Bangalore: ಮಾರುತಿ ನೆಕ್ಸಾ ಶೋರೂಂ ಕಟ್ಟಡದಲ್ಲಿ ಬಾಂಬ್ ರೀತಿ ಸಿಲಿಂಡರ್ ಸ್ಫೋಟ! ಗಾಬರಿ ಹುಟ್ಟಿಸುತ್ತೆ ವಿಡಿಯೋ

ಬೆಂಗಳೂರಿನ (Bangalore) ಕೋರಮಂಗಲದಲ್ಲಿರುವ ಮಾರುತಿ ಸುಜುಕಿ (Maruti Suzuki) ನೆಕ್ಸಾ (NEXA) ಶೋರೂಂ ಕಟ್ಟಡದಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ಸದ್ಯ, ಅಗ್ನಿಶಾಮಕ (Fire engine) ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಿಲಿಂಡರ್ ಸ್ಪೋಟದಿಂದ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಕಟ್ಟಡದಲ್ಲಿರುವ ಮಡ್ ಪೈಪ್ ಪಬ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಜೀವ ಉಳಿಸಿಕೊಳ್ಳಲು ವ್ಯಕ್ತಿಯೊಬ್ಬ ನಾಲ್ಕನೇ ಅಂತಸ್ತಿನಿಂದ ಜಿಗಿದಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹಲವು ವಸ್ತುಗಳು ಕೂಡ ಬೆಂಕಿಗಾಗುತಿಯಾಗಿವೆ.

Bangalore: ಮಾರುತಿ ನೆಕ್ಸಾ ಶೋರೂಂ ಕಟ್ಟಡದಲ್ಲಿ ಬಾಂಬ್ ರೀತಿ ಸಿಲಿಂಡರ್ ಸ್ಫೋಟ! ಗಾಬರಿ ಹುಟ್ಟಿಸುತ್ತೆ ವಿಡಿಯೋ

ನೆಲ ಅಂತಸ್ತಿನಲ್ಲಿರುವ ಮಾರುತಿ ಸುಜುಕಿ ನೆಕ್ಸಾ ಶೋರೂಂಗೂ ಬೆಂಕಿ ವ್ಯಾಪಿಸಿದ್ದು, ಕೆಲವು ಕಾರುಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಬೆಳಗ್ಗೆ 10.30ರ ಸುಮಾರಿಗೆ ಘಟನೆ ನಡೆದಿದ್ದು, ಸತತ 3 ಗಂಟೆ ಇಡೀ ಕಟ್ಟಡ ಹೊತ್ತಿ ಉರಿದಿದೆ. ಅಕ್ಕ-ಪಕ್ಕದ ಕಟ್ಟಡಗಳಿಗೂ ಬೆಂಕಿ ಆವರಿಸಿಕೊಳ್ಳುವ ಭೀತಿಯಿದೆ. ಸ್ಥಳದಲ್ಲಿ ಆರು ಅಗ್ನಿಶಾಮಕ ವಾಹನಗಳಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಘಟನೆ ಸಂಬಂಧಿಸಿದ ವಿಡಿಯೋವನ್ನು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಕಟ್ಟಡದ ಮೇಲ್ಬಾಗ ಬಾಂಬ್ ರೀತಿ ಸಿಲಿಂಡರ್ ಸ್ಪೋಟಗೊಳ್ಳುವುದನ್ನು ಕಾಣಬಹುದು. ಸುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿರುವುದನ್ನು ನೋಡಬಹುದು. ಕೆಲವೊಬ್ಬರ ಮಾಹಿತಿ ಪ್ರಕಾರ, ಮಾರುತಿ ಸುಜುಕಿ ನೆಕ್ಸಾ ಶೋರೂಂ ಮುಂಭಾಗ ನಿಂತಿದ್ದ ಕಾರುಗಳು ಸುಟ್ಟುಹೋಗಿವೆ.

ಅಗ್ನಿ ದುರಂತದಲ್ಲಿ ಯಾವುದೇ ಸಾವು - ನೋವು ಆಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇನ್ನು, ಬೆಂಗಳೂರು ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ಮರಿಗೌಡ ರಸ್ತೆಯ, ತಾವರೆಕೆರೆ ಜಂಕ್ಷನ್ ಬಳಿಯ ನೆಕ್ಸಾ ಮತ್ತು ಕಲ್ಟ್‌ಫಿಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿಧಾನಗತಿಯ ಸಂಚಾರವಿರುತ್ತದೆ. ವಾಹನ ಸವಾರರು ಸಹಕರಿಸಿ' ಎಂದು ತಿಳಿಸಿದ್ದಾರೆ.

ಮಾರುತಿ ಸುಜುಕಿ ನೆಕ್ಸಾ ವಿಚಾರಕ್ಕೆ ಬರುವುದಾದರೆ, ಇಲ್ಲಿ ಕಂಪನಿಯು ಇನ್ವಿಕ್ಟೋ, ಫ್ರಾಂಕ್ಸ್, ಜಿಮ್ನಿ 5 ಡೋರ್, ಗ್ರಾಂಡ್ ವಿಟಾರಾ, ಇಗ್ನಿಸ್, ಬಲೆನೊ ಹಾಗೂ ಸಿಯಾಜ್ ಕಾರುಗಳನ್ನು ಪ್ರದರ್ಶನಕ್ಕೆ ಇಟ್ಟಿರುತ್ತದೆ. ಇವು, ಪ್ರೀಮಿಯಂ ಮಾದರಿಯಾಗಿದ್ದು, ಕೊಂಚ ದುಬಾರಿ ದರವನ್ನು ಹೊಂದಿರುತ್ತವೆ. ಅಗ್ನಿ ಅವಘಡದಲ್ಲಿ ನೆಕ್ಸಾ ಶೋರೂಂಗೆ ಆಗಿರುವ ನಷ್ಟದ ಬಗ್ಗೆ ವಿವರಗಳಿಲ್ಲ.

ಘಟನೆಯಲ್ಲಿ ಕಟ್ಟಡದಲ್ಲಿ ಅಗ್ನಿ ನಿರೋಧಕ ಸಾಧನಗಳು ಇದ್ದವೇ ಅಥವಾ ಇರಲಿಲ್ಲವೇ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಸ್ಪೋಟಕ್ಕೆ ಕಾರಣವೇನು ಎಂಬುದು ಪೋಲೀಸರ ತನಿಖೆಯಿಂದ ಮಾಹಿತಿ ಬಯಲಾಗಬೇಕಾಗಿದೆ. ಗಾಯಗೊಂಡ ವ್ಯಕ್ತಿಗಳ ವಿವರವೂ ತಿಳಿದುಬಂದಿಲ್ಲ. ಘಟನೆಯಲ್ಲಿ ಏನೆಲ್ಲಾ ಹಾನಿಯಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಹೆಚ್ಚಿನ ವಿವರವನ್ನು ನಿರಿಕ್ಷಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 18, 2023, 14:14 [IST]
English summary
Bangalore maruti suzuki nexa showroom building fire accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+