ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಲಾದ ಅತಿ ಉದ್ದದ ಬೈಕ್ ಅನ್ನು ಬೆಂಗಳೂರು ನಗರ ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಈ ಬೈಕ್ ನಿಗದಿಗಿಂತ ಹೆಚ್ಚು ಉದ್ದ ಅಂದರೆ 13 ಅಡಿ ಉದ್ದವನ್ನು ಹೊಂದಿರುವುದೇ ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆಯಲು ಕಾರಣವಾಗಿದೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಅಧಿಕಾರಿಗಳು ಈ ಬೈಕ್ ಅನ್ನು ವಶಕ್ಕೆ ಪಡೆದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ ಭಾರತದಲ್ಲಿ ವಾಹನ ಮಾರ್ಪಾಡು ಮಾಡುವುದನ್ನು ನಿಷೇಧಿಸಲಾಗಿದೆ. ವಾಹನ ಮಾರ್ಪಾಡು ಮಾಡುವುದು ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆಯಾಗಿದೆ. ಆದರೂ ಈ ನಿಯಮವನ್ನು ಉಲ್ಲಂಘಿಸಿ ಕೆಲವರು ತಮ್ಮ ವಾಹನಗಳನ್ನು ಮಾಡಿಫೈ ಮಾಡುತ್ತಲೇ ಇರುತ್ತಾರೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಕೊನೆಗೆ ತಪಾಸಣೆ ವೇಳೆಯಲ್ಲಿ ಸಿಕ್ಕಿ ಬಿದ್ದು ದಂಡ ಪಾವತಿಸಬೇಕಾಗುತ್ತದೆ. ಈ ವಾಹನವನ್ನು ನಮ್ಮ ಬೆಂಗಳೂರಿನ ಜಾಕಿರ್ ಖಾನ್ ಎಂಬುವವರು ವಿನ್ಯಾಸಗೊಳಿಸಿದ್ದರು. ಅವರು ತಮ್ಮ ದ್ವಿಚಕ್ರ ವಾಹನ ರಿಪೇರಿ ಅಂಗಡಿಯಲ್ಲಿ ಈ ಬೈಕ್ ಅನ್ನು ಅಭಿವೃದ್ಧಿ ಪಡಿಸಿದ್ದರು.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಬೆಂಗಳೂರು ನಗರ ಸಾರಿಗೆ ಅಧಿಕಾರಿಗಳು ಜಾಕಿರ್ ಖಾನ್ ರವರ ವರ್ಕ್ ಶಾಪ್ ನಲ್ಲಿ ನಿಲ್ಲಿಸಿದ್ದ ಈ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಜಾಕಿರ್ ಖಾನ್ ಅವರ ಬೈಕ್ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ. ಇದರ ಜೊತೆಗೆ ಈ ಬೈಕ್ ಇನ್ನೂ ಹಲವು ಸಾಧನೆಗಳನ್ನು ಸೃಷ್ಟಿಸಿದೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಇಂತಹ ಸೂಪರ್ ಸ್ಪೆಷಲ್ ಬೈಕ್ ಅನ್ನು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೈಕ್ ಅನ್ನು ಮಾರ್ಪಡು ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕಾಗಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಆದರೆ ಖಾಸಗಿ ಪಾರ್ಕಿಂಗ್, ವರ್ಕ್ ಶಾಪ್, ಆಟೋಮೊಬೈಲ್ ಪ್ರದರ್ಶನ, ಖಾಸಗಿ ರಸ್ತೆ ಹಾಗೂ ರೇಸಿಂಗ್ ಟ್ರ್ಯಾಕ್‌ನಂತಹ ಪ್ರದೇಶಗಳಲ್ಲಿರುವ ವಾಹನಗಳನ್ನು ಜಪ್ತಿ ಮಾಡಬಾರದು ಎಂಬ ನಿಯಮವಿದೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಭಾರತದ ಸಿಲಿಕಾನ್ ಸಿಟಿ ಖ್ಯಾತಿಯ ನಮ್ಮ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಆರ್‌ಟಿಒ ಅಧಿಕಾರಿಗಳ ಈ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಮಾಡಿಫೈ ಮಾಡಲಾದ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಿದರೆ ಮಾತ್ರ ಅವುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಈ ನಿಯಮವು ದ್ವಿಚಕ್ರ ವಾಹನಗಳಿಗೆ ಮಾತ್ರವಲ್ಲ ಕಾರುಗಳಿಗೂ ಅನ್ವಯಿಸುತ್ತದೆ. ಯಾವುದೇ ಮಾಡಿಫೈ ಮಾಡಲಾದ ವಾಹನಗಳು ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುವುದು ಕಾನೂನು ಬಾಹಿರವಾಗಿದೆ. ಸಂಬಂಧಿತ ಆರ್‌ಟಿಒ ಗಳಿಂದ ಅನುಮತಿ ಪಡೆದಿದ್ದರೆ ಮಾತ್ರ ಅವುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಳಸಬಹುದು.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಆರ್‌ಟಿಒ ಅನುಮತಿ ನೀಡದಿದ್ದರೂ ಈ ವಾಹನವನ್ನು ನಾನು ಸಾರ್ವಜನಿಕ ರಸ್ತೆಗಳಲ್ಲಿ ಬಳಸುತ್ತಿರಲಿಲ್ಲ. ಆದರೂ ನನ್ನ ಬೈಕ್ ಅನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳ ಈ ಕ್ರಮದ ವಿರುದ್ಧ ನಾನು ಹೋರಾಟ ನಡೆಸಲಿದ್ದೇನೆ ಎಂದು ಜಾಕಿರ್ ಖಾನ್ ಹೇಳಿದ್ದಾರೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಇದರ ಜೊತೆಗೆ ಜಾಕೀರ್ ಖಾನ್ ತಮ್ಮ ದೈತ್ಯ ಬೈಕ್ ಅನ್ನು ಹಿಂದಿರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆರ್‌ಟಿಒ ಆಯುಕ್ತರಾದ ಶಿವಕುಮಾರ್ ರವರ ಗಮನ ಸೆಳೆಯುವ ಸಲುವಾಗಿ ಅವರು ವಿಶ್ವ ದಾಖಲೆ ಮಾಡಿದ ತಮ್ಮ ಬೈಕಿನ ಕುರಿತ ವೀಡಿಯೊವನ್ನು ಅಪ್ ಲೋಡ್ ಮಾಡಿದ್ದಾರೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಈ ದೈತ್ಯ ಬೈಕ್ ಅನ್ನು ಜಾಕಿರ್ ಖಾನ್ ರವರು ಸುಮಾರು ರೂ. 6 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಅವರು ಬಜಾಜ್ ಅವೆಂಜರ್ ಬೈಕ್ ಬಳಸಿ 13 ಅಡಿ ಉದ್ದದ ಈ ಬೈಕ್ ಅನ್ನು ವಿನ್ಯಾಸಗೊಳಿಸಿದ್ದಾರೆ ಎಂಬುದು ವಿಶೇಷ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಈ ಬೈಕಿನಲ್ಲಿ 220 ಸಿಸಿ ಎಂಜಿನ್ ಅಳವಡಿಸಲಾಗಿದೆ. ಆದರೆ ಮಾಡಿಫೈಗೊಂಡ ಬೈಕಿನಲ್ಲಿ ಟಯರ್ ಹಾಗೂ ಚಾಸಿಸ್ ನಂತಹ ಕೆಲವು ಬಿಡಿ ಭಾಗಗಳನ್ನು ಬದಲಿಸಲಾಗಿದೆ. ಈ ಬೈಕಿನಲ್ಲಿ 50 ಲೀಟರ್ ಸಾಮರ್ಥ್ಯದ ಬೃಹತ್ ಫ್ಯೂಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ.

ಈ ಬೈಕ್ ಒಟ್ಟಾರೆಯಾಗಿ 450 ಕೆ.ಜಿ ತೂಕವನ್ನು ಹೊಂದಿದೆ. ಈ ಬೈಕ್ ಹೆಚ್ಚು ಕಡಿಮೆ ಒಂದು ಸಣ್ಣ ಕಾರಿನಷ್ಟು ತೂಕವನ್ನು ಹೊಂದಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಬೈಕ್ ಅನ್ನು ಬೆಂಗಳೂರು ನಗರ ಆರ್‌ಟಿಒ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ವಿಶ್ವ ದಾಖಲೆಗಾಗಿ ವಿನ್ಯಾಸಗೊಳಿಸಿದ ದೈತ್ಯ ಬೈಕ್ ಅನ್ನು ವಶಕ್ಕೆ ಪಡೆದ ಆರ್‌ಟಿಒ ಅಧಿಕಾರಿಗಳು

ಮಾಡಿಫೈ ಮಾಡಲಾದ ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಇಂತಹ ಹಲವು ಘಟನೆಗಳು ಈ ಹಿಂದೆ ದೇಶಾದಾದ್ಯಂತ ನಡೆದಿದ್ದವು ಎಂಬುದು ಗಮನಾರ್ಹ.

ಚಿತ್ರ ಕೃಪೆ: ಡಾ-ಜಾಕಿರ್ ಖಾನ್ ಮತ್ತು ರುಪ್ಟ್ಲಿ

Most Read Articles

Kannada
English summary
Bangalore rto officials seizes modified chopper bike designed for world record details
Story first published: Saturday, August 7, 2021, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X