ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ದಕ್ಷಿಣ ಭಾರತಕ್ಕಿದು ಗೇಮ್ ಚೇಂಜರ್: ಕೇವಲ 2.5 ಗಂಟೆಗಳ ಪ್ರಯಾಣ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುತ್ತಿರುವ 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿರುವ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣವು ಕರ್ನಾಟಕದಲ್ಲಿ ಪ್ರಗತಿಯಲ್ಲಿದೆ. 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪ್ರಯಾಣದ ಸಮಯವನ್ನು 2.5 ಗಂಟೆಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 2022 ರಲ್ಲಿ ಅಡಿಪಾಯ ಹಾಕಿದರು. ಕರ್ನಾಟಕದ ಹೊಸಕೋಟೆ ಮತ್ತು ಬಂಗಾರಪೇಟೆ, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು, ತಮಿಳುನಾಡಿನ ಶ್ರೀಪೆರಂಬದೂರು ನಗರಗಳು ಈ ಹೈವೇನಲ್ಲಿ ಸಿಗುವ ಪ್ರಮುಖ ನಗರಗಳಾಗಿವೆ. ಸದ್ಯ ಈ ಹೆದ್ದಾರಿ ನಿರ್ಮಾಣ ಹಂತದಲ್ಲಿರುವ ದಕ್ಷಿಣ ಭಾರತದ ಅತಿದೊಡ್ಡ ಮೂಲ ಯೋಜನೆಗಳಲ್ಲಿ ಒಂದಾಗಿದೆ.

ಸಾಂಧರ್ಭಿಕ ಚಿತ್ರ
NHAI ಈ ಯೋಜನೆಯನ್ನು ನಿರ್ಮಾಣದ ಮೂರು ಹಂತಗಳಾಗಿ ವಿಂಗಡಿಸಿದೆ. ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ರೂ. ಆಗಿದ್ದು, 300 ಕಿ.ಮೀ ಇದ್ದ ದೂರವನ್ನು ಹೊಸ ಹೈವೇಯು 262 ಕಿ.ಮೀಗಳಿಗೆ ಕಡೆಮೆ ಮಾಡುತ್ತದೆ. ಪ್ರಸ್ತುತ ಯೋಜನೆಯಂತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೂ ಮುಂದಿನ ವರ್ಷಾಂತ್ಯಕ್ಕೆ ಹೆದ್ದಾರಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ.
ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ನಾಲ್ಕು-ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. 262 ಕಿ.ಮೀಗಳಲ್ಲಿ 85 ಕಿ.ಮೀ ತಮಿಳುನಾಡಿನಲ್ಲಿ, 71 ಕಿ.ಮೀ ಆಂಧ್ರಪ್ರದೇಶದಲ್ಲಿ ಮತ್ತು 106 ಕಿ.ಮೀ ಕರ್ನಾಟಕದಲ್ಲಿ ಬೀಳುತ್ತದೆ. ಮೊದಲಿನಂತೆ ಅಲ್ಲದೆ ಪ್ರಯಾಣದ ಸಮಯವನ್ನು ಕೇವಲ 2 ರಿಂದ 3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.

ಸಾಂಧರ್ಭಿಕ ಚಿತ್ರ
ಚೆನ್ನೈನಲ್ಲಿ, ಎಕ್ಸ್‌ಪ್ರೆಸ್ ವೇಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಪಲ್ಲವರಂ ಮೇಲ್ಸೇತುವೆಯನ್ನು ಚೆನ್ನೈ ಬೈಪಾಸ್‌ಗೆ (ಪೆರುಂಗಲತ್ತೂರ್ - ಮಾಧವರಂ) ತಾಂಬರಂನಲ್ಲಿ ಸಂಪರ್ಕಿಸುವ ಕಾರಿಡಾರ್ ಅನ್ನು ಯೋಜಿಸುತ್ತಿದೆ. ಅಲ್ಲದೆ, ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ ಮತ್ತು ಪೂರ್ವ ಕರಾವಳಿ ರಸ್ತೆಯಿಂದ ಜಿಎಸ್ ಟಿ ರಸ್ತೆಗೆ ರಸ್ತೆ ಸಂಪರ್ಕವನ್ನು ಸಹ ವರ್ಧಿಸಲಾಗುತ್ತದೆ.
ಪ್ರಸ್ತುತ, ರಸ್ತೆ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಸರಾಸರಿ ಪ್ರಯಾಣದ ಸಮಯ ಐದರಿಂದ ಆರು ಗಂಟೆಗಳಿವೆ. ಮೇಲೆ ತಿಳಿಸಿದಂತೆ ಹೊಸ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರವನ್ನು 300 ಕಿ.ಮೀ ನಿಂದ 262 ಕಿ.ಮೀಗೆ ಕಡಿಮೆ ಮಾಡುವ ಮೂಲಕ ಎಕ್ಸ್‌ಪ್ರೆಸ್‌ವೇಯನ್ನು ಗಂಟೆಗೆ 120 ಕಿ.ಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ.

ಸಾಂಧರ್ಭಿಕ ಚಿತ್ರ
ನಿಧಾನವಾಗಿ ಚಲಿಸುವ ವಾಹನಗಳು, ಬೈಕ್ ಗಳು ಮತ್ತು ಆಟೋ ರಿಕ್ಷಾಗಳನ್ನು ಕಾರಿಡಾರ್ ನಲ್ಲಿ ಅನುಮತಿಸಲಾಗುವುದಿಲ್ಲ. ಹೈ ಸ್ಪೀಡ್ ಕಾರಿಡಾರ್ ಆಶಾದಾಯಕವಾಗಿ ಎರಡೂ ಮೆಗಾಸಿಟಿಗಳ ಆರ್ಥಿಕ ಚಟುವಟಿಕೆಗಳನ್ನು ಮತ್ತು ಹೆದ್ದಾರಿಯ ಉದ್ದಕ್ಕೂ ಶ್ರೇಣಿ -3 ನಗರಗಳನ್ನು ಬಲಪಡಿಸುತ್ತದೆ. ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೈಗಾರಿಕಾ ಕೇಂದ್ರಗಳನ್ನು ಚೆನ್ನೈ ಬಂದರಿಗೆ ಸಂಪರ್ಕಿಸುತ್ತದೆ.
ಈ ಮಾರ್ಗದಲ್ಲಿರುವ ನಗರಗಳಲ್ಲಿ ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್), ಆಂಧ್ರದ ಪಲಮನೇರ್, ಚಿತ್ತೂರು ಮತ್ತು ತಮಿಳುನಾಡಿನ ರಾಣಿಪೇಟ್ ಸೇರಿವೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.


Click it and Unblock the Notifications