ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಭಾರತದಲ್ಲಿರುವ ಕೆಲವು ವಾಹನ ಸವಾರರು ವಾಹನಗಳಿಗೆ ಸಂಬಂಧಪಟ್ಟಂತೆ ಸಂಚಾರ ನಿಯಮಗಳಿವೆ, ಅವುಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂಬುದನ್ನೇ ಮರೆಯುತ್ತಾರೆ. ಬೆಂಗಳೂರಿನ ನಿವಾಸಿಯೊಬ್ಬರು ಇದಕ್ಕೆ ಸ್ಪಷ್ಟ ಉದಾಹರಣೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಲಾಗಿದೆ. ಬೆಂಗಳೂರಿನ ರಾಜೇಶ್ ಕುಮಾರ್ ಎಂಬುವವರೇ ಈ ಪ್ರಮಾಣದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ತೆತ್ತವರು. 2019ರ ಸೆಪ್ಟೆಂಬರ್ ತಿಂಗಳಿನಿಂದ ಈ ವರ್ಷದ ಆಗಸ್ಟ್ 26ರವರೆಗೆ ಅವರು ಒಟ್ಟು 101 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿರುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುವುದು, ಸಿಗ್ನಲ್ ಜಂಪ್ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಸುಮಾರು 4 ಅಡಿ ಉದ್ದದ ರಶೀದಿಯನ್ನು ನೀಡಲಾಯಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಅವರ ಮೇಲೆ ವಿಧಿಸಲಾದ ಒಟ್ಟು ದಂಡದ ಮೊತ್ತ ರೂ.57,200ಗಳಾಗಿತ್ತು. ಅವರು 101 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಈ ಪೈಕಿ 60 ಉಲ್ಲಂಘನೆಗಳು ಕೋವಿಡ್ 19 ಅವಧಿಯಲ್ಲಿ ಸಂಭವಿಸಿವೆ ಎಂಬುದು ವಿಶೇಷ. ಈ ಅವಧಿಯಲ್ಲಿ ಪೊಲೀಸರು ಕರ್ತವ್ಯದಲ್ಲಿ ಇರುವುದಿಲ್ಲ, ಈ ಕಾರಣಕ್ಕೆ ದಂಡ ವಿಧಿಸುವುದಿಲ್ಲವೆಂಬ ತಪ್ಪು ಗ್ರಹಿಕೆಯಿಂದಾಗಿ ನಿಯಮ ಉಲ್ಲಂಘಿಸಿರುವ ಸಾಧ್ಯತೆಗಳಿವೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಆದರೆ ಬೆಂಗಳೂರು ನಗರದ ರಸ್ತೆಗಳಲ್ಲಿ ಪೊಲೀಸ್ ಕಣ್ಗಾವಲು ಈಗ ಮತ್ತೆ ಹೆಚ್ಚುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಅಂಗವಾಗಿ, ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಭಿನ್ನ ಶಿಕ್ಷೆಗಳನ್ನು ನೀಡುತ್ತಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಬೆಂಗಳೂರಿನ ಥಣಿಸಂದ್ರದಲ್ಲಿ ಸಾರಿಗೆ ತರಬೇತಿ ಸಂಸ್ಥೆ ಇದೆ. 1999 ರಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಚಾರ ತರಬೇತಿ ಸಂಸ್ಥೆ ಬೆಂಗಳೂರು ನಗರ ಸಂಚಾರ ಪೊಲೀಸರ ನಿಯಂತ್ರಣದಲ್ಲಿದೆ. ಈ ಸಂಸ್ಥೆಯಲ್ಲಿ ಅಧಿಕಾರಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ತರಬೇತಿ ನೀಡುತ್ತಿದ್ದಾರೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಸಂಚಾರ ನಿಯಮಗಳು, ರಸ್ತೆಯಲ್ಲಿ ನೈತಿಕವಾಗಿ ಹೇಗೆ ವರ್ತಿಸಬೇಕು, ಮೋಟಾರು ವಾಹನ ಕಾನೂನು ಸೇರಿದಂತೆ ಚಾಲನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಅಧಿಕಾರಿಗಳು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಪ್ರತಿದಿನ ಸಂಚಾರ ನಿಯಮಗಳನ್ನು ಉಲ್ಲಂಘಿಸುವ 20 ಜನರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿಗಾಗಿ ಸುಮಾರು ಅರ್ಧ ದಿನ ಬೇಕಾಗುತ್ತದೆ. ಇದರಿಂದಾದರೂ ಮುಂಬರುವ ದಿನಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಕಡಿಮೆಯಾಗುತ್ತದೆ ಎಂಬ ವಿಶ್ವಾಸ ಪೊಲೀಸ್ ಅಧಿಕಾರಿಗಳಲ್ಲಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಸದ್ಯಕ್ಕೆ ಕೇವಲ 20 ಜನರಿಗೆ ತರಬೇತಿ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಗಳಿವೆ. ಅಧಿಕಾರಿಗಳು 10 ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸುಮಾರು 15,000 ವಾಹನ ಸವಾರರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಇದು ಸಂಚಾರ ಪೊಲೀಸ್ ಅಧಿಕಾರಿಗಳು ಸಿದ್ದಪಡಿಸಿರುವ ಮೊದಲ ಪಟ್ಟಿಯಾಗಿದ್ದು, ಈ ಪಟ್ಟಿಯಲ್ಲಿರುವ ಎಲ್ಲಾ ವಾಹನ ಸವಾರರನ್ನು ಸಂಚಾರ ತರಬೇತಿ ಪಡೆಯಲು ಸೂಚಿಸಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಗಳು, ಸಂಚಾರ ಉಲ್ಲಂಘಿಸುವವರನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರೇ ಎಚ್ಚರ, ತರಬೇತಿಗೆ ಹೋಗಬೇಕಾದಿತು ಜೋಕೆ

ಅವರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆಗಳಿವೆ. ಇದಕ್ಕೆ ಅನುಮತಿ ನೀಡಬಾರದು. ನಿಯಮಗಳನ್ನು ಉಲ್ಲಂಘಿಸುವ ಮೂಲಕ ಅವರು ತಮ್ಮ ಜೀವಕ್ಕೆ ಮಾತ್ರವಲ್ಲದೇ ಇತರರ ಜೀವಕ್ಕೂ ಅಪಾಯವನ್ನುಂಟುಮಾಡುತ್ತಾರೆ. ಈ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Bangalore city police sending traffic rules violators to traffic training institute. Read in Kannada.
Story first published: Wednesday, October 21, 2020, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X