BMTC: ಬಿಎಂಟಿಸಿಗೆ ಕಾಮಧೇನುವಾದ 'ವಾಯು ವಜ್ರ'... ಬರಲಿವೆ ಡಬಲ್ ಡೆಕ್ಕರ್ ಬಸ್‌ಗಳು, ಬೆಂಗಳೂರಿಗೆ ಅಂದ!
ಬೆಂಗಳೂರು ನಗರದ ಜೀವನಾಡಿಯಾಗಿ ಬಿಎಂಟಿಸಿ (BMTC) ಗುರುತಿಸಿಕೊಂಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಸಂಪರ್ಕ ಕಲ್ಪಿಸುವ ವಾಯು ವಜ್ರ ಬಸ್‌ಗಳು ನಿಗಮಕ್ಕೆ ಕಾಮಧೇನುವಾಗಿ ಮಾರ್ಪಟ್ಟಿದು, ಪ್ರಯಾಣಿಕರು ಕ್ಯಾಬ್ಗಳಿಗಿಂತ ಬಸ್‌ಗಳನ್ನೇ ಹೆಚ್ಚು ಅವಲಂಭಿಸುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಪೂರ್ಣ ಹವಾನಿಯಂತ್ರಿತ (air - conditioned) ವಾಯು ವಜ್ರ ಬಸ್‌ಗಳು ವಿಮಾನ ಪ್ರಯಾಣಿಕರನ್ನು ಆಕರ್ಷಿಸಿವೆ. ಕೊರೋನಾ ಬಳಿಕ, ಈ ಬಸ್ ಬಳಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಿಎಂಟಿಸಿ ಅಧಿಕಾರಗಳ ಪ್ರಕಾರ, ಸದ್ಯ ಪ್ರತಿನಿತ್ಯ ವಾಯು ವಜ್ರ ಬಸ್‌ಗಳಲ್ಲಿ 13,000 ಮಂದಿ ಪ್ರಯಾಣಿಸುತ್ತಿದ್ದು, ನಿಗಮಕ್ಕೆ ರೂ.32 ಲಕ್ಷ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ, ಸೆಪ್ಟೆಂಬರ್ 11ರಂದು ಕ್ಯಾಬ್ ಸೇರಿದಂತೆ ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ ನಡೆಸಿದ್ದವು. ಆಗ ವಾಯುವಜ್ರ ಬಸ್ ಮೂಲಕ ಒಂದೇ ದಿನ ರೂ.60 ಲಕ್ಷ ಆದಾಯ ಬಂದಿತ್ತು. ಅಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಇದೇ ಬಸ್‌ನಲ್ಲಿ ಪ್ರಯಾಣಿಸಿ, ಆ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.
ವಾಯು ವಜ್ರ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ, ಮತ್ತೆರೆಡು ಹೊಸ ಮಾರ್ಗದಲ್ಲಿ ಬಿಎಂಟಿಸಿ ಈ ಬಸ್ ಸೇವೆಯನ್ನು ಒದಗಿಸಿದೆ. ಸಾಮಾನ್ಯವಾಗಿ, ಐಟಿ ಕಂಪನಿಗಳಿರುವ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ವಾಯು ವಜ್ರ ಬಸ್‌ಗಳು, ಕೊರೋನಾ ಕಾರಣ, ಸಂಸ್ಥೆಗಳು ಮನೆಯಲ್ಲಿ ಕೆಲಸ ಮಾಡುವ ನಿಯಮ ಜಾರಿಗೊಳಿಸಿದ್ದವು. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದವು.

ಟಿಕೆಟ್ ದರದಲ್ಲಿ ಶೇಕಡ 54% ಇಳಿಕೆ ಮಾಡಲಾದರೂ ಈವರೆಗೂ ಚೇತರಿಸಿಕೊಂಡಿಲ್ಲ. ಆದರೆ, ಕ್ಯಾಬ್ ಸೇವೆ ಹಾಗೂ ಹೆಚ್ಚಿನ ಸಂಚಾರ ದಟ್ಟಣೆ ನಡುವೆಯೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಯು ವಜ್ರ (ವೋಲ್ವೋ) ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗಮಕ್ಕೆ ಉತ್ತಮ ಆದಾಯ ಬರುತ್ತಿದೆ. ಓಲಾ, ಉಬರ್ ಕಂಪನಿಗಳು ವಿಧಿಸುವ ಹೆಚ್ಚಿನ ದರದ ಕಾರಣ, ಈ ಬಸ್‌ಗಳತ್ತ ಹಲವಾರು ಆಸಕ್ತಿ ತೋರಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಭಾಗವಾಗಿ ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದು ವಾಯು ವಜ್ರ ಸೇವೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದಕ್ಕೆ ಕಾರಣವೆಂದರೆ, ಬಿಎಂಟಿಸಿ ವಿಮಾನ ನಿಲ್ದಾಣದ ಮಾರ್ಗದಲ್ಲಿ ಯಾವುದೇ ಸಾಮಾನ್ಯ ಬಸ್‌ಗಳನ್ನು ಓಡಿಸುತ್ತಿಲ್ಲ. ಇದರೊಟ್ಟಿಗೆ ವಾಯು ವಜ್ರ ಬಸ್ ಸಿಬ್ಬಂದಿಗೂ ಕೌಶಲ್ಯ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ.
ದಶಕಗಳ ಹಿಂದೆ, ಬೆಂಗಳೂರು ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಬಸ್‌ಗಳು ಮತ್ತೆ ಬರಲಿವೆ. ಅದಕ್ಕಾಗಿ ಬಿಎಂಟಿಸಿ ಸಾಕಷ್ಟು ಸಿದ್ಧತೆ ನಡೆಸುತ್ತಿದೆ. ಈ ಬಸ್‌ಗಳನ್ನು ತಾನೇ ಖರೀದಿಸುವ ಯೋಜನೆಯನ್ನು ಕೈಬಿಟ್ಟಿರುವ ನಿಗಮವು, ಒಟ್ಟು ವೆಚ್ಚದ ಒಪ್ಪಂದ (Gross Cost Contract - GCC) ಮಾದರಿಯಲ್ಲಿ ಪಡೆಯಲು ತೀರ್ಮಾನ ಮಾಡಿದೆ.
ಬಹುತೇಕರಿಗೆ, ಈ ಮಾದರಿ ಬಗ್ಗೆ ಗೊಂದಲವಿರಬಹುದು. ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ, ಬಿಎಂಟಿಸಿ ನಿರ್ವಾಹಕರನ್ನು ಮಾತ್ರ ಒದಗಿಸಲಿದ್ದು, ಗುತ್ತಿಗೆ ಪಡೆದ ಖಾಸಗಿ ಕಂಪನಿ, ಡಬಲ್ ಡೆಕ್ಕರ್ ಬಸ್, ಅದರ ಚಾಲಕ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕಿಲೋಮೀಟರ್ ಆಧಾರದ ಮೇಲೆ ಬಿಎಂಟಿಸಿ ಕಾರ್ಯಾಚರಣೆಯ ವೆಚ್ಚವನ್ನು ಪಾವತಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications