ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಕೊರೋನಾ ಸೋಂಕಿತನನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೃತಪಟ್ಟ ಬಳಿಕ ಮೃತದೇಹವನ್ನು ಚಿತಾಗಾರಕ್ಕೆ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲು ರೂ.60 ಸಾವಿರ ಬೇಡಿಕೆ ಇಟ್ಟ ಪ್ರಕರಣ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದಲ್ಲಿ ಅಮೃತಹಳ್ಳಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಅಮೃತಹಳ್ಳಿಯ ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ. ಏಪ್ರಿಲ್ 20 ರಂದು ಮತ್ತಿಕೆರೆ ನಿವಾಸಿ ಭವ್ಯಾ (29) ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ನಂತರ ತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಆ್ಯಂಬುಲೆನ್ಸ್ ಮೊರೆ ಹೋಗಿದ್ದರು.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಈ ವೇಳೆ ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ ಹಾಗೂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್​ ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಎಂಬುವರನ್ನು ಮೃತರ ಮಗಳಾದ ಭವ್ಯ ಸಂಪರ್ಕಿಸಿದ್ದರು.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಚಿತಾಗಾರಕ್ಕೆ ಸಾಗಿಸಲು ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಮಾಲೀಕ ರೂ.60 ಸಾವಿರ ಬೇಡಿಕೆ ಇಟ್ಟಿದ್ದಾನೆ. ಇಲ್ಲವಾದರೆ ರಸ್ತೆಯ ಮೇಲೆ ಮೃತದೇಹ ಬಿಟ್ಟು ಹೋಗುತ್ತೇವೆಂದು ಬೆದರಿಕೆ ಹಾಕಿದ್ದಾರೆ..

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಈ ವೇಳೆ ಭವ್ಯಾ ತಮ್ಮ ಬಳಿ ಇದೀಗ ಅಷ್ಟು ಹಣವಿಲ್ಲ. ಮಾಂಗಲ್ಯ ಸರ ಮಾಡಿ ಹಣ ನೀಡುತ್ತೇನೆ. ಈಗ ಮೃತದೇಹ ಸಾಗಿಸಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದೇನೆ. ಆದರೆ ಆ್ಯಂಬುಲೆನ್ಸ್ ಮಾಲೀಕ ಇದಕ್ಕೆ ನಿರಾಕರಿಸಿದ್ದಾನೆ.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಬಳಿಕ ಭವ್ಯಾ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಆ್ಯಂಬುಲೆನ್ಸ್ ಮಾಲೀಕ ರೂ.60 ಸಾವಿರಕ್ಕೆ ಮೃತದೇಹ ಸಾಗಿಸಲು ಒಪ್ಪಿದ್ದಾನೆ. ಬಳಿಕ ಭವ್ಯಾ ಅವರು ಹಣವನ್ನು ನೀಡಿ ಮೃತದೇಹವನ್ನು ಸಾಗಿಸಿದ್ದಾರೆ.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಈ ಕುರಿತು ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರವಾಗುತ್ತಿದ್ದಂತೆ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಅಮೃತಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್​ಡಿಎಂಎ) ಸೆಕ್ಷನ್ 54 ಅಡಿ ಎಫ್​ಐಆರ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಆ್ಯಂಬುಲೆನ್ಸ್ ಸಹ ವಶಪಡಿಸಿಕೊಂಡಿದ್ದಾರೆ.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಆರೋಪಿಗಳು ಇದೇ ರೀತಿ ಹಲವರಿಂದ ಹಣಕ್ಕೆ ಬೇಡಿಕೆ ಮಾಡಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಮಾಧ್ಯಮಕ್ಕೆ ಮಾಹಿತಿ ತಿಳಿಸಿದ್ದಾರೆ.

ಶವ ಸಾಗಿಸಲು ದುಬಾರಿ ಹಣಕ್ಕೆ ಒತ್ತಾಯಿಸಿದ್ದ ಆಂಬ್ಯುಲೆನ್ಸ್ ಮಾಲೀಕನ ಬಂಧನ

ಒಟ್ಟಿನಲ್ಲಿ ಈ ರೀತಿಯಲ್ಲಿ ಘಟನೆಗಳು ನಡೆದಾಗ ಕೊಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿ. ಕೊರೋನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗುತ್ತಿದಂತೆ ಹಲವರು ಇಂತಹ ಸಂಕಷ್ಟದ ಸಮಯದಲ್ಲಿಯು ಮಾನವೀಯತೆಯನ್ನು ಮೆರತು ಹಣ ಮಾಡಲು ಮುಂದಾಗಿರುವುದು ದುರಂತವೇ ಸರಿ.

Most Read Articles

Kannada
English summary
Ambulance Owner Held, Vehicle Seized For Demanding Rs 60,000 To Ferry Body. Read In Kannada.
Story first published: Friday, April 23, 2021, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X