ್ಲಿ ಬಜಾಜ್ NS 400 ಮತ್ತು ಚೇತಕ್ ಇನ್ನೊಂದು ವೇರಿಯಂಟ್ ಹಾಗೂ ಸಿಎನ್‌ಜಿ ಯಿಂದ ಚಾಲಿತವಾಗುವ ಬೈಕ್ ಒಂದನ್ನು ಸಹ ಹೊರತರಲಿದ್ದಾರೆ ಎಂದು ತಿಳಿದು ಬಂದಿದೆ.

ಬಜಾಜ್ ಕಂಪನಿಯ ಪ್ರಸಿದ್ದ ಲೈನ್ಅಪ್ ಮಾಡೆಲ್ ಆದ ಎನ್‌ಎಸ್, ಗ್ರಾಹಕರಿಗೆ ಅತೀ ಹೆಚ್ಚು ಇಷ್ಟವಾದ ಬೈಕ್ ಆಗಿದೆ. NS200 ಬೈಕ್ ಮಾದರಿಯು ಈಗಾಗಲೇ ಯುವಕ ನೆಚ್ಚಿನ ಬೈಕ್ ಆಗಿದ್ದು, ಇದರ 400 ಸಿಸಿ ಆವೃತ್ತಿ ಬರುತ್ತದೆ ಎಂದು ಹಿಂದಿನಿಂದಲೂ ಗುಮಾನಿ ಇತ್ತು. ಆದರೆ ಇದೀಗ ಬಹುತೇಕ ಕನ್‌ಫರ್ಮ್ ಆಗಿದ್ದು, ಸದ್ಯದಲ್ಲೇ 400 ಸಿಸಿ ಸೆಗ್ಮೆಂಟ್‌ಬನಲ್ಲಿ ಬಜಾಜ್ ಎನ್‌ಎಸ್ 400 ಬೈಕ್ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲಿದೆ.
ಇನ್ನು ಮಾಹಿತಿಗಳ ಪ್ರಕಾರ ಬಜಾಜ್, NS 400 ಮಾತ್ರವಲ್ಲದೇ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಆದ ಚೇತಕ್‌ನ ಮತ್ತೊಂದು ಮಾಡೆಲ್ ಅನ್ನು ಸಹ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಎಲೆಕ್ಟ್ರಿಕ್ ಕ್ಷೇತ್ರದಲ್ಲೂ ಅಪ್‌ಡೇಟ್ ನಿಡಲಿರುವ ಬಜಾಜ್ ಒಟ್ಟಾರೆಯಾಗಿ ತನ್ನ ಬೈಕ್‌ಗಳ ಮಾರಾಟವನ್ನು ಅಧಿಕ ಮಾಡಲು ಬೇಕಾದ ಎಲ್ಲಾ ಮಾರ್ಗಗಳನ್ನು ಸಹ ಮಾಡಿಕೊಂಡಿದೆ ಎಂಬುದು ಎಲ್ಲರ ಅಭಿಪ್ರಾಯ.

ಇಷ್ಟು ಮಾತ್ರವಲ್ಲದೇ ಬಜಾಜ್, ಸಿಎನ್‌ಜಿ ಮೂಲಕ ಚಲಿಸುವ ಬೈಕ್ ಒಂದನ್ನು ಸಹ ನಿರ್ಮಿಸುತ್ತಿದ್ದು, ಇದನ್ನು ಈ ಬಾರಿಯ ಆರ್ಥಿಕ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಮೂಲಕ ಹೆಚ್ಚು ಇಂಧನ ಕ್ಷಮತೆ ಒದಗಿಸುವ ಬೈಕ್ ಒಂದನ್ನು ಗ್ರಾಹಕರಿಗೆ ಒದಗಿಸುವತ್ತ ಬಜಾಜ್ ಮುಖ ಮಾಡಿದ್ದು, ಈ ಬೈಕ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಲಿದೆ ಎಂದೂ ಸಹ ಆಟೋಮೊಬೈಲ್ ಲೋಕ ಭವಿಷ್ಯ ನುಡಿಯುತ್ತಿದೆ.
ಇನ್ನು ಈಗಿರುವ ಬಜಾಜ್ ಎನ್‌ಎಸ್ ಆವೃತ್ತಿಯ NS200 ಜೊತೆಗೆ ೧೬೦ ಸಿಸಿ ಬೈಕ್‌ಗಳೂ ಸಹ ಇದೆ. ಈ ಬೈಕ್‌ಗಳ ಕುರಿತಾಗಿ ಬಗ್ಗೆ ಮಾತನಾಡುವುದಾದರೆ, ಬಜಾಜ್ ಪಲ್ಸರ್ NS160 & NS200 ಬೈಕ್‌ಗಳು ನವೀಕರಣ ಪಡೆದುಕೊಂಡ ಬಳಿಕ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ, ಈ ಬೈಕ್‌ಗಳು ಹೊಸ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡಿದೆ.
2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications