ಮತ್ತೆ 3 ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರುಗಳನ್ನು ಖರೀದಿಸಿದ ಬೆಂಗಳೂರಿನ ಬಾರ್ಬರ್!

ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ಮರ್ಸಿಡಿಸ್ ಮೇಬ್ಯಾಕ್ ಸೆಡಾನ್ ಹೊಂದಿರುವ ಭಾರತೀಯ ಬಾರ್ಬರ್ ನಿಮಗೆ ನೆನಪಿದೆಯೇ? ಅಂದಹಾಗೆ, ಅದೇ ಬಾರ್ಬರ್ (Barber) ಈಗ ಒಂದಲ್ಲ, ಎರಡಲ್ಲ, ಬರೊಬ್ಬರಿ ಮೂರು ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಸೆಡಾನ್ ಗಳನ್ನು ಖರೀದಿಸಿದ್ದಾನೆ. ಬಾರ್ಬರ್ ಆರಂಭಿಸಿದ ರಮೇಶ್ ಬಾಬು ಪ್ರಸ್ತುತ 200ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ.

ಬೆಂಗಳೂರಿನ (Bengaluru) ರಮೇಶ್ ಬಾಬು ಅವರು ರಮೇಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಎಂಬ ಕಂಪನಿಯನ್ನು ಹೊಂದಿದ್ದಾರೆ. ಈ ಕಂಪನಿ ಮೂಲಕ ಸೆಲೆಬ್ರಿಟಿಗಳಿಗೆ ವಾಹನಗಳನ್ನು ಬಾಡಿಗೆಗೆ ನೀಡುತ್ತಾರೆ. ರಮೇಶ್ ಬಾಬು ಅವರು ಮೂರು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಸೆಡಾನ್‌ಗಳ ಡೆಲಿವರಿ ತೆಗೆದುಕೊಳ್ಳುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರಗಳನ್ನು ಕರ್ನಾಟಕದ ಬೆಂಗಳೂರಿನ ಸುಂದರಂ ಮೋಟಾರ್ಸ್ ಹಂಚಿಕೊಂಡಿದೆ.

Bengaluru Barber

ಡೀಲರ್‌ಶಿಪ್ ಚಿತ್ರಗಳನ್ನು "ಈ ರೋಮಾಂಚಕ ಪ್ರಯಾಣಕ್ಕೆ ಸ್ವಾಗತ, ರಮೇಶ್ ಟೂರ್ಸ್ & ಟ್ರಾವೆಲ್ಸ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಚಿತ್ರಗಳಲ್ಲಿ ರಮೇಶ್ ಬಾಬು ಅವರಿಗೆ ಡೀಲರ್‌ಶಿಪ್ ಉದ್ಯೋಗಿಯೊಬ್ಬರು ಪುಷ್ಪಗುಚ್ಛವನ್ನು ಹಸ್ತಾಂತರಿಸುತ್ತಿರುವುದನ್ನು ನೋಡಬಹುದು. ಐಷಾರಾಮಿ ಮರ್ಸಿಡಿಸ್ ಬೆಂಝ್ ಈ ಕ್ಲಾಸ್ LWB ಸಾಟಿಯಿಲ್ಲದ ಐಷಾರಾಮಿ ಮತ್ತು ಉತ್ತಮ ಪರ್ಫಾಮೆನ್ಸ್ ಮಾಡೆಲ್ ಆಗಿದೆ.

ಈ ವೇಳೆ ಅವರ ಪತ್ನಿ ಮತ್ತು ವ್ಯಾಪಾರ ಪಾಲುದಾರರು ಜೊತೆಗಿದ್ದರು. ಚಿತ್ರಗಳಲ್ಲಿ ಕಂಡುಬರುವಂತೆ, ರಮೇಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ರಮೇಶ್ ಬಾಬು ಅವರು ಮೂರು ಒಂದೇ ರೀತಿಯ ಇ-ಕ್ಲಾಸ್ ಸೆಡಾನ್‌ಗಳನ್ನು ವಿತರಣೆ ಪಡೆದುಕೊಂಡಿದ್ದಾರೆ. ಎಲ್ಲಾ ಮೂರು ಕಾರುಗಳು ಒಂದೇ ಹೈಟೆಕ್ ಸಿಲ್ವರ್ ಮೆಟಾಲಿಕ್ ಬಣ್ಣವನ್ನು ಹೊಂದಿವೆ. ಮೂರು E-ಕ್ಲಾಸ್ LWB ಗಳು ಅದೇ ಬ್ಲ್ಯಾಕ್ ಲೆದರ್ ಒಳಭಾಗವನ್ನು ಪಡೆಯುತ್ತವೆ.

Bengaluru Barber

ರಮೇಶ್ ಬಾಬು ಆಯ್ಕೆ ಮಾಡಿದ ರೂಪಾಂತರಕ್ಕೆ ಸಂಬಂಧಿಸಿದಂತೆ, ಇದು E-ಕ್ಲಾಸ್ LWB 220d ಆಗಿದೆ. ಈ ನಿರ್ದಿಷ್ಟ ಮಾದರಿಯಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 192 bhp ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ.

ಈ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಸೆಡಾನ್ ರೇರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ. ಈ ಐಷಾರಾಮಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 72.8 ಲಕ್ಷವಾಗಿದೆ. ಇನ್ನು ರಮೇಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ 1 ಕಾರನ್ನು ಹೊಂದಿದ್ದಾರೆ. ಈ ಐಷಾರಾಮಿ ಕಾರನ್ನು 2011ರ ಫೆಬ್ರವರಿ ತಿಂಗಳಿನಲ್ಲಿ ಖರೀದಿಸಿದರು.

ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ 1 ಕ್ಲಾಸಿ ಶೇಡ್‌ನ ಫಿನಿಶಿಂಗ್ ಅನ್ನು ಹೊಂದಿದೆ. ಅವರು ಖರೀದಿರುವ ಸಮಯದಲ್ಲಿ ಅದರ ಬೆಲೆಯು 3 ಕೋಟಿ ರೂ. ಆಗಿದೆ. ಇದು ಟ್ವಿನ್-ಟರ್ಬೋಚಾರ್ಜ್ಡ್ ಆಗಿರುವ 6.6-ಲೀಟರ್ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು 562 bhp ಪವರ್ ಮತ್ತು 780 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 2, 2024, 13:19 [IST]
English summary
Bengaluru barber ramesh babu buys 3 new mercedes benz e class details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+