Vande Bharat Express: ಬೆಂಗಳೂರಿನಿಂದ ಈ ನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್, ಹತ್ತಾರು ಪ್ರವಾಸಿ ತಾಣಗಳು ಸಮೀಪ!

ದೇಶದ ಪ್ರೀಮಿಯಂ ಸೆಮಿ - ಹೈಸ್ವೀಡ್ ರೈಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಖ್ಯಾತಿಗಳಿಸಿದೆ. ಕೆಲವೇ ದಿನಗಳ ಹಿಂದೆ, ಕೊಯಮತ್ತೂರು (Coimbatore) - ಬೆಂಗಳೂರು ಕಂಟೋನ್ಮೆಂಟ್ (Bengaluru Cantonment) ನಡುವೆ 39ನೇ 'ವಂದೇ ಭಾರತ್' ಕಾರ್ಯಚರಣೆಯನ್ನು ಆರಂಭಿಸಿತ್ತು.

ಡಿ.30ರಂದು ಅಯೋಧ್ಯೆ ಧಾಮ್ (Ayodhya Dham) ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ವರ್ಚುವಲ್ ಮೂಲಕ ಕೊಯಮತ್ತೂರು - ಬೆಂಗಳೂರು ಸೇರಿದಂತೆ 6 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಚಾಲನೆ ನೀಡಿದ್ದರು. ಈ ರೈಲುಗಳು, ವಿಮಾನದಂತಹ ಸೌಕರ್ಯವನ್ನು ಹೊಂದಿದ್ದು, ನಿರ್ದಿಷ್ಟ ಗಮ್ಯ ಸ್ಥಾನಕ್ಕೆ ಪ್ರಯಾಣಿಕರನ್ನು ಕಡಿಮೆ ಸಮಯದಲ್ಲಿಯೇ ತಲುಪಿಸುತ್ತದೆ.

Vande Bharat Express

ಬೆಂಗಳೂರು - ಕೊಯಮತ್ತೂರು ನಡುವೆ ಸಂಚರಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ದಕ್ಷಿಣ ರೈಲ್ವೆ (Southern Railway) ನಿರ್ವಹಿಸಲಾಗಿದೆ. ಇದು ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ನಾಲ್ಕನೇ, ಕರ್ನಾಟಕ - ತಮಿಳುನಾಡು ಮಧ್ಯೆ ಓಡಾಟ ನಡೆಸುವ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದೆ.

ಕೊಯಮತ್ತೂರು - ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುಪ್ಪೂರು, ಈರೋಡ್, ಸೇಲಂ, ಧರ್ಮಪುರಿ ಹಾಗೂ ಹೊಸೂರು ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಇವೆರೆಡು ನಗರಗಳ ನಡುವೆ 375 ಕಿಲೋಮೀಟರ್ ದೂರವಿದೆ. ಸರಿ ಸುಮಾರು 6 ಗಂಟೆ 30 ನಿಮಿಷಗಳಲ್ಲಿ ಈ ಅಂತರವನ್ನು ಕ್ರಮಿಸುತ್ತದೆ. ವಾರದಲ್ಲಿ 6 ದಿನಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸಲಿದೆ.

Vande Bharat Express

ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭಿಸುವ ಈ ರೈಲು, 5.36ಕ್ಕೆ ತಿರುಪ್ಪೂರು, 6.17ಕ್ಕೆ ಈರೋಡ್, 7.12ಕ್ಕೆ ಸೇಲಂ, 8.18ಕ್ಕೆ ಧರ್ಮಪುರಿ, 9.48ಕ್ಕೆ ಹೊಸೂರು ಹಾಗೂ 11.30ರ ಸುಮಾರಿಗೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬರಲಿದೆ. ಬೆಂಗಳೂರಿನಿಂದ 1.40ಕ್ಕೆ ಹೊರಡುವ ರೈಲು, ಮಾರ್ಗ ಮಧ್ಯೆ ವಿವಿಧ ನಿಲ್ದಾಣದಲ್ಲಿ ನಿಲುಗಡೆಯಾಗಿ ರಾತ್ರಿ 8 ಗಂಟೆ ಸುಮಾರಿಗೆ ಕೊಯಮತ್ತೂರನ್ನು ತಲುಪುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ವೇಗದ ರೈಲು ಎಂದು ಹೆಸರುವಾಸಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಇದರ ವೇಗವನ್ನು ಗಂಟೆಗೆ 130 ಕಿ.ಮೀಗೆ ಸೀಮಿತಗೊಳಿಲಾಗಿದೆ. ಈ ರೈಲು ಅತ್ಯಾಧುನಿಕ ಸೌಕರ್ಯವನ್ನು ಹೊಂದಿದ್ದು, ಆರಾಮದಾಯಕ ಸೀಟುಗಳು, ಸಂಪೂರ್ಣ ಹವಾ ನಿಯಂತ್ರಿತ (ಎಸಿ) ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಪಡೆದಿದೆ.

ಕೊಯಮತ್ತೂರು - ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮರುಡಮಲೈ ದೇಗುಲ, ವಿಒಸಿ ಪಾರ್ಕ್ & ಮೃಗಾಲಯ, ಧ್ಯಾನಲಿಂಗ ದೇವಾಲಯ, ಸಿರುವಾಣಿ ಜಲಪಾತ, ಕೋವೈ ಕುಟ್ರಾಲಂ ಜಲಪಾತ, ಗ್ಯಾಸ್ ಫಾರೆಸ್ಟ್ ಮ್ಯೂಸಿಯಂ ಸೇರಿದಂತೆ ಕೊಯಮತ್ತೂರು ಸಮೀಪವಿರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 16, 2024, 15:28 [IST]
English summary
Bengaluru coimbatore vande bharat express 6 hours journey visit many tourist places
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+