smartwatch: ದೇಶಾದ್ಯಂತ ಸದ್ದು ಮಾಡಿದೆ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ ವಾಚ್!

ಬೆಂಗಳೂರು ನಗರವು ದಕ್ಷಣ ಭಾರತ ಮಾತ್ರವಲ್ಲ, ಇಡೀ ದೇಶವೂ ಅಲ್ಲ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿನ ವಾಸಿಗಳು ನಿತ್ಯ ಟೆಕ್ನಾಲಜಿಯನ್ನು ಹೆಚ್ಚಾಗಿ ಬಳಸುತ್ತರೆ, ಸಾಮಾನ್ಯ ಜನರು ಸಹ ತಂತ್ರಜ್ಞಾನವನ್ನು ಚೆನ್ನಾಗಿ ತಿಳಿದಿರುತ್ತಾರೆ. ಅನೇಕ ಜನರು ತಮ್ಮ 'ಪೀಕ್ ಬೆಂಗಳೂರು' ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಕೇವಲ ಬೆಂಗಳೂರು ಮಾತ್ರವಲ್ಲ ಎಲ್ಲಾ ಕಡೆಯು ವಿಚಿತ್ರ ಘಟನೆಗಳು ನಡೆದ್ರೆ ಸೋಷಿಯಲ್ ಮೀಡಿಯಾ ಮೂಲಕವೇ ಹೆಚ್ಚಾಗಿ ಶೇರ್ ಆಗುತ್ತದೆ. ಇದೀಗ ಯುವತಿಯೊಬ್ಬರು ತಮಗೆ ಎದುರಾದ ಅದ್ಬುತ ಸಂಗತಿಯನ್ನು ಟ್ವಿಟರ್‌ನಲ್ಲಿ (X) ಹಂಚಿಕೊಂಡಿದ್ದಾರೆ. ಬೆಂಗಳೂರು ಆಟೋ ಚಾಲಕರು ಟೆಕ್ನಾಲಜಿಯನ್ನು ಹೇಗೆಲ್ಲಾ ಬಳಸುತ್ತಿದ್ದಾರೆ ನೋಡಿ ಎಂದು ಹೇಳುತ್ತಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

bengaluru-auto-driver-smart-watch-qr-code-scanner

ವಿವರವಾಗಿ ಹೇಳೋದಾದ್ರೆ, ಆಟೋರಿಕ್ಷಾ ಚಾಲಕ ತನ್ನ smartwatch ಮೂಲಕ ಗ್ರಾಹಕರಿಂದ ಪಾವತಿಗಳನ್ನು ಹೇಗೆ ಸ್ವೀಕರಿಸುತ್ತಿದ್ದ ಎಂಬುದನ್ನು ತಿಳಿಸಲು ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಆಟೋ ಡ್ರೈವರ್‌ಗಳ ಯೂನಿಯನ್ ಅಭಿವೃದ್ಧಿಪಡಿಸಿದ ನಮ್ಮ ಯಾತ್ರಿ ಅಪ್ಲಿಕೇಶನ್ ಮೂಲಕ ಮಹಿಳೆ ಆಟೋವನ್ನು ಬುಕ್ ಮಾಡಿದ್ದರು. ಪ್ರಯಾಣದಲ್ಲಿದ್ದಾಗ ಆನ್‌ಲೈನ್ ಮೂಲಕ ಹಣ ಪಾವತಿಸುವುದಾಗಿ ಯುವತಿ ಹೇಳಿದ್ದಾರೆ.

ಇದಕ್ಕಾಗಿ ಕ್ಯೂಆರ್ ಕೋಡ್‌ ಅನ್ನು ಕೇಳಿದಾಗ, ಆಟೋ ಚಾಲಕ ತನ್ನ ಕೈಯನ್ನು ತಿರುಗಿಸಿ ತನ್ನ ಸ್ಮಾರ್ಟ್ ವಾಚ್ ಅನ್ನು ತೋರಿಸಿದ್ದಾನೆ. ಅಂದರೆ QR ಕೋಡ್ ಅನ್ನು ತನ್ನ ಸ್ಮಾರ್ಟ್ ವಾಚ್ ಸ್ಕ್ರೀನ್ ಸೇವರ್ ಆಗಿ ಮಾಡಿಕೊಂಡಿದ್ದಾನೆ. ಇದನ್ನು ಕಂಡು ಯುವತಿ ಬೆರಗಾಗಿದ್ದಾರೆ. ಆಟೋ ಚಾಲಕರು ಹೀಗೆ ಸ್ಮಾರ್ಟ್‌ ವಾಚ್ ಮೂಲಕ ಹಣ ಪಾವತಿ ಮಾಡಿಸಿಕೊಳ್ಳುವ ಕುರಿತು ವರದಿಯಾಗಿರುವುದು ಇದೆ ಮೊದಲು.

ಹಾಗಾಗಿಯೇ ಇದರ ಬಗ್ಗೆ ವಿವರಿಸುತ್ತಾ ಯುವತಿ ಟ್ವಿಟರ್‌ನಲ್ಲಿ "ಇಂದು ನಾನು @nammayatri ನಲ್ಲಿ ನಮ್ಮ ಟೋನಿ ಸ್ಟಾರ್ಕ್ (ಐರನ್ ಮ್ಯಾನ್ ಸಿನಿಮಾದಲ್ಲಿನ ಹೀರೋ ಪಾತ್ರ) ಅವರನ್ನು ಭೇಟಿಯಾದೆ. ನನ್ನ ಆಟೋ ಡ್ರೈವರ್‌ಗೆ ಕ್ಯೂಆರ್ ಕೋಡ್ ಕೇಳಿದೆ. ಆತ ತನ್ನ ಕೈಯನ್ನು ತಿರುಗಿಸಿ ಸ್ಮಾರ್ಟ್ ವಾಚ್ ತೋರಿಸಿದ. QR ಕೋಡ್ ತನ್ನ ಸ್ಮಾರ್ಟ್ ವಾಚ್ ಸ್ಕ್ರೀನ್‌ಸೇವರ್ ಆಗಿ ಉಳಿಸಿಕೊಂಡಿದ್ದಾನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಆಟೋ ಚಾಲಕನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಷನ್ ಆಗಿದೆ. ಈ ಕುರಿತ ಸುದ್ದಿ ದೇಶದಾದ್ಯಂತ ಸದ್ದು ಮಾಡುತ್ತಿದ್ದು, ರಾಷ್ಟ್ರಮಟ್ಟದ ಸುದ್ದಿ ಸಂಸ್ಥೆಗಳು ಈ ಬಗ್ಗೆ ವರದಿ ಮಾಡಿವೆ. ಇನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರವು 330K ವೀಕ್ಷಣೆಗಳನ್ನು ಗಳಿಸಿ ವೀಕ್ಷಕರನ್ನು ಬೆರಗುಗೊಳಿಸಿದೆ.

ಗದ್ದಲದ ನಗರವಾದ ಬೆಂಗಳೂರು ಹೊಸತನ ಮತ್ತು ಸೃಜನಶೀಲತೆಗೆ ಹೊಸದೇನಲ್ಲ. ಈ ಹಿಂದೆಯೂ ಸೋಷಿಯಲ್ ಮೀಡಿಯಾದಲ್ಲಿ ಹಲವು ಕಾರಣಗಳಿಗೆ ಗುರ್ತಿಸಿಕೊಂಡಿದೆ. ಇದು ತನ್ನ ಅಭಿವೃದ್ಧಿ ಹೊಂದುತ್ತಿರುವ ಆರಂಭಿಕ ಸಂಸ್ಕೃತಿ, ಐಟಿ ಉದ್ಯಮ, ಟ್ರಾಫಿಕ್, ಗಗನಕ್ಕೇರುತ್ತಿರುವ ಬಾಡಿಗೆಗಳಿಗೆ ಹೆಸರುವಾಸಿಯಾಗಿದೆ. ನಿತ್ಯ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರ್ತಿಸಿಕೊಳ್ಳುತ್ತದೆ.

ಆಟೋ ಚಾಲಕರ ಮೇಲೆ ಆರೋಪ: ಬೆಂಗಳೂರು ಆಟೋ ಚಾಲಕರ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸರಿಯಾಗಿ ಮೀಟರ್ ಬಳಸುವುದಿಲ್ಲ, ಮನಬಂದಂತೆ ಹಣಕ್ಕೆ ಬೇಡಿಕೆ ಇಡುತ್ತಾರೆ, ಕರೆದಲ್ಲಿ ಬರೋದಿಲ್ಲ ಹೀಗೆ ಹಲವಾರು ಆರೋಪಗಳು ಚಾಲಕರ ಮೇಲಿವೆ. ಆದ್ರೆ ಆಟೋ ಚಾಲಕರು, ಸರ್ಕಾರ ಉಚಿತ ಬಸ್‌ ಸೇವೆ ನೀಡಿದಾಗಿನಿಂದ ನಮಗೆ ಹೊಡೆತ ಬಿದ್ದಿದೆ ಎಂಬ ಕಾರಣ ನೀಡುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 16, 2023, 15:42 [IST]
English summary
Bengaluru auto driver smart watch qr code scanner
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+