Bengaluru Longest Flyover: ಬೆಂಗಳೂರಿನಲ್ಲಿ ಅತಿ ಉದ್ದದ 6 ಪಥದ ಮೇಲ್ಸೇತುವೆ ನಿರ್ಮಾಣ, ಎಲ್ಲಿಂದ ಎಲ್ಲಿಗೆ?

ಬೆಂಗಳೂರು (Bengaluru) ನಗರದ ಹೃದಯ ಭಾಗದ ರಸ್ತೆಗಳಲ್ಲಿ ಪೀಕ್ ಅವರ್‌ನಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ ಪ್ರತಿನಿತ್ಯ ವಾಹನ ಸವಾರರು ಪರದಾಡುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India - NHAI) ಮುಂದಾಗಿದೆ.

ಬೆಂಗಳೂರಿನ ಹಳೆಯ ಮದ್ರಾಸ್ ರಸ್ತೆಯಲ್ಲಿ (Old Madras Road) ಅತಿ ಉದ್ದದ ಮೇಲ್ಸೇತುವೆ (Flyover) ನಿರ್ಮಾಣಕ್ಕೆ ಎನ್‌ಎಚ್‌ಎಐ ತಯಾರಿ ನಡೆಸಿದೆ. ಪೂರ್ವ ಬೆಂಗಳೂರಿನ ಭಾಗವಾಗಿರುವ ಹಳೆಯ ಮದ್ರಾಸ್ ರಸ್ತೆ ಸುತ್ತಲು ಟೆಕ್ ಕಂಪನಿಗಳಿದ್ದು, ಟಿಸಿ ಪಾಳ್ಯ ಮತ್ತು ಬಟ್ಟರಹಳ್ಳಿ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾಗುತ್ತಿರುತ್ತದೆ.

Bengaluru Longest Flyover: ಬೆಂಗಳೂರಿನಲ್ಲಿ ಅತಿ ಉದ್ದದ 6 ಪಥದ ಮೇಲ್ಸೇತುವೆ ನಿರ್ಮಾಣ, ಎಲ್ಲಿಂದ ಎಲ್ಲಿಗೆ?

ಈ ಹಳೆಯ ಮದ್ರಾಸ್ ರಸ್ತೆ ಬೆಂಗಳೂರಿನಲ್ಲಿರುವ ಏಕೈಕ ರಾಷ್ಟ್ರೀಯ ಹೆದ್ದಾರಿಯಾಗಿದೆ. ಆದರೆ, ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಅಗಲವಿಲ್ಲ. ಫ್ಲೈಓವರ್‌ ಹಾಗೂ ಅಂಡರ್‌ಪಾಸ್‌ಗಳನ್ನು ಹೊಂದಿಲ್ಲ. ಈಗ, ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಎನ್‌ಎಚ್‌ಎಐ, ಕೆಆರ್ ಪುರಂ ಪೊಲೀಸ್ ಠಾಣೆ ಸಮೀಪದಿಂದ ಪ್ರಾರಂಭವಾಗಿ ಕೊಳತ್ತೂರು ಜಂಕ್ಷನ್‌ವರೆಗೆ ಸುಮಾರು 15 ಕಿಮೀ ಉದ್ದದ ಮೇಲ್ಸೇತುವೆ ನಿರ್ಮಿಸಲು ಯೋಜಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಬೆಂಗಳೂರು) ಯೋಜನಾ ನಿರ್ದೇಶಕ (Project Director) ಕೆ.ಬಿ.ಜಯಕುಮಾರ್ ಅವರು, 'ಈ ಮೇಲ್ಸೇತುವೆ, ಹಳೆಯ ಮದ್ರಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ನಿರ್ಮಾಣ ಹಂತದಲ್ಲಿರುವ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇಗೆ (Bengaluru - Chennai expressway) ಪ್ರಯಾಣಿಕರು ಬೇಗ ತಲುಪಲು ಅನುವು ಮಾಡಿಕೊಡುತ್ತದೆ' ಎಂದು ಹೇಳಿದ್ದಾರೆ.

ಹಳೆ ಮದ್ರಾಸ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಬೇರೆ ಯಾವ ಮಾರ್ಗವು ಇಲ್ಲ. ಈ ಮೇಲ್ಸೇತುವೆ, ಟಿಸಿ ಪಾಳ್ಯದಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ಫ್ಲೈಓವರ್‌ 6 ಪಥದ ರಸ್ತೆಯನ್ನು ಹೊಂದಿರಲಿದ್ದು, ನಗರದಲ್ಲಿರುವ ಅತಿ ಉದ್ದದ ಎಲಿವೇಟೆಡ್ ರಸ್ತೆಗಿಂತ ಹೆಚ್ಚು ಉದ್ದವಿರಲಿದೆ. ಸದ್ಯ, ಹೊಸೂರು ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ವೇ (9.98 ಕಿಮೀ) ಉದ್ದವಿದೆ.

ಕೆಆರ್ ಪುರಂ ಕೇಬಲ್ ಸೇತುವೆಯಿಂದ (KR Puram Cable Bridge) ಮೇಲ್ಸೇತುವೆ ಪ್ರಾರಂಭವಾಗಬೇಕೆಂದು ಹಲವು ವಾಹನ ಸವಾರರು ಒತ್ತಾಯಿಸಿದ್ದಾರೆ. ಅದು ಎನ್‌ಎಚ್‌ಎಐ ವ್ಯಾಪ್ತಿಯಲ್ಲಿ ಬರದ ಕಾರಣ, ಅಲ್ಲಿಂದ ಮೇಲ್ಸೇತುವೆ ನಿರ್ಮಾಣ ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಬಲ್ ಸೇತುವೆ ರೈಲು ಮಾರ್ಗದ ಮೇಲೆ ಹಾದು ಹೋಗಲಿದ್ದು, ಉದ್ದೇಶಿತ ಫ್ಲೈಓವರ್ ಪ್ರಾರಂಭವಾಗುವ ಸ್ಥಳಕ್ಕಿಂತ 2 ಕಿಮೀ ಮೊದಲೇ ಸಿಗುತ್ತದೆ.

ಈ ಮೇಲ್ಸೇತುವೆ ನಿರ್ಮಾಣಕ್ಕೆ ರೂ.1,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್ ನಿರ್ಮಾಣದ ಬಗ್ಗೆ ಯೋಜನಾ ವರದಿಯನ್ನು (ಡಿಆರ್‌ಪಿ) ಸಿದ್ಧಪಡಿಸುತ್ತಿದ್ದು, ಇದು ಮಾರ್ಚ್ 2024ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇಲ್ಸೇತುವೆ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್, 'ಈ ಫ್ಲೈಓವರ್‌ ನಿರ್ಮಾಣದಿಂದ ಬೆಂಗಳೂರು ಪೂರ್ವದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ಹೇಳಿದ್ದಾರೆ.

ಇನ್ನು, ಒಂದು ವರ್ಷದೊಳಗೆ ಈ ಫ್ಲೈಓವರ್‌ ನಿರ್ಮಾಣ ಕಾಮಗಾರಿ ಆರಂಭವಾಗುವ ನೀರಿಕ್ಷೆಯಿದ್ದು, ಮೇಲ್ಸೇತುವೆ ಲೋಕಾರ್ಪಣೆಗೊಂಡ ಮೇಲೆ ಹಳೆಯ ಮದ್ರಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು - ಚೆನ್ನೈ (Bengaluru - Chennai) ನಡುವೆ ಪ್ರಯಾಣಿಸುವವರಿಗೂ ಹೆಚ್ಚಿನ ಸಹಾಯವಾಗಲಿದೆ.

Source: Deccan herald

Article Published On: Thursday, November 23, 2023, 12:17 [IST]
English summary
Bengaluru get 15 km longest flyover old madras road details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+