Bengaluru: ಓಲಾ, ಉಬರ್‌ಗೆ ಸವಾಲು.. ಕ್ಯಾಬ್ ಚಾಲಕನಿಂದ ಆ್ಯಪ್ ಶುರು

ದೇಶದ ಐಟಿ ಹಬ್ ಬೆಂಗಳೂರು (Bengaluru) ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ನಗರವು ವೇಗವಾಗಿ ಬೆಳೆಯುತ್ತಿದ್ದು, ಸಂಚಾರ ದಟ್ಟಣೆ ಸಮಸ್ಯೆಯೂ ಅಧಿಕಗೊಳ್ಳುತ್ತಿದ್ದು, ಸ್ಥಳೀಯ ಕ್ಯಾಬ್ ಚಾಲಕರಿಗೆ ದೊಡ್ಡ ಸವಾಲಾಗಿದೆ. ಇದು ಬೆಂಗಳೂರು ಕ್ಯಾಬ್ ಚಾಲಕನೊಬ್ಬನನ್ನು ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಲು ಪ್ರೇರಿಪಿಸಿದೆ.

ಲೋಕೇಶ್ (Lokesh) ಎಂಬ ಕ್ಯಾಬ್ ಚಾಲಕ ನ್ಯಾನೋ ಟ್ರಾವೆಲ್ಸ್ (Nano Travels) ಹೆಸರಿನ ಆ್ಯಪ್ ಆರಂಭಿಸಿದ್ದಾರೆ. ಈ ಮೂಲಕ ರೈಡ್ ಅಪ್ಲಿಕೇಶನ್‌ಗಳಾದ ಉಬರ್ (Uber) ಮತ್ತು ಓಲಾ (Ola) ಸಂಸ್ಥೆಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕ್ಯಾಬ್ ಚಾಲಕನ ಈ ಪ್ರಯತ್ನವನ್ನು ಹಲವಾರು ಜನರು ಶ್ಲಾಘಿಸಿದ್ದಾರೆ.

Bengaluru: ಓಲಾ, ಉಬರ್‌ಗೆ ಸವಾಲು.. ಕ್ಯಾಬ್ ಚಾಲಕನಿಂದ ಆ್ಯಪ್ ಪ್ರಾರಂಭ

ಈ ಬಗ್ಗೆ ದಿ ಬೆಂಗಳೂರು ಮ್ಯಾನ್ (The Bengaluru Man) ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, 'ಉಬರ್ ಕ್ಯಾಬ್ ಡ್ರೈವರ್ ಲೋಕೇಶ್ ಅವರು, ಉಬರ್ ಹಾಗೂ ಓಲಾಗೆ ಪ್ರಬಲ ಪೈಪೋಟಿ ನೀಡಲು ತಮ್ಮದೇ ಆದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದಾರೆ. ಅವರ ಈ ಆ್ಯಪ್, ಈಗಾಗಲೇ 600ಕ್ಕೂ ಹೆಚ್ಚು ಚಾಲಕರನ್ನು ಹೊಂದಿದೆ. ಅಲ್ಲದೆ, ಅವರು ಆಪಲ್‌ಗಾಗಿ ಐಒಎಸ್ ಆವೃತ್ತಿಯನ್ನು ಶುರು ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್, 51 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದ್ದು, 879 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಆಂಡ್ರಾಯ್ಡ್ ಆವೃತ್ತಿಯು ಜುಲೈನಿಂದಲೇ ಬಳಕೆದಾರರಿಗೆ ಲಭ್ಯವಿದೆ. ಕ್ಯಾಬ್ ಚಾಲಕನ ಸಾಹಸಕ್ಕೆ ನೆಟ್ಟಿಗರು ಪರ - ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು 'ಅವರು ಅಪ್ಲಿಕೇಶನ್ ಮಾರಾಟ ಮಾಡಿ ಹೋಗಬಹುದು. ಇದನ್ನು ಓಲಾ, ಉಬರ್ ನಿರ್ವಹಣೆ ಮಾಡಬಹುದು' ಎಂದು ಹೇಳಿದ್ದಾರೆ.

ಮತ್ತೊಬ್ಬರು, 'ಖಂಡಿತವಾಗಿಯೂ ನಾನು ಅವರನ್ನು ಭೇಟಿಯಾಗಲು ಬಯಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಗುಡ್ ನ್ಯೂಸ್... ಅವರು ಇತರೆ ನಗರಗಳಲ್ಲಿ ಈ ಅಪ್ಲಿಕೇಶನ್‌ ಪ್ರಾರಂಭಿಸಲು ಯೋಜಿಸುತ್ತಿದ್ದಾರೆಯೇ..' ಎಂದು ಕೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು, 'ಇದು ನಿಜವಾದ ಉದ್ಯಮಶೀಲತೆ ಭಾಗವಾಗಿದೆ. ಚೆನ್ನಾಗಿ ಅಭಿವೃದ್ದಿಯೊಂದಲೆಂದು ಆಶಿಸುತ್ತಾನೆ' ಎಂದಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಯಾತ್ರಿ (Namma Yatri) ಮೊಬೈಲ್ ಆ್ಯಪ್‌ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆಟೋ ಚಾಲಕರಿಗೆ ನೆರವಾಗುವುದಾಗಿ ಭರವಸೆ ನೀಡಿದ್ದ ಈ ಆ್ಯಪ್‌, ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಸೇವೆ ಒದಗಿಸುವ ಉದ್ದೇಶವನ್ನು ಹೊಂದಿತ್ತು. ಇತ್ತಿಚೆಗೆ, ನಾನಾ ಕಾರಣಗಳಿಗೆ ಒಎನ್‌ಡಿಸಿ ಬೆಂಬಲಿತ ಆಟೋ ರಿಕ್ಷಾ ಚಾಲಕರ ಸಂಘ ಈ ಅಪ್ಲಿಕೇಶನ್‌ನಿಂದ ಹೊರ ಬಂದಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.

ಈ ವರ್ಷದ ಫೆಬ್ರವರಿಯಲ್ಲಿ 2022 ರಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿಗಳಿಸಿರುವ ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಈ ವರದಿ ಪ್ರಕಾರ, ಬೆಂಗಳೂರಿನ ಹೃದಯ ಭಾಗದಲ್ಲಿ ಪ್ರತಿ 10 ಕಿಮೀ ಪ್ರಯಾಣಕ್ಕೆ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 27, 2023, 17:05 [IST]
English summary
Bengaluru cab driver launched his own app challenge ola uber
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+