5 ಕೋಟಿ ಉಡೀಸ್: ಇಂದೆಂಥಾ ಮೋಸ ಸ್ವಾಮಿ: ಆರೋಪಿ ಸಿಕ್ಕಿಬಿದ್ದ, ಆದ್ರೆ ದೂರು ಕೊಟ್ಟವನೇ ಸ್ಪಂದಿಸುತ್ತಿಲ್ಲ!
ಬೆಂಗಳೂರಿನ ಡುಕಾಟಿ ಶೋರೂಂನ ಜನರಲ್ ಮ್ಯಾನೇಜರ್ ಸಿ.ಎನ್.ಮಹೇಶ್ ನೀಡಿದ ದೂರಿನ ಆಧಾರದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಈ ಪ್ರಕರಣದಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಶೋರೂಂ ಪ್ರಮುಖರ ಕೈವಾಡ ಇರುವುದನ್ನು ಶಂಕಿಸಲಾಗಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬೀಳಬೇಕಿದೆ.
ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಕುಕಟ್‌ಪಲ್ಲಿ ಮೂಲದ ರಾಕೇಶ್ ಬಂಧಿತ ಆರೋಪಿ. ಈತ ತನ್ನ ಅಧಿಕಾರಾವಧಿಯಲ್ಲಿ ಕಂಪನಿಗೆ ತಿಳಿಯದಂತೆ ಸುಮಾರು 21 ಬೈಕ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪವಿದೆ. ಬರೋಬ್ಬರಿ 5.2 ಕೋಟಿ ರೂ. ಮೌಲ್ಯದ ಮೋಟಾರ್ ಸೈಕಲ್‌ಗಳನ್ನು ಖರೀದಿಸಲು ಹಣ ನೀಡಿದ ಗ್ರಾಹಕರಿಗೆ ಹಾಗೂ ಕಂಪನಿಗೆ ಈತ ವಂಚಿಸಿದ್ದಾನೆ.

ಸಿಕ್ಕಿಬಿದ್ದಿದ್ದು ಹೇಗೆ, ಶೋರೂಂ ಪಾತ್ರವಿದೆಯೇ?: ಪೊಲೀಸ್ ದೂರಿನ ಪ್ರಕಾರ, ಆರೋಪಿ ರಾಕೇಶ್ ಖರೀದಿದಾರರಿಂದ ಹಣವನ್ನು ಸಂಗ್ರಹಿಸಿ ಅದರಲ್ಲಿ ಒಂದು ಭಾಗವನ್ನು ಮಾತ್ರ ಅನುಮಾನ ಬಾರದಿರಲು ಕಂಪನಿಯ ಖಾತೆಗೆ ಜಮಾ ಮಾಡಿದ್ದ. ಉಳಿದ ಹಣವನ್ನು ಕಚೇರಿ ಸ್ಟಾಫ್ ಒಬ್ಬರ ಹೆಸರಿನಲ್ಲಿ ನೋಂದಾಯಿಸಲಾದ ಖಾತೆ ಸೇರಿದಂತೆ ಅನೇಕ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದ.
ಮತ್ತೊಂದೆಡೆ ಗ್ರಾಹಕರು ತಮ್ಮ ಬೈಕ್‌ಗಳನ್ನು ಆರ್‌ಟಿಓಗೆ ನೋಂದಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಲು ಕಂಪನಿಗೆ ಭೇಟಿ ನೀಡಿದ ನಂತರವೇ ವಿಷಯ ಬೆಳಕಿಗೆ ಬಂದಿದೆ. ಆದ್ರೆ ಇಲ್ಲಿ ರಾಕೇಶ್ ಒಬ್ಬನೇ ಇಷ್ಟೆಲ್ಲಾ ಹಗರಣ ಮಾಡಲು ಸಾಧ್ಯವಿಲ್ಲ, ಇಷ್ಟು ದೊಡ್ಡ ವಂಚನೆ ನಡೆದಿರುವುದು ಶೋರೂಂ ಗಮನಕ್ಕೆ ಬಾರದಿರುವುದು ನಂಬಲಸಾಧ್ಯವಾಗಿದೆ. ಹಾಗಾಗಿ ಶೋರೂಂನ ಇತರ ಅಧಿಕಾರಿಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಏಕೆಂದರೆ ಯಾವುದೇ ಶೋರೂಂಗಳಾಗಲಿ ಬೈಕ್‌ಗಳನ್ನು ಸ್ವೀಕರಿಸಲು ಮತ್ತು ಮಾರಾಟ ಮಾಡಲು ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಡೆಲಿವರಿ ಟಿಪ್ಪಣಿಗಳು, ಆರ್‌ಟಿಒಗೆ ಕಳುಹಿಸಲಾದ ವಿವರಗಳು ಮತ್ತು ಲೆಕ್ಕಪರಿಶೋಧನೆಗಳ ಸಂಪೂರ್ಣ ವಿವರಗಳು ಇರಬೇಕು. ಹಾಗಾಗಿ ಈ ಹಗರಣದಲ್ಲಿ ಶೋರೂಂ ಒಳಗಿನವರು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹಾಗೆಯೇ ಕಂಪನಿಯು ಮಾರಾಟದ ನಿರ್ದಿಷ್ಟ ಪ್ರೋಟೋಕಾಲ್ ಅನ್ನು ಸ್ವೀಕರಿಸಿದ ಬೈಕ್‌ಗಳ ದಾಸ್ತಾನು, ಮಾರಾಟ ಮತ್ತು ಡೆಲಿವರಿ ಇನ್‌ವಾಯ್ಸ್ ವಿವರಗಳೊಂದಿಗೆ ಪೊಲೀಸರು ಇನ್‌ವಾಯ್ಸ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ. ಆದರೆ ದೂರು ದಾಖಲಿಸಿರುವ ಜನರಲ್ ಮ್ಯಾನೇಜರ್ ಮುಖೇಶ್, ಸದ್ಯಕ್ಕೆ ತನಿಖೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

21 ಬೈಕ್ ಮಾರಾಟ ಮಾಡಿ ರಾಜೀನಾಮೆ: ರಾಕೇಶ್ ಜುಲೈ 2019 ಮತ್ತು ಈ ವರ್ಷದ ಸೆಪ್ಟೆಂಬರ್ ನಡುವೆ ಸುಮಾರು 21 ಬೈಕ್‌ಗಳನ್ನು ಮಾರಾಟ ಮಾಡಿದ್ದಾನೆ. ಒಟ್ಟು ಬೈಕ್‌ಗಳ ಮೌಲ್ಯ 5.2 ಕೋಟಿ ರೂ. ಆಗಿದ್ದು, ಐದು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿ ಅಕ್ಟೋಬರ್ 20 ರಂದು ರಾಜೀನಾಮೆ ನೀಡಿದ್ದ ಎಂದು ತಿಳಿದುಬಂದಿದೆ.
ವಂಚನೆಯ ನಂತರದ ಲೆಕ್ಕಪರಿಶೋಧನೆಯ ಸಮಯದಲ್ಲಿ, ಕಂಪನಿಯು ಒಂಬತ್ತು ಡುಕಾಟಿ ಪಾನಿಗೇಲ್, ನಾಲ್ಕು ಡಯಾವೆಲ್, ಮೂರು ಮಲ್ಟಿಸ್ಟ್ರಾಡಾ, ಎರಡು ಮಾನ್‌ಸ್ಟರ್, ಸ್ಕ್ರ್ಯಾಂಬ್ಲರ್, ಡೆಸರ್ಟ್‌ಎಕ್ಸ್ ಮತ್ತು ಸ್ಟ್ರೀಟ್‌ಫೈಟರ್ ವಿ4 ಮಾರಾಟವಾಗಿದೆ ಎಂದು ಕಂಡುಹಿಡಿದಿದೆ. ಆದರೆ ದಾಖಲೆಗಳಲ್ಲಿ ಮಾತ್ರ ತೋರಿಸಲಾಗಿಲ್ಲ. ಈ ಎಲ್ಲಾ ಬೈಕ್‌ಗಳ ಬೆಲೆಯು 10 ಲಕ್ಷದಿಂದ ಪ್ರಾರಂಭವಾಗಿ 40 ಲಕ್ಷದವರೆಗೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications