ತೊಡೆಯ ಮೇಲೆ ಯುವತಿ: ಇದೆಲ್ಲಾ ಬೇಕಿತ್ತಾ... ಊಹಿಸದ ಟ್ವಿಸ್ಟ್ ಕೊಟ್ಟ ಬೆಂಗಳೂರು ಪೊಲೀಸರು!

ಸಾರ್ವಜನಿಕ ರಸ್ತೆಗಳಲ್ಲಿ ಯುವಜನತೆ ಮಾಡುವ ಕೆಲ ಕೃತ್ಯಗಳು ನೋಡುಗರಿಗೆ ಮುಜುಗರ ತರಿಸುತ್ತವೆ. ಪೊಲೀಸರು ಇಂತಹ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ, ಇಂತಹ ಹುಚ್ಚಾಟಗಳು ನಡಿಯುತ್ತಲೇ ಇವೆ. ಇತ್ತೀಚೆಗೆ ವ್ಯಕ್ತಿಯೋರ್ವ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೈಕ್ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬಂಧಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯಲು ಅಜಾಗರೂಕತೆಯಿಂದ ಸವಾರಿ ಮಾಡುವುದರ ಜೊತೆಗೆ, ಚಲಿಸುವ ಬೈಕುಗಳಲ್ಲಿ ಪ್ರಣಯ ಚಟುವಟಿಕೆಗಳಲ್ಲಿ ತೊಡಗಿರುವ ನಿದರ್ಶನಗಳಿವೆ. ಆದ್ರೆ ಇಲ್ಲಿ ವಿಡಿಯೋಗಾಗಿ ಇಂತಹ ಕೃತ್ಯ ಮಾಡಿಲ್ಲವಾದ್ರೂ, ನಾಲ್ಕು ಗೋಡೆಯ ಮಧ್ಯೆ ಮಾಡುವುದನ್ನು ಬೈಕಿನಲ್ಲಿ ಮಾಡಿ ಅಕ್ಕಪಕ್ಕ ಸಂಚರಿಸುತ್ತಿದ್ದ ವಾಹನ ಸವಾರರನ್ನು ಮುಜುಗರಗೊಳಿಸಿದ್ದಾರೆ. ಬೈಕ್ ಸವಾರನ ಹಿಂದೆ ಚಾಲನೆ ಮಾಡುತ್ತಿದ್ದ ಯಾರೋ ಒಬ್ಬರು ವೀಡಿಯೊವನ್ನು ಮಾಡಿ ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

bangalore-police-arrested-couple-who-were-romanced-on-moving-bike

ಬಜಾಜ್ ಪಲ್ಸರ್ ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೈಕ್ ಸವಾರಿ ಮಾಡುತ್ತಿರುವ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸರು ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು, ಸರಿಯಾದ ಪುರಾವೆಗಳೊಂದಿಗೆ ಈ ರೀತಿಯ ವಿಷಯ ವರದಿಯಾದಾಗ ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ವೀಡಿಯೊದಲ್ಲಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಜಾಜ್ ಪಲ್ಸರ್ ಬೈಕ್ ಸವಾರಿ ಮಾಡುತ್ತಿದ್ದು, ವ್ಯಕ್ತಿ ಬೈಕ್ ಸವಾರಿ ಮಾಡುವಾಗ ತನ್ನ ಗೆಳತಿಯನ್ನು ತನ್ನ ತೊಡೆಯ ಮೇಲೆ ಕೂರಿಸುವ ಮೂಲಕ ಅವಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದ. ಸವಾರನ ತೊಡೆಯ ಮೇಲೆ ಕುಳಿತಿದ್ದ ಯುವತಿ ಕೂಡ ಆತನನ್ನು ತಬ್ಬಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

bangalore-police-arrested-couple-who-were-romanced-on-moving-bike

ಯುವತಿ ಹಾಗೂ ಯುವಕ ಇಬ್ಬರೂ ಸ್ಟಂಟ್‌ ಮಾಡುತ್ತಾ ಹೆಲ್ಮೆಟ್ ಕೂಡ ಧರಿಸಿಲ್ಲ, ಇದು ಅತ್ಯಂತ ಅಪಾಯಕಾರಿ. ಬೆಂಗಳೂರು ಟ್ರಾಫಿಕ್ ಪೊಲೀಸರು ಈ ವೀಡಿಯೊವನ್ನು ಪೋಸ್ಟ್ ಮಾಡಿ, "ಹೇ ಥ್ರಿಲ್ ಅನ್ವೇಷಕರೇ, ರಸ್ತೆ' ಸ್ಟಂಟ್‌ಗಳಿಗೆ ವೇದಿಕೆಯಲ್ಲ! ನಿಮ್ಮ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲರನ್ನೂ ಸುರಕ್ಷಿತವಾಗಿರಿಸಿ. ಜವಾಬ್ದಾರಿಯುತವಾಗಿ ಸವಾರಿ ಮಾಡೋಣ ಎಂದು ಬರೆದು ಜಾಗೃತಿ ಮೂಡಿಸಿದ್ದಾರೆ. ಕೊನೆಗೂ ವೀಡಿಯೊದಲ್ಲಿದ್ದ ಯುವಕನ್ನು ಬಂಧಿಸಿ ಆತನ ವಿರುದ್ಧ ಹೆಬ್ಬಾಳ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೈಕ್ ಮತ್ತು ಸವಾರ ಇಬ್ಬರನ್ನೂ ಪತ್ತೆಹಚ್ಚಿ, ಬಂಧಿಸಲಾಗಿದೆ. ಈ ಬೇಜವಾಬ್ದಾರಿ ವರ್ತನೆಗೆ ದಂಡ ಕೂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ತ್ವರಿತ ಪ್ರತಿಕ್ರಿಯೆಗೆ ಸಂಚಾರ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಲಾಗಿದೆ. ಆದರೆ ಪೊಲೀಸರು ಯುವತಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆ ಮೋಟಾರ್ ಸೈಕಲ್ ಸವಾರಿ ಮಾಡದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಇಂತಹ ಸಾಹಸಗಳು ಅತ್ಯಂತ ಅಪಾಯಕಾರಿ. ನೀವು ಗಮನಿಸಿದರೆ, ಯುವತಿ ಸವಾರನ ಕುತ್ತಿಗೆಯ ಬಳಿ ಕೈಗಳನ್ನು ಹಾಕಿ ತಬ್ಬಿಕೊಂಡಿದ್ದಾಳೆ. ಇದು ಸವಾರನಿಗೆ ಮುಂಭಾಗದಲ್ಲಿ ನೋಡಲು ಸರಿಯಾದ ನೋಟವನ್ನು ನೀಡುವುದಿಲ್ಲ. ಇದು ಸಂಭವನೀಯ ಅಪಘಾತಗಳನ್ನು ಹೆಚ್ಚಿಸುತ್ತಿದೆ. ಅವರಿಬ್ಬರೂ ಬಿದ್ದು ತೀವ್ರವಾಗಿ ಗಾಯಗೊಳ್ಳುವುದರ ಜೊತೆಗೆ ಇತರ ರಸ್ತೆ ಬಳಕೆದಾರರಿಗೂ ಅಪಾಯವನ್ನುಂಟು ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 21, 2024, 12:13 [IST]
English summary
Bangalore police arrested couple who were romanced on moving bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+