ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ: ಅಲ್ಲೇ ಇಡ್ಲಿ ತಿನ್ನಬಹುದು.. ನಮ್ಮ ವಿದ್ಯಾರ್ಥಿಗಳು ತೋರಿಸಿಕೊಟ್ಟರು!

ಬೆಂಗಳೂರಿಂದ (Bangalore) - ಚೆನ್ನೈ (Chennai) 350 ಕಿಲೋಮೀಟರ್‌ ದೂರಲಿದ್ದು, ರೈಲು ಅಥವಾ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸಿದರೆ, 5 - 6 ಗಂಟೆ ಬೇಕಾಗುತ್ತದೆ. ಇನ್ಮುಂದೆ, ಅಲ್ಲಿಗೆ ತೆರಳಲು ಅಷ್ಟೊಂದು ಸಮಯಾವಕಾಶ ಬೇಕಿಲ್ಲ. ಕೆಲವೇ 30 ನಿಮಿಷದಲ್ಲಿ ಬೆಂಗಳೂರಿಂದ ಚೆನ್ನೈಗೆ ಹೋಗಿ, ತಿಂಡಿ ತಿಂದು, ಸಮುದ್ರವನ್ನು ನೋಡಿಕೊಂಡು ಬರಬಹುದು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Indian Institutes of Technology) ಮದ್ರಾಸ್ ವಿದ್ಯಾರ್ಥಿಗಳ ತಂಡವು, ಈಗಾಗಲೇ ಅನ್ವೇಷಣೆ ಮಾಡಲಾದ ಹೈಪರ್‌ಲೂಪ್ ಪಾಡ್ (Hyperloop pod) ಮಾದರಿಯನ್ನು ಆಧಾರವಾಗಿ ಇಟ್ಟುಕೊಂಡು, ಹೊಸ ವಿಧದ 'ಆವಿಷ್ಕಾರ್' ಹೆಸರಿನ ಹೈಪರ್‌ಲೂಪ್ ಪಾಡ್ ಅಭಿವೃದ್ಧಿಪಡಿಸಿದೆ. ಇದು, ವಿಮಾನಕ್ಕಿಂತ ವೇಗವಾಗಿ ಚೆನ್ನೈನಿಂದ ಬೆಂಗಳೂರಿಗೆ 25 ನಿಮಿಷಗಳಲ್ಲಿ ಪ್ರಯಾಣಿಕರನ್ನು ತಲುಪಿಸಬಲ್ಲದು.

ಬೆಂಳೂರಿನಿಂದ ಚೆನ್ನೈಗೆ 30 ನಿಮಿಷದ ಪ್ರಯಾಣ: ಅಲ್ಲೇ ಇಡ್ಲಿ ತಿನ್ನಬಹುದು.. ನಮ್ಮ ವಿದ್ಯಾರ್ಥಿಗಳು ತೋರಿಸಿಕೊಟ್ಟರು!

ಈ ಹೈಪರ್‌ಲೂಪ್, ಪ್ರಯಾಣಿಕರ ಬಳಕೆಗೆ ಸಿಕ್ಕರೆ, ಇಡೀ ಪ್ರಪಂಚದಲ್ಲಿ ಭಾರತವು ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲಿದೆ. 'ಸ್ಪೇಸ್‌ಎಕ್ಸ್ ಇಂಟರ್‌ನ್ಯಾಷನಲ್ ಹೈಪರ್‌ಲೂಪ್ ಪಾಡ್' ಸ್ಪರ್ಧೆಯ ಅಂತಿಮ ಸುತ್ತಿಗೆ ದೇಶದಿಂದ ಸಲ್ಲಿಕೆಯಾದ ಏಕೈಕ ಹೈಪರ್‌ಲೂಪ್ ಪಾಡ್ ಇದಾಗಿತ್ತು. ಎಡಿನ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಹೈಪರ್‌ಲೂಪ್ ಪಾಡ್ ಅನ್ನು ಭವಿಷ್ಯದ ಸಾರಿಗೆ ವಿಧಾನವೆಂದು ಪರಿಗಣಿಸಲಾಗಿದೆ. ಇದು, ವಿಮಾನಗಳಿಗೆ ಪರ್ಯಾಯ ಎಂದು ಹೇಳಲಾಗಿದೆ. ವಿಮಾನಗಳು ಹೆಚ್ಚಿನ ವೇಗದಲ್ಲಿ ಚಲಿಸಬಲ್ಲವು. ಆದರೆ, ಶಬ್ಬ ಹಾಗೂ ವಾಯುಮಾಲಿನ್ಯವನ್ನು ಉಂಟು ಮಾಡುತ್ತವೆ. ಜೊತೆಗೆ ಏರ್ಪೋರ್ಟ್ ಗಳಲ್ಲಿ ಹೆಚ್ಚಿನ ಮೂಲಸೌಕರ್ಯದ ಅಗತ್ಯವಿದೆ. ಇನ್ನೂ ಹೈಪರ್‌ಲೂಪ್ ಪಾಡ್ ವಿಮಾನ ಹಾಗೂ ರೈಲಿನಂತಹ ಸೌಕರ್ಯವನ್ನು ಹೊಂದಿರುತ್ತೇವೆ.

ಬೆಂಳೂರಿನಿಂದ ಚೆನ್ನೈಗೆ 30 ನಿಮಿಷದ ಪ್ರಯಾಣ: ಅಲ್ಲೇ ಇಡ್ಲಿ ತಿನ್ನಬಹುದು.. ನಮ್ಮ ವಿದ್ಯಾರ್ಥಿಗಳು ತೋರಿಸಿಕೊಟ್ಟರು!

ಹೈಪರ್‌ಲೂಪ್ ಪಾಡ್‌ಗಳು ನಿರ್ವಾತ ಕೊಳವೆ (vacuum tube)ಯೊಳಗೆ ಚಲಿಸಬಲ್ಲವು. (ಸಾಮಾನ್ಯವಾಗಿ ಭಾಷೆಯಲ್ಲಿ ಹೇಳಬೇಕಾದರೆ, ದೊಡ್ಡದಾದ ನೀರಿನ ಪೈಪ್ ಗಳು). 1200 km/h ವೇಗದಲ್ಲಿ ಹೈಪರ್‌ಲೂಪ್ ಪ್ರಯಾಣಿಕರನ್ನು ಗಮ್ಯ ಸ್ಥಾನವನ್ನು ಸೇರಿಸಲಿವೆ. ಗಮನಿಸಬೇಕಾದ ಅಂಶವೆಂದರೆ.. ಇವು ಯಾವುದೇ ತರಹ ಇಂಗಾಲವನ್ನು ಹೊರಸೂಸುವುದಿಲ್ಲ. ಆಗಮನ - ನಿರ್ಗಮನದ ಬಗ್ಗೆ ಮೊದಲೇ ಯೋಜಿಸಿದ್ದರೆ, ಪ್ರಯಾಣದ ಸಮಯವನ್ನು ಉಳಿಸಬಹುದು.

ಈ ಬಗ್ಗೆ ಮಾತನಾಡಿರುವ ಪ್ರಾಜೆಕ್ಟ್‌ನ ವಿದ್ಯಾರ್ಥಿ ತಂಡದ ನಾಯಕಿ ಮೇಧಾ ಕೊಮ್ಮಜೋಸ್ಯುಲಾ ಅವರು, ಈ ವರ್ಷ, ನಾವು ಹೈಪರ್‌ಲೂಪ್ ಸಂಶೋಧನೆಯಲ್ಲಿ ತೀರಾ ಹತ್ತಿರಕ್ಕೆ ಬಂದಿದ್ದೇವೆ. ಹೀಗೆ ಕೆಲಸವನ್ನು ಮುಂದುವರಿಸಿದರೆ, ಮುಂದಿನ 10 ವರ್ಷದಲ್ಲಿ ಮೊದಲ ಹೈಪರ್‌ಲೂಪ್ ರೈಲನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೆ ನನ್ನ ಸ್ನೇಹಿತರು ಹಾಗೂ ಪ್ರಾಧ್ಯಾಪಕರ ಸಹಕಾರವಿದೆ' ಎಂದು ಹೇಳಿದ್ದಾರೆ.

ಈಗಾಗಲೇ, ಐಐಟಿ ಮದ್ರಾಸ್ ತಂಡವು ಹೈಪರ್‌ಲೂಪ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ 6 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆ. ಪ್ರಮುಖವಾಗಿ ಲೆವಿಟೇಷನ್, ಪ್ರೊಪಲ್ಷನ್, ಟ್ಯೂಬ್ ಹಾಗೂ ಬ್ಯಾಟರಿ ಕೊಲಿಂಗ್ ಅಂಶಗಳು ಸೇರಿವೆ. ಈ ಹೈಪರ್‌ಲೂಪ್ ಸಂಶೋಧನೆಗೆ ವಿದ್ಯಾರ್ಥಿಗಳಿಗೆ ದೊಡ್ಡ ನೆರವು ದೊರೆತಿದೆ. ಕಳೆದ ವರ್ಷ ಯೋಜನೆ ಬಗ್ಗೆ ಪ್ರಸ್ತಾಪಿಸಿದ ನಂತರ, ರೈಲ್ವೆ ಸಚಿವಾಲಯವೂ ಐಐಟಿ ಮದ್ರಾಸ್‌ಗೆ ರೂ.8.34 ಕೋಟಿ ಅನುದಾನ ನೀಡಿದೆ.

ಇನ್ನು, ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಪರಿಚಯಿಸಿರುವ ಹೈಪರ್‌ಲೂಪ್ ಪಾಡ್, ನಿರ್ವಾತ ಕೊಳವೆಯಲ್ಲಿ ಅದ್ಬುತವಾಗಿ ಕಾರ್ಯನಿರ್ವಹಿಸಲಿದ್ದು, ಅಲ್ಲಿ ಗಾಳಿಯ ಪ್ರತಿರೋಧವನ್ನು ಕಡಿಮೆಗೊಳಿಸಿ, 'ಪಾಡ್' ಗಂಟೆಗೆ 1000 ಕಿಲೋಮೀಟರ್ ವೇಗದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ. ಸದ್ಯ, ನಮ್ಮ ವಿದ್ಯಾರ್ಥಿಗಳು ಭವಿಷ್ಯದ ಸಾರಿಗೆ ವಿಧಾನವಾದ ಹೈಪರ್‌ಲೂಪ್ ಪಾಡ್ ಅಭಿವೃದ್ಧಿಪಡಿಸುತ್ತಿರುವುದು ಖುಷಿಯ ವಿಚಾರವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 11, 2023, 10:48 [IST]
English summary
Bangalore chennai just 30 minutes via hyperloop pod
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+