ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಜನರು ವಾಹನ ರಿಪೇರಿ ಅಂಗಡಿಗೆ ಹೋದಾಗ ವ್ಹೀಲ್ ಅಲೈನ್ ಮೆಂಟ್ ಎಂಬ ಪದವನ್ನು ಕೇಳಿಯೇ ಇರುತ್ತಾರೆ. ವ್ಹೀಲ್ ಅಲೈನ್ ಮೆಂಟ್ ಎಂದರೇನು, ಅದು ಏಕೆ ಬಹಳ ಮುಖ್ಯ ಎಂಬ ಪ್ರಶ್ನೆಗಳಿಗೆ ಹಲವು ಜನರಿಗೆ ಉತ್ತರ ತಿಳಿದಿಲ್ಲ. ಈ ಲೇಖನದಲ್ಲಿ ವ್ಹೀಲ್ ಅಲೈನ್ ಮೆಂಟ್'ಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೋಡೋಣ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಸರಳವಾಗಿ ಹೇಳುವುದಾದರೆ ವ್ಹೀಲ್ ಅಲೈನ್ ಮೆಂಟ್, ಕಾರಿನ ಎಲ್ಲಾ 4 ವ್ಹೀಲ್ ಗಳು ಹಾಗೂ ಟಯರ್‌ಗಳು ಒಂದೇ ದಿಕ್ಕಿನಲ್ಲಿ ಚಲಿಸುವುದನ್ನು ಖಚಿತ ಪಡಿಸುತ್ತದೆ. ಕೆಲವೊಮ್ಮೆ ಕಾರಿನ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿರಬಹುದು. ಸಣ್ಣ ಪ್ರಮಾಣದಲ್ಲಿ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೂ, ಅದು ಕಾರಿನ ಕಾರ್ಯಕ್ಷಮತೆ ಹಾಗೂ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಈ ಕಾರಣಕ್ಕೆ ಯಾವುದೇ ಕಾರಿಗೆ ವ್ಹೀಲ್ ಅಲೈನ್ ಮೆಂಟ್ ಬಹಳ ಮುಖ್ಯ. ಸರಿಯಾದ ವ್ಹೀಲ್ ಅಲೈನ್ ಮೆಂಟ್ ನಿಂದ ಆಗುವ ಪ್ರಯೋಜನಗಳೇನು ಎಂಬುದನ್ನೂ ಸಹ ಈ ಲೇಖನದಲ್ಲಿ ನೋಡೋಣ. ಇದರಿಂದ ಕಾರು ಮಾಲೀಕರಿಗೆ ಪ್ರಯೋಜನವಾಗುವ ಸಾಧ್ಯತೆಗಳಿವೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಮೈಲೇಜ್

ಕಾರಿನ ವ್ಹೀಲ್ ಅಲೈನ್ ಮೆಂಟ್ ಇಂಧನ ಮಿತವ್ಯಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಸರಿಯಾಗಿ ಜೋಡಿಸಿದ ವ್ಹೀಲ್ ಗಳು ಪವರ್ ಹಾಗೂ ಟಾರ್ಕ್ ಅನ್ನು ಸಮವಾಗಿ ವಿತರಿಸಲು ನೆರವಾಗುತ್ತವೆ. ಇದರಿಂದ ಇಂಧನ ಹಾಗೂ ಶಕ್ತಿ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಇದು ಮೈಲೇಜ್ ಅನ್ನು ಸಹ ಹೆಚ್ಚಿಸುತ್ತದೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೆ, ಕಾರಿನ ಮೈಲೇಜ್ 10% ವರೆಗೆ ಇಳಿಯುತ್ತದೆ. 10% ನಿಜವಾಗಿಯೂ ದೊಡ್ಡ ಪ್ರಮಾಣವಾಗಿದೆ. ಅದೂ ವಿಶೇಷವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಕಾರಿನ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿದ್ದರೆ, ವಾಹನ ಸವಾರರು ದೊಡ್ಡ ಮೊತ್ತವನ್ನು ಉಳಿಸಬಹುದು.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಟಯರಿನ ಜೀವಿತಾವಧಿ ಹೆಚ್ಚಾಗುತ್ತದೆ

ಕಾರಿನಲ್ಲಿ ವ್ಹೀಲ್ ಅಲೈನ್ ಮೆಂಟ್ ಸಮಸ್ಯೆ ಇದೆಯೇ ಎಂಬುದನ್ನು ಟಯರ್‌ಗಳ ಮೂಲಕ ಸುಲಭವಾಗಿ ಕಂಡುಕೊಳ್ಳಬಹುದು. ಟಯರ್ ಗಳು ಹಾಳಾಗಿದ್ದರೆ ವ್ಹೀಲ್ ಅಲೈನ್ ಮೆಂಟ್ ತಪ್ಪಾಗಿದೆ ಎಂದು ಊಹಿಸಬಹುದು. ಅಥವಾ ಮಧ್ಯದ ಭಾಗಕ್ಕಿಂತ ಅಂಚುಗಳು ತುಂಬಾ ತೆಳುವಾಗಿದ್ದರೂ, ವ್ಹೀಲ್ ಅಲೈನ್ ಮೆಂಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ವ್ಹೀಲ್ ಅಲೈನ್ ಮೆಂಟ್ ಹಾಗೂ ಟಯರ್ ಗಳನ್ನು ನಿಯಮಿತವಾಗಿ ಸರಿಹೊಂದಿಸುವುದರಿಂದ ಟಯರ್‌ಗಳ ಜೀವಿತಾವಧಿ ಹೆಚ್ಚುತ್ತದೆ. ಮೈಲೇಜ್'ಗೆ ಆದ್ಯತೆ ನೀಡುವಂತೆ ಟಯರ್ ಗಳ ಬಗ್ಗೆಯೂ ಕಾಳಜಿ ವಹಿಸುವುದು ಉತ್ತಮ. ಇದು ವಾಹನ ಸವಾರರ ಹಣವನ್ನು ಉಳಿಸುತ್ತದೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಇತರ ಬಿಡಿ ಭಾಗಗಳಿಗೆ ಹಾನಿ ಕಡಿಮೆಯಾಗುತ್ತದೆ

ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೆ, ಕಾರಿನ ಇತರ ಪ್ರಮುಖ ಬಿಡಿ ಭಾಗಗಳು ಹಾಳಾಗುತ್ತವೆ. ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೆ ಸಸ್ಪೆಂಷನ್, ಟ್ರಾನ್ಸ್ ಮಿಷನ್ ನಂತಹ ಬಿಡಿ ಭಾಗಗಳು ಪ್ರಯಾಸದಿಂದ ಕಾರ್ಯ ನಿರ್ವಹಿಸ ಬೇಕಾಗುತ್ತದೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಹೀಗಾಗಿ ಅವು ಬೇಗನೆ ಹಾಳಾಗಬಹುದು. ಆದರೆ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿದ್ದರೆ, ಪ್ರಮುಖ ಬಿಡಿ ಭಾಗಗಳಿಗೆ ಹಾನಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಜೊತೆಗೆ ಅಗತ್ಯವಿಲ್ಲದ ಅವ್ಯವಸ್ಥೆಯನ್ನು ತೊಡೆದು ಹಾಕುವುದರಿಂದ ಹಣ ಕೂಡ ಉಳಿಯುತ್ತದೆ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಸ್ಟೀಯರಿಂಗ್ ವ್ಹೀಲ್ ಅಪ್ ಡೇಟ್

ಕಾರಿನ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೆ, ಸ್ಟೀಯರಿಂಗ್ ವ್ಹೀಲ್ ಹಿಡಿದು ಚಾಲನೆ ಮಾಡುವಾಗ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಸ್ಟೀಯರಿಂಗ್ ವ್ಹೀಲ್ ನಿಯಂತ್ರಣ ಸರಿಯಾಗಿಲ್ಲದಿದ್ದರೆ, ರಸ್ತೆ ಅಪಘಾತಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚು.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ವ್ಹೀಲ್ ಅಲೈನ್ ಮೆಂಟ್ ಸರಿಯಾಗಿದ್ದರೆ, ಇಂತಹ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗೆಯೇ ಸ್ಟೀಯರಿಂಗ್ ವ್ಹೀಲ್ ನ ಕಾರ್ಯವು ಉತ್ತಮವಾಗಿರುವುದರಿಂದ, ಕಾರನ್ನು ಸರಿಯಾಗಿ ಚಾಲನೆ ಮಾಡಬಹುದು. ಜೊತೆಗೆ ಕಾರನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದು ಗಮನಾರ್ಹ.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಅತ್ಯುತ್ತಮ ನಿರ್ವಹಣೆ

ಕಾರಿನ ವ್ಹೀಲ್ ಅಲೈನ್ ಮೆಂಟ್ ಸರಿಯಾಗಿದ್ದರೆ, ನಿರ್ವಹಣೆಯೂ ಉತ್ತಮವಾಗಿರುತ್ತದೆ. ಕಾರು ಎಲ್ಲಿಯೇ ಚಲಿಸಿದರೂ ಅಂದರೆ ಅಂಕು ಡೊಂಕಾದ ರಸ್ತೆಗಳು ಹಾಗೂ ಪರ್ವತ ರಸ್ತೆಗಳಲ್ಲಿ ಚಲಿಸಿದರೂ ಸಹ ಕಾರಿನ ಹ್ಯಾಂಡ್ಲಿಂಗ್ ಉತ್ತಮವಾಗಿರುತ್ತದೆ. ವ್ಹೀಲ್ ಅಲೈನ್ ಮೆಂಟ್ ಮಾಡಿದ ನಂತರ ಚಾಲಕರು ಕಾರಿನ ನಿರ್ವಹಣೆಯ ವ್ಯತ್ಯಾಸವನ್ನು ಬಹಳ ಸುಲಭವಾಗಿ ಗಮನಿಸಬಹುದು.

ವ್ಹೀಲ್ ಅಲೈನ್ ಮೆಂಟ್ ನಿಂದಾಗುವ ಪ್ರಮುಖ ಪ್ರಯೋಜನಗಳಿವು

ಸುರಕ್ಷತೆ

ಕಾರಿನ ವ್ಹೀಲ್ ಅಲೈನ್ ಮೆಂಟ್ ಸಂಪೂರ್ಣವಾಗಿ ಸರಿಯಾಗಿದ್ದರೆ, ನಿರ್ವಹಣೆ ಉತ್ತಮವಾಗಿದ್ದು, ಸುರಕ್ಷತೆ ಹೆಚ್ಚಾಗುತ್ತದೆ. ಕಾರು ಸುರಕ್ಷಿತವಾಗಿರುವುದು ಬಹಳ ಮುಖ್ಯ. ಇದರಿಂದ ಚಾಲಕರು ಮಾತ್ರವಲ್ಲದೇ ಅವರ ಜೊತೆಯಲ್ಲಿ ಪ್ರಯಾಣಿಸುವ ಎಲ್ಲರಿಗೂ ಅನುಕೂಲವಾಗುತ್ತದೆ.

ಎಷ್ಟೇ ದೊಡ್ಡ ಕಾರ್ ಆಗಿದ್ದರೂ, ಸಣ್ಣ ಪುಟ್ಟ ಸಮಸ್ಯೆಗಳನ್ನು ಸಕಾಲದಲ್ಲಿ ಸರಿ ಪಡಿಸದಿದ್ದರೆ ಭಾರೀ ಅನಾಹುತವಾಗುವುದು ಖಚಿತ. ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳನ್ನು ಹೊಂದಿರುವ ಕಾರುಗಳು ಸಹ ಟಯರ್ ಪಂಕ್ಚರ್ ಆಗಿದ್ದ ಕಾರಣಕ್ಕೆ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗಿದ್ದ ಹಲವು ಘಟನೆಗಳು ಈ ಹಿಂದೆ ವರದಿಯಾಗಿವೆ. ನಮ್ಮದು ದೊಡ್ಡ ಕಾರು ಅಪಘಾತ ಸಂಭವಿಸಿದರೂ ಏನು ಆಗುವುದಿಲ್ಲ ಎಂಬ ಉದಾಸೀನತೆಯಿಂದಾಗಿಯೂ ಅಪಘಾತಗಳು ಸಂಭವಿಸಿವೆ. ಈ ಕಾರಣಕ್ಕೆ ವ್ಹೀಲ್ ಅಲೈನ್ ಮೆಂಟ್ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಸರಿ ಪಡಿಸುವುದು ಉತ್ತಮ.

Most Read Articles

Kannada
English summary
Benefits of doing wheel alignment details
Story first published: Tuesday, August 24, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X