ಅನಿಲ್ ಕುಂಬ್ಳೆಗೆ ತಟ್ಟಿದ ಬೆಂಗಳೂರು ಬಂದ್ ಬಿಸಿ: ಬಿಎಂಟಿಸಿ ಬಸ್​ ಹತ್ತಿ ಕುಂಬ್ಳೆ ಸರ್ಕಲ್ ಬಳಿ ಇಳಿದ್ರಾ?

ಸಾಲು ಸಾಲು ಬೇಡಿಕೆಗಳನ್ನ ಮುಂದಿಟ್ಟು ಈಡೇರಿಕೆಗೆ ಒತ್ತಾಯಿಸಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆಟೋ, ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಎಲ್ಲ ಖಾಸಗಿ ವಾಹನಗಳು ರಸ್ತೆಗಿಳಿಯದೆ ಪ್ರತಿಭಟನೆ ಬೆಂಬಲ್ ಸೂಚಿಸಿದೆ. ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರಿಗೂ ಬೆಂಗಳೂರು ಖಾಸಗಿ ಸಾರಿಗೆ ಚಾಲಕರ ಒಕ್ಕೂಟದ ಬಂದ್ ಬಿಸಿ ತಟ್ಟಿದೆ.

ಖಾಸಗಿ ವಾಹನಗಳು ಸಂಚಾರ ಸ್ಥಗಿತಗಗೊಂಡ ಹಿನ್ನೆಲೆ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದಾರೆ. ಬಸ್​ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಅನಿಲ್ ಕುಂಬ್ಳೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗ್ತಿದೆ. ಪೋಟೋ ಜೊತೆ ಇಂದು ಏರ್‌ಪೋರ್ಟ್‌ನಿಂದ ಮನೆಗೆ ಬಿಎಂಟಿಸಿ ಬಸ್​ನಲ್ಲಿ ತೆರಳಿದೆ ಎಂದು ಬರೆದುಕೊಂಡಿದ್ದಾರೆ.ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Anil Kumble

ಬಿಎಂಟಿಸಿ (BMTC) ವಾಯುವಜ್ರ ಬಸ್ ಏರಿ ಅವರು ಮನೆ ಕಡೆ ತೆರಳಿದ ಅನಿಲ್ ಕುಂಬ್ಳೆ ಅವರ ಸರಳತೆ ಕ್ರಿಕೆಟ್ ಫಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಬ್‌ಗಳು ಇಲ್ಲದ ಕಾರಣ ಬಹುತೇಕ ಪ್ರಯಾಣಿಕರು ಬಸ್‌ನತ್ತ ಮುಖ ಮಾಡಿದ್ದಾರೆ. ಕ್ಯಾಬ್‌ಗಳ ಬಂದ್ ಹಿನ್ನಲೆ ಯಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ವಾಯುವಜ್ರ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಅನಿಲ್ ಕುಂಬ್ಳೆ ಅವರು ಭಾರತದ 132 ಟೆಸ್ಟ್‌ ಆಡಿದ್ದಾರೆ.ಇದರಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು 271 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂಬ್ಳೆ 30.89 ರ ಸರಾಸರಿಯಲ್ಲಿ 337 ವಿಕೆಟ್ ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾಡಲ್ಲಿ ಅನಿಲ್ ಕುಂಬ್ಳೆ ಅವರಿಗೆ ನೀವು'ಕುಂಬ್ಳೆ ಸರ್ಕಲ್ ಬಳಿ ಬಸ್ ನಿಲ್ಲಿಸಿ ಎಂದು ಕಂಡಕ್ಟರ್‌ಗೆ ಹೇಗೆ ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ. ನನ್ನ ಸರ್ಕಲ್ ಹತ್ರ ನಿಲ್ಸಿ' ಅಂತಾ ಹೇಳ್ತೀರಾ ಎಂದು ಕೇಳಿದ್ದಾರೆ ಎಂದು ಟ್ರೋಲ್ ಮಾಡಿದ್ದ್ದಾರೆ.

ಇನ್ನು ಖಾಸಗಿ ಸಾರಿಗೆ ಸಂಘಟನೆಗಳೆಲ್ಲ ಇಂದು ಬೆಂಗಳೂರು ಬಂದ್​ಗೆ ಕರೆ ನೀಡಿದರಿಂದ ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆಗಳು ಬಂದ್ ಆಗಿದೆ. ಇನ್ನು ವಿಮಾನ ನಿಲ್ದಾಣದ ಹೊರ ಭಾಗದಲ್ಲಿರುವ ಓಲಾಪಿಕ್‌ ಅಪ್‌ ಪಾಯಿಂಟ್​ನಲ್ಲಿ ನಿಂತು ಪ್ರಯಾಣಿಕರು ಕಾರ್ ಬುಕ್​ ಮಾಡಲು ಪ್ರಯಾಣಿಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಟ್ಯಾಕ್ಸಿಗಳು ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಾಹನ ಸವಾರರು ವೈಟ್ ಬೋರ್ಡ್ ಕಾರುಗಳ‌ನ್ನ ರಸ್ತೆಗೆ ಇಳಿಸಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಬೆಂಗಳೂರು ಏರ್ಪೋರ್ಟ್​ನಿಂದ ಪ್ರಯಾಣಿಕರಿಗೆ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಕೆಲವರು ಬಿಎಂಟಿಸಿ ವೋಲ್ವೋ ಬಸ್​ಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದೀಗ ಖಾಸಗಿ ಸಾರಿಗೆ ಒಕ್ಕೂಟ ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12ರ ವರೆಗೆ ಬೆಂಗಳೂರು ಬಂದ್​​ಗೆ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಒಕ್ಕೂಟ ಬಂದ್​ ಹಿಂಪಡೆದಿದೆ

ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್​ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮನವಿ ಮಾಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಅನ್ನು​ ಹಿಂಪಡೆಯಲಾಗಿದೆ.

ಮಾಧ್ಯಮ ಜೊತೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಖಾಸಗಿ ಸಾರಿಗೆಯವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇವೆ. ನಾನು ನಿಮ್ಮ ಪರವಾಗಿಯೇ ಇದ್ದೇವೆಖಾಸಗಿ ಬಸ್​ ಮಾಲೀಕರ ಸಮಸ್ಯೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Monday, September 11, 2023, 16:30 [IST]
English summary
Bengaluru bandh anil kumble takes bmtc bus ride back home details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+