ಬೆಂಗಳೂರಿನ ಇಂದಿರಾನಗರದಿಂದ ವಿಮಾನ ನಿಲ್ದಾಣಕ್ಕೆ ಕೇವಲ 15 ನಿಮಿಷ ಸಾಕು: ಮಾಸ್ಟರ್ ಪ್ಲಾನ್ ರೆಡಿ!

Bangalore air taxi: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಇತ್ತ ನಗರದಲ್ಲೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ಗಳಲ್ಲಿ ಪ್ರಯಾಣಿಕರು ಸಿಲುಕಿ ಪರದಾಡುವಂತಾಗಿದೆ. ಈಗ ಹೊಸ ಬೆಳವಣಿಗೆಯೊಂದರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಸಿಹಿಸುದ್ದಿ ಹೊರಬಂದಿದೆ. ಬೆಂಗಳೂರಿನಿಂದ ಸುಮಾರು ಎರಡು ಗಂಟೆ ಪ್ರಯಾಣಿಸಿ ವಿಮಾನ ನಿಲ್ದಾಣ ತಲುಪುತ್ತಿದ್ದವರು ಈಗ ಕೇವಲ 15 ನಿಮಿಷಗಳಲ್ಲಿ ತಲುಪಬಹುದು. ಇದಕ್ಕಾಗಿ 'ಸರ್ಲಾ (Sarla) ಏವಿಯೇಷನ್' ಹೊಸ ಪ್ಲಾನ್ ಪರಿಚಯಿಸಲು ಸಜ್ಜಾಗಿದೆ.

ಬೆಂಗಳೂರಿನ ಇಂದಿರಾನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಕೇವಲ 15 ನಿಮಿಷಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಡುವ ಹೊಸ ಏರ್ ಟ್ಯಾಕ್ಸಿ ಸೇವೆ ಪ್ರಾರಂಭವಾಗಲಿದೆ. ಈ ಯೋಜನೆಯು ಅನುಮೋದನೆಯ ಅಂತಿಮ ಹಂತದಲ್ಲಿದ್ದು, ಒಮ್ಮೆ ಪ್ರಯಾಣಿಸಲು ಕೇವಲ 1,700 ರೂ. ಶುಲ್ಕವಿರಲಿದೆ. ಸಂಚಾರ ದಟ್ಟಣೆಗೆ ಫುಲ್‌ಸ್ಟಾಪ್ ಇಟ್ಟು ಅನುಕೂಲಕರ ಪ್ರಯಾಣದೊಂದಿಗೆ ಏರ್‌ಪೋರ್ಟ್ ತಲುಪಲು ಇದು ಸಹಕಾರಿಯಾಗಲಿದೆ.

bangalore-air-taxi-indira-nagar-to-kempegowda-international-airport-details

ಈ ಸೇವೆಗೆ ಬಳಸಲಾಗುವ ಏರ್‌ ಟ್ಯಾಕ್ಸಿಗಳನ್ನು ಸಾಮಾನ್ಯ ಹೆಲಿಕಾಪ್ಟರ್‌ಗಳಿಗಿಂತ ವೇಗವಾಗಿ, ಶಾಂತವಾಗಿ ಮತ್ತು ಹೆಚ್ಚು ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಇವು ಎಲೆಕ್ಟ್ರಿಕ್ ಏರ್‌ ಟ್ಯಾಕ್ಸಿಗಳಾಗಿರುವುದು ಮತ್ತೊಂದು ವಿಶೇಷವಾಗಿದ್ದು, ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೇ, ಹೆಚ್ಚು ಸುಸ್ಥಿರ ಮತ್ತು ಪರಿಣಾಮಕಾರಿ ಪರ್ಯಾಯವಾಗಲಿವೆ ಎಂದು ಸರ್ಲಾ ಏವಿಯೇಷನ್ ಹೇಳಿದೆ.

ಹೊಸ ಎಲೆಕ್ಟ್ರಿಕ್ ಏರ್‌ ಟ್ಯಾಕ್ಸಿಗಳು ಸುಧಾರಿತ EVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವ್ಯವಸ್ಥೆಯನ್ನು ಹೊಂದಿರುವ ಏಳು ಆಸನಗಳ ಏರ್ ಟ್ಯಾಕ್ಸಿಯಾಗಿದೆ. ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಿರುವ ಇದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವ ಹಾಗೂ ತ್ವರಿತವಾಗಿ ಏರ್‌ಪೋರ್ಟ್‌ ತಲುಪುವಂತೆ ಮಾಡುವುದಲ್ಲದೇ ಕಡಿಮೆ ಶುಲ್ಕವಿರುವುದರಿಂದ ಪ್ರಯಾಣಿಕರಿಗೆ ಕ್ಯಾಬ್‌ಗಳಿಗಿಂತ ಬೆಸ್ಟ್ ಆಯ್ಕೆಯಾಗಿದೆ.

bangalore-air-taxi-indira-nagar-to-kempegowda-international-airport-details

ಮತ್ತೊಂದೆಡೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ತಲುಪಲು ಸುಮಾರು 2.5 ಗಂಟೆಗಳು (150 ನಿಮಿಷಗಳು) ತೆಗೆದುಕೊಳ್ಳುತ್ತದೆ. ಏರ್ ಟ್ಯಾಕ್ಸಿಯೊಂದಿಗೆ, ಈ ಪ್ರಯಾಣವನ್ನು ಕೇವಲ 19 ನಿಮಿಷಗಳಿಗೆ ಇಳಿಸಲಾಗುವುದು, ಇದು ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚ ಉಳಿತಾಯ ಎರಡನ್ನೂ ನೀಡುತ್ತದೆ. ಬೆಂಗಳೂರಿನ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳೊಂದಿಗೆ, ಈ ಭವಿಷ್ಯದ ಏರ್ ಟ್ಯಾಕ್ಸಿ ಹೆಚ್ಚು ಅಗತ್ಯವಿರುವ ಪರಿಹಾರವಾಗಲಿದೆ.

ಸರ್ಲಾ ಏವಿಯೇಷನ್ ಸಹ-ಸಂಸ್ಥಾಪಕ ಮತ್ತು ಸಿಇಒ ಆಡ್ರಿಯನ್ ಸ್ಮಿತ್ ಮಾತನಾಡಿ, ಈ ಯೋಜನೆಯು ಅನುಮೋದನೆಯ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. "ನಾವು ಈ ಸೇವೆಯನ್ನು ವಿಶ್ವದಾದ್ಯಂತದ ಮೆಟ್ರೋ ನಗರಗಳಲ್ಲಿ ಜಾರಿಗೆ ತರುತ್ತಿದ್ದೇವೆ. ಅದರಲ್ಲಿ ಬೆಂಗಳೂರು ಕೂಡ ಇರುವುದು ಖುಷಿ ತಂದಿದೆ. ನಮ್ಮ ಫ್ಲೈಯಿಂಗ್ ಟ್ಯಾಕ್ಸಿಗಳೊಂದಿಗೆ, ಇಂದಿರಾನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸಮಯವು 1.5 ಗಂಟೆಗಳಿಂದ ಕೇವಲ ಐದು ನಿಮಿಷಗಳಿಗೆ ಇಳಿಯುತ್ತದೆ ಎಂದರು.

bangalore-air-taxi-indira-nagar-to-kempegowda-international-airport-details

ಏರ್ ಟ್ಯಾಕ್ಸಿ ಸೇವೆಯು ಪ್ರಯಾಣಿಕರಿಗೆ ದೊಡ್ಡ ಸುಧಾರಣೆಯ ಭರವಸೆ ನೀಡಿದ್ದರೂ, ಇದು ಲಭ್ಯವಾಗಲುಇನ್ನೂ ಎರಡು ವರ್ಷಗಳು ಬೇಕಾಗುತ್ತದೆ. ಬಿಡುಗಡೆಯಾದ ನಂತರ, ಬೆಂಗಳೂರು ಮತ್ತು ಇತರ ನಗರಗಳ ಸಂಚಾರ-ಭಾರವಾದ ಪ್ರದೇಶಗಳಲ್ಲಿ ಏರ್‌ ಟ್ಯಾಕ್ಸಿ ಬರಬಹುದು. ಟ್ರಾಫಿಕ್ ಜಾಮ್ ತಪ್ಪಿಸಲು ಮತ್ತು ನಗರದಾದ್ಯಂತ ತ್ವರಿತ, ಹೆಚ್ಚು ಅನುಕೂಲಕರ ಪ್ರಯಾಣವನ್ನು ಆನಂದಿಸಲು ಇದು ಅನುವು ಮಾಡಿಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 18, 2024, 18:23 [IST]
English summary
Bangalore air taxi indira nagar to kempegowda international airport details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+