ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

ಬೈಕ್ ಪ್ರವಾಸ ಹಲವು ಜನರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಸಾಮಾನ್ಯವಾಗಿ ದೂರದ ಪ್ರವಾಸಕ್ಕೆ ತೆರಳುವವರು ಕ್ರೂಸರ್ ಬೈಕ್ ಅಥವಾ ಅಡ್ವೆಂಚರ್ ಟೂರಿಂಗ್ ಬೈಕ್‌ಗಳನ್ನು ಬಳಸುತ್ತಾರೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

ಕ್ರೂಸರ್ ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್'ಗಳನ್ನು ಗಮನಿಸಬಹುದು. ಬೈಕ್‌ಗಳಲ್ಲಿ ಅಳವಡಿಸುವ ವಿಂಡ್‌ಶೀಲ್ಡ್'ಗಳಿಂದ ಹಲವಾರು ಪ್ರಯೋಜನಗಳಿವೆ. ಆ ಪ್ರಯೋಜನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

1. ಮುಂಭಾಗದ ಗಾಳಿಯಿಂದ ರಕ್ಷಣೆ

ಬೈಕ್‌ಗಳಲ್ಲಿರುವ ವಿಂಡ್‌ಶೀಲ್ಡ್'ಗಳು ಮುಂಭಾಗದಿಂದ ಬರುವ ಗಾಳಿಯನ್ನು ನಿರ್ಬಂಧಿಸುತ್ತವೆ. ವಿಂಡ್‌ಶೀಲ್ಡ್'ಗಳನ್ನು ಬೈಕ್ ಹಾಗೂ ಸವಾರನ ಸುತ್ತಲೂ ಬರುವ ಗಾಳಿ ಹರಡುವುದನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ವಿಶಾಲವಾದ ವಿಂಡ್‌ಶೀಲ್ಡ್ ಮುಂಭಾಗದಿಂದ ಗಾಳಿ ಬೈಕ್ ಸವಾರನತ್ತ ಬರುವುದನ್ನು ತಡೆಯುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

2. ಶಾಖ ಹಾಗೂ ಶೀತದಿಂದ ರಕ್ಷಣೆ

ವಿಂಡ್‌ಶೀಲ್ಡ್ ಮುಂಭಾಗದಿಂದ ಬರುವ ಬಲವಾದ ಗಾಳಿಯ ಹೊರತಾಗಿ ಬೈಕ್‌ ಸವಾರನನ್ನು ಶಾಖ ಹಾಗೂ ಶೀತದಿಂದ ಸಹ ರಕ್ಷಿಸುತ್ತದೆ. ಶೀತ ವಾತಾವರಣದಲ್ಲಿ ಬೈಕ್ ಸವಾರಿ ಮಾಡುವಾಗ ತಾಪಮಾನವು ಬೈಕ್‌ನ ತಾಪಮಾನಕ್ಕಿಂತ ಕಡಿಮೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ವಿಂಡ್‌ಶೀಲ್ಡ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

3. ಮಳೆಯಿಂದ ರಕ್ಷಣೆ

ಮಳೆಗಾಲದಲ್ಲಿ ವಿಂಡ್‌ಶೀಲ್ಡ್ ಇಲ್ಲದ ಬೈಕ್ ಚಾಲನೆ ಮಾಡುವುದು ಕಷ್ಟ. ಮಳೆ ಬೀಳುವಾಗ ಗೋಚರತೆ ಕಡಿಮೆಯಾಗುತ್ತದೆ. ಹೆಲ್ಮೆಟ್ ಧರಿಸಿದರೂ ನೋಡುವುದಕ್ಕೆಸಮಸ್ಯೆಯಾಗುತ್ತದೆ. ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ಮಳೆಯಿಂದ ಬೈಕ್ ಸವಾರನಿಗೆ ಹೆಚ್ಚು ರಕ್ಷಣೆ ನೀಡುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

4. ರಸ್ತೆಯಿಂದ ಹಾರುವ ವಸ್ತುಗಳಿಂದ ರಕ್ಷಣೆ

ಕೆಲವೊಮ್ಮೆ ಬೈಕ್ ಸವಾರನು ತಾಜಾ ಗಾಳಿಗಾಗಿ ಹೆಲ್ಮೆಟ್ ಗ್ಲಾಸ್ ತೆರೆದಾಗ ರಸ್ತೆಯ ಮೇಲೆ ಹಾರುವ ವಸ್ತುಗಳು ಕಣ್ಣಿಗೆ ಬೀಳುವ ಸಾಧ್ಯತೆಗಳಿರುತ್ತವೆ. ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ಬೈಕ್ ಸವಾರನಿಗೆ ಈ ರೀತಿಯ ವಸ್ತುಗಳು ಬೀಳದಂತೆ ತಡೆಯುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

5. ಆಯಾಸ ಕಡಿಮೆ ಮಾಡಲು ನೆರವಾಗುತ್ತದೆ

ದೂರದ ಪ್ರಯಾಣದಲ್ಲಿ ಗಾಳಿ ಬೈಕ್ ಸವಾರನನ್ನು ಆಯಾಸಗೊಳಿಸುತ್ತದೆ. ಮುಂಭಾಗದಿಂದ ಬರುವ ಗಾಳಿಗೆ ಹೊಂದಾಣಿಕೆಯಾಗಲು ಬೈಕ್ ಸವಾರ ಪರದಾಡ ಬೇಕಾಗುವುದರಿಂದ ಹೆಚ್ಚು ಆಯಾಸವಾಗುತ್ತದೆ. ಈ ವೇಳೆ ಬೈಕ್‌ನಲ್ಲಿರುವ ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ನೆರವಿಗೆ ಬರುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

6. ಶಬ್ದವನ್ನು ಕಡಿಮೆ ಮಾಡಲು ನೆರವಾಗುತ್ತದೆ

ಬೈಕ್ ಚಾಲನೆ ಮಾಡುವಾಗ ಸವಾರನಿಗೆ ಸಾಕಷ್ಟು ಶಬ್ದ ಕೇಳಿ ಬರುತ್ತದೆ. ಒಪನ್ ಫೇಸ್ ಹೆಲ್ಮೆಟ್‌ಗಳನ್ನು ಬಳಸುವ ಬೈಕ್ ಸವಾರರಿಗೆ ಈ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ವಿಂಡ್‌ಶೀಲ್ಡ್ ಬಳಕೆಯು ಮುಂಭಾಗದಿಂದ ಬರುವ ಗಾಳಿಯ ಶಬ್ದವನ್ನು ಕಡಿಮೆ ಮಾಡುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

7. ಉತ್ತಮ ಇಂಧನ ದಕ್ಷತೆ

ವಿಂಡ್‌ಶೀಲ್ಡ್'ಗಳು ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿರುತ್ತವೆ. ಇದರಿಂದ ಬಹುತೇಕ ಸಂದರ್ಭಗಳಲ್ಲಿ ಬೈಕ್ ಗಾಳಿಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಚಲಿಸಲು ಸಾಧ್ಯವಾಗುತ್ತದೆ. ಜೊತೆಗೆ ಸುಗಮ ಮೇಲ್ಮೈ ಗಾಳಿಯ ಮೂಲಕ ಹೆಚ್ಚು ಇಂಧನ ದಕ್ಷತೆಗೂ ಕಾರಣವಾಗುತ್ತದೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

8. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಭದ್ರತೆ

ಸಾಕಷ್ಟು ಜನರು ತಮ್ಮ ಬೈಕ್‌ಗಳ ಹ್ಯಾಂಡಲ್‌ಬಾರ್‌ನಲ್ಲಿ ಮೊಬೈಲ್ ಫೋನ್, ಜಿಪಿಎಸ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುತ್ತಾರೆ.

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್ ಬಳಸುವುದರಿಂದಾಗುವ ಪ್ರಯೋಜನಗಳಿವು

ಪ್ರಯಾಣದ ವೇಳೆ ಈ ಗ್ಯಾಜೆಟ್‌ಗಳು ಮುಂಭಾಗದಿಂದ ಬರುವ ಯಾವುದೇ ವಸ್ತುಗಳಿಂದ ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ. ವಿಂಡ್‌ಶೀಲ್ಡ್'ಗಳು ಹ್ಯಾಂಡಲ್‌ಬಾರ್‌ನಲ್ಲಿರುವ ಗ್ಯಾಜೆಟ್‌ಗಳನ್ನು ರಕ್ಷಿಸುತ್ತವೆ.

Most Read Articles

Kannada
English summary
Benefits of using windshield in bikes. Read in Kannada.
Story first published: Monday, July 26, 2021, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X