Bengaluru: ಸ್ಕೂಟರ್‌ನ ಫುಟ್‌ ರೆಸ್ಟ್‌ ಮೇಲೆ ನಿಂತುಕೊಂಡು ಮಗು ಪ್ರಯಾಣ, ದಂಪತಿ ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರು ಸ್ಕೂಟರ್ ಅಥವಾ ಬೈಕ್‌ಗಳನ್ನು ಬಳಕೆ ಮಾಡುತ್ತಾರೆ. ರಸ್ತೆಯಲ್ಲಿ ಓಡಾಟ ನಡೆಸುವಾಗ ಎಷ್ಟೋ ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವುದನ್ನು ಕೂಡ ನೋಡಿದ್ದೇವೆ. ಸದ್ಯ, ಚಲಿಸುತ್ತಿರುವ ಸ್ಕೂಟರ್‌ನ ಫುಟ್‌ ರೆಸ್ಟ್‌ ಮೇಲೆ ಮಗುವನ್ನು ನಿಲ್ಲಿಸಿಕೊಂಡು ದಂಪತಿ ತೆರಳುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ವೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯು ಹಿಂಬದಿಯ ಆಸನದಲ್ಲಿ ಕುಳಿತುಕೊಂಡು ಮಗುವನ್ನು ಫುಟ್‌ ರೆಸ್ಟ್‌ ಮೇಲೆ ನಿಲ್ಲಿಸಿ, ಕೈಯಲ್ಲಿ ಹಿಡಿದುಕೊಂಡು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದಾರೆ. ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

Bengaluru Child Standing On The Footrest Of A Moving Scooter Netizens Anger Against The Couple

ದಂಪತಿಗಳ ಹುಚ್ಚಾಟಕ್ಕೆ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ನನ್ನ ಬಳಿ ಪದಗಳಿಲ್ಲ.. 2022ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ಗಂಟೆಗೆ 19 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು, 1,68,491 ಸಾವನ್ನಪ್ಪಿದ್ದು, 4,43,366 ಜನರು ಗಾಯಗೊಂಡಿದ್ದಾರೆ. ನಾವು ಇನ್ನೂ ಈ ರೀತಿಯ ಕೆಲಸವನ್ನು ರಸ್ತೆಗಳಲ್ಲಿ ಮಾಡುತ್ತೇವೆ' ಎಂದು ಹೇಳಿದ್ದಾರೆ.

ಮತ್ತೊಬ್ಬ ನೆಟ್ಟಿಗ, 'ಪೊಲೀಸ್ ದಂಡ ಹಾಕೋದು ಆಮೇಲೆ ಇರಲಿ. ಅಸುರಕ್ಷಿತ ಚಾಲನೆ ನಿಲ್ಲಿಸುವಂತೆ ಅಲ್ಲೇ ಹೇಳಬಹುದಿತ್ತಲ್ಲವೇ? ಏನಾದರೂ ಹೆಚ್ಚುಕಮ್ಮಿ ಆಗಿ ಅಪಘಾತವಾಗಿದ್ದರೆ ಏನು ಗತಿಯಾಗ್ತಿತ್ತು' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, 'ಅವರಿಗೆ ಹುಡುಗನ ಬೆಲೆ ಗೊತ್ತಿಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಆ ಮಹಿಳೆಗೆ ಕಠಿಣ ಶಿಕ್ಷೆ ಅಗತ್ಯವಿದೆ' ಎಂದು ಹೇಳಿದ್ದಾರೆ.

Bengaluru Child Standing On The Footrest Of A Moving Scooter Netizens Anger Against The Couple

ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, 'ವಿದ್ಯಾವಂತರಿಗೆ ಏನು ಹೇಳಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಜನರು ಏಕೆ ತುಂಬಾ ಅಳುತ್ತಿದ್ದಾರೆ?. ಇದು ನನಗೆ ಸುರಕ್ಷಿತವಾಗಿ ಕಾಣುತ್ತದೆ' ಎಂದು ಹೇಳಿದ್ದಾರೆ. ಈ ಘಟನೆ ಬೆಂಗಳೂರು ಸಂಚಾರಿ ಪೊಲೀಸರ ಗಮನಕ್ಕೂ ಬಂದಿದ್ದು, 'ಅಗತ್ಯವಿರುವ ಎಲ್ಲ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಪಾಲಿಸಬೇಕಾದ ನಿಯಮಗಳಿವು: ರಸ್ತೆಯಲ್ಲಿ ವಾಹನಗಳನ್ನು ಓಡಿಸುವಾಗ ಅತಿ ವೇಗದ ಚಾಲನೆಯನ್ನು ಮಾಡಬೇಡಿ. ಇದರಿಂದ ಸಮಯವನ್ನು ಉಳಿಸಬಹುದು ಆದರೆ, ಅಪಘಾತ ಸಂಭವಿಸುವ ಅವಕಾಶಗಳು ಹೆಚ್ಚಿರುತ್ತವೆ. ಜಿಬ್ರಾ ಕ್ರಾಸ್, ಸ್ಪೀಡ್ ಬ್ರೇಕರ್ ಇದ್ದಾಗ ವಾಹನದ ವೇಗವನ್ನು ಹತೋಟಿಗೆ ತನ್ನಿ. ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನಗಳನ್ನು ನಿಲ್ಲಿಸಿರಿ, ಯಾವುದೇ ಕಾರಣಕ್ಕೂ ಅದನ್ನು ಜಂಪ್ ಮಾಡದಿರಿ.

ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಿ. ಕಾರುಗಳನ್ನು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳುವುದನ್ನು ಮರೆಯುದಿರಿ. ಮದ್ಯಪಾನ ಮಾಡಿ ಎಂದಿಗೂ ವಾಹನಗಳಲ್ಲಿ ಓಡಿಸಬೇಡಿ. ಫೋನ್ ನಲ್ಲಿ ಮಾತನಾಡಿಕೊಂಡು ಬೈಕ್ ಅಥವಾ ಕಾರುಗಳನ್ನು ಚಲಾಯಿಸಬೇಡಿ. ಇದರಿಂದ ರಸ್ತೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 17, 2024, 13:18 [IST]
English summary
Bengaluru child standing footrest moving scooter netizens anger against the couple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+