Red Rabbit Racers: ಬೆಂಗಳೂರಿನಲ್ಲಿ ನಾಳೆ ರೆಡ್ ರ‍್ಯಾಬಿಟ್ ರೇಸರ್ಸ್ ಪ್ರತಿಭಾನ್ವೇಷಣೆ, ಇಲ್ಲಿದೆ ಮಾಹಿತಿ
ಕೆಲವರ ಜೀವನದಲ್ಲಿ ರೇಸ್ ಎಂಬುದು ಅವಿಭಾಗ್ಯ ಅಂಗವಾಗಿದ್ದು, ತಮ್ಮ ಸರ್ವಸ್ವವನ್ನು ಅರ್ಪಿಸಿರುತ್ತಾರೆ. ಆದರೆ, ಸೂಕ್ತವಾದ ಕೌಶಲ್ಯ ಹಾಗೂ ಪ್ರತಿಭೆ ಇದ್ದರೂ ನಾನಾ ಕಾರಣಗಳಿಗೆ ರೇಸರ್ ಆಗುವ ಆಸೆ ಒಂದಷ್ಟು ಮಂದಿಗೆ ಕನಸಾಗಿಯೇ ಉಳಿಯುತ್ತದೆ. ನೀವು ಮೋಟಾರ್ ರೇಸಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೆ, ಅದು ಸಾಕಾರಗೊಳ್ಳುವ ಕಾಲ ಬಂದಿದೆ.
ರೆಡ್ ರ‍್ಯಾಬಿಟ್ ರೇಸರ್ಸ್ (Red Rabbit Racers - R3), ಅಂತರರಾಷ್ಟ್ರೀಯ ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ದೇಶದ ಕೀರ್ತಿಯನ್ನು ವಿಶ್ವದಾದ್ಯಂತ ಹರಡಲು ಯುವ ರೇಸರ್ ಗಳನ್ನು ಹುಡುಕುತ್ತಿದೆ. ಅದಕ್ಕೆ ಟ್ಯಾಲೆಂಟ್ ಸ್ಕೌಟ್ ಹೆಸರಿನಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ನವ ಪ್ರತಿಭೆಗಳನ್ನು ಗುರುತಿಸುವ ಕೆಲಸಕ್ಕೆ ಕೈ ಹಾಕಿದೆ.

ಈ ಪ್ರತಿಭಾನ್ವೇಷಣೆ (ಟ್ಯಾಲೆಂಟ್ ಸ್ಕೌಟ್) ಯನ್ನು ದೇಶದಾದ್ಯಂತ ನಡೆಸಲು ರೆಡ್ ರ‍್ಯಾಬಿಟ್ ರೇಸರ್ಸ್ ತೀರ್ಮಾನ ಮಾಡಿದೆ. ಬೆಂಗಳೂರಿನ ಅರುಣಿ ಗ್ರಿಡ್‌ನಲ್ಲಿ ನಾಳೆ (ಆಗಸ್ಟ್ 26) ಟ್ಯಾಲೆಂಟ್ ಸ್ಕೌಟ್ ಏರ್ಪಡಿಸಲಾಗಿದೆ. ಇಲ್ಲಿ ಆಯ್ಕೆಯಾದವರಿಗೆ ತರಬೇತಿ, ವಿದ್ಯಾರ್ಥಿವೇತನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾಯೋಜಕತ್ವವನ್ನು ಒದಗಿಸಲಾಗುತ್ತದೆ.
ಇದರೊಟ್ಟಿಗೆ, ರೆಡ್ ರ‍್ಯಾಬಿಟ್ ರೇಸರ್ಸ್ ವತಿಯಿಂದ ಪ್ರತಿಭಾವಂತ ಯುವ ರೇಸರ್ ಗಳಿಗೆ, ಮುಂಬರುವ ಸಿಂಗಾಪುರ ಎಫ್ 1 ಗ್ರ್ಯಾಂಡ್ ಪ್ರಿಕ್ಸ್ (Singapore F1 grand prix) ವೀಕ್ಷಿಸುವ ಅವಕಾಶವೂ ದೊರೆಯುತ್ತದೆ. ಟ್ಯಾಲೆಂಟ್ ಸ್ಕೌಟ್ ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ರೆಡ್ ರ‍್ಯಾಬಿಟ್ ರೇಸರ್ಸ್ ಬಗ್ಗೆ ಪುಟ್ಟದಾಗಿ ಪರಿಚಯ ಹೇಳಬೇಕಾದರೆ, ಈ ತಂಡವು, ದೇಶದ ಅನೇಕ ಯುವ ರೇಸರ್ ಗಳನ್ನು ವಿವಿಧ ಅಂತರರಾಷ್ಟ್ರೀಯ ಆಟೋ ಸ್ಪೋರ್ಟ್ ಸ್ಪರ್ಧಿಗಳಲ್ಲಿ ಭಾಗವಹಿಸುವಂತೆ ಅಣಿಗೊಳಿಸಿದೆ. ವಿವಿಧ ಹಿನ್ನೆಲೆಯಿಂದ ಬರುವವರಿಗೆ ರೆಡ್ ರ‍್ಯಾಬಿಟ್ ರೇಸರ್ಸ್ ತಂಡದ ಪ್ರಮುಖರು, ವೃತ್ತಿಪರ ರೇಸಿಂಗ್‌ನಲ್ಲಿ ಭಾಗವಹಿಸುವಂತೆ ಸೂಕ್ತ ತರಬೇತಿಯನ್ನು ನೀಡುತ್ತಾರೆ.
ರೆಡ್ ರ‍್ಯಾಬಿಟ್ ರೇಸರ್ಸ್, ನೇಷನ್ ಕಪ್‌ನಲ್ಲಿ ಚಾಂಪಿಯನ್ ಟ್ರೋಫಿಯನ್ನು ಪಡೆದಿದ್ದು, 2020ರಲ್ಲಿ ದುಬೈನಲ್ಲಿ ನಡೆದ ಕಾರ್ಟ್‌ಡ್ರೋಮ್ ಎಂಡ್ಯೂರೆನ್ಸ್ ಚಾಂಪಿಯನ್‌ಶಿಪ್ ಟ್ರೋಫಿಯ ಕಾರ್ಪೊರೇಟ್ ಕಪ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು. ಇದು, ರೇಸಿಂಗ್ ತಂಡವಾಗಿ ಮಾತ್ರವಲ್ಲದೆ, ಕಾರ್ಟ್ ಫಿಟ್ಟಿಂಗ್, ಕಾರ್ಟ್ ಸೆಟಪ್, ಕಾರ್ಟ್ ಡೈನಾಮಿಕ್ಸ್, ಬ್ರೇಕಿಂಗ್, ಮೆಕ್ಯಾನಿಕಲ್ ಪ್ರೊಸೆಸ್ & ಡೇಟಾ ಅನಾಲಿಸಿಸ್‌ನಂತಹ ಸೇವೆಯನ್ನು ಒದಗಿಸುತ್ತದೆ.
ಟ್ಯಾಲೆಂಟ್ ಸ್ಕೌಟ್‌ಗೆ ನೋಂದಣಿ ಮಾಡಿಕೊಳ್ಳಲು Instagramನಲ್ಲಿ @redrabbitracers ಖಾತೆಯನ್ನು ಸಂಪರ್ಕಿಸಬಹುದು. ಇಲ್ಲವೇ ಮೊಬೈಲ್ ಸಂಖ್ಯೆ +91 94336 74185ಗೆ ಕರೆ ಮಾಡಬಹುದು. ನೀವು ಸ್ಥಳದಲ್ಲಿಯೂ (ಅರುಣಿ ಗ್ರಿಡ್, ಸರ್ಜಾಪುರ) ಸಹ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅದಕ್ಕೆ ನಾಳೆ ಬೆಳಿಗ್ಗೆ 9 ಗಂಟೆವರೆಗೆ ಅವಕಾಶವಿರುತ್ತದೆ. ರೆಡ್ ರ‍್ಯಾಬಿಟ್ ರೇಸರ್ಸ್, ಟ್ಯಾಲೆಂಟ್ ಸ್ಕೌಟ್ ಸಂಬಂಧಿತ ಪ್ರತಿಯೊಂದು ಸುದ್ದಿಯನ್ನು 'ಡ್ರೈವ್ ಸ್ಪಾರ್ಕ್' ಕನ್ನಡದಲ್ಲಿ ಓದಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications