Bengaluru: ದುಬಾರಿ ಮದುವೆಗೆ ಬಾಡಿಗೆ ಸ್ಕೂಟರ್‌ಗಳಲ್ಲಿ ಬಂದ ಗಂಡಿನ ಕಡೆಯವರು.. ಹೀಗೋ ಸಾಧ್ಯ!

ಭಾರತದ ಭೌಗೋಳಿಕತೆ ತಕ್ಕಂತೆ ವಿವಾಹಗಳು ಸಾಕಷ್ಟು ವ್ಯತ್ಯಾಸವನ್ನು ಹೊಂದಿರುತ್ತವೆ. ಮದುವೆಗಳಲ್ಲಿ ಅದ್ದೂರಿತನಕ್ಕೆ ಯಾವುದೇ ರೀತಿಯಲ್ಲೂ ಕೊರತೆಯಿರುವುದಿಲ್ಲ. ಜೋರು ಸಂಗೀತ, ನೃತ್ಯ ಹಾಗೂ ಬಗೆ - ಬಗೆಯ ರುಚಿಯಾದ ಖಾದ್ಯಗಳು ಎಲ್ಲರನ್ನು ಆಕರ್ಷಿಸುತ್ತವೆ. ಆದರೆ, ಕೆಲವರೂ ತಮ್ಮ ವಿವಾಹ ಸಮಾರಂಭ ಬೇರೆಯವರಿಗಿಂತ ಭಿನ್ನವಾಗಿರಬೇಕೆಂದು ಬಯಸುತ್ತಾರೆ.

ಇತ್ತೀಚೆಗೆ, ಬೆಂಗಳೂರಿನಲ್ಲಿ (Bengaluru) ನಡೆದ ಮದುವೆ ದಿಬ್ಬಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ಗಂಡನ್ನು ಕಲ್ಯಾಣ ಮಂಟಪಕ್ಕೆ ಕುದುರೆ ಅಥವಾ ಕಾರಿನಲ್ಲಿ ಕರೆತರುವುದು ವಾಡಿಕೆ. ಆದಾಗ್ಯೂ ಇಲ್ಲೊಂದು ಕುಟುಂಬ ಕೊಂಚ ವಿಭಿನ್ನವಾಗಿ ಆಲೋಚನೆ ಮಾಡಿದ್ದು, ಅದ್ದೂರಿ ವಿವಾಹಕ್ಕೆ ಬಾಡಿಗೆ ಎಲೆಕ್ಟ್ರಿಕ್ ಯುಲು ಸ್ಕೂಟರ್‌ಗಳಲ್ಲಿ ವರನ ಕುಟುಂಬ ಬಂದಿದೆ.

Bengaluru: ದುಬಾರಿ ಮದುವೆಗೆ ಬಾಡಿಗೆ ಸ್ಕೂಟರ್‌ಗಳಲ್ಲಿ ಬಂದ ಗಂಡಿನ ಕಡೆಯವರು.. ಹೀಗೋ ಸಾಧ್ಯ!

ಇನ್‌ಸ್ಟಾಗ್ರಾಮ್‌ನಲ್ಲಿ ಹಲ್ - ಚಲ್ ಸೃಷ್ಟಿಸಿರುವ ಈ ವಿಡಿಯೋದಲ್ಲಿ ಗಂಡಿನ ಕಡೆಯವರೂ ಇ-ಸ್ಕೂಟರ್‌ಗಳಲ್ಲಿ ಬರುತ್ತಿರುವುದನ್ನು ಕಾಣಬಹುದು. ಜೊತೆಗೆ ಡೋಲು ಬಡಿತಕ್ಕೆ ನೃತ್ಯ ಮಾಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡಿಸೆಂಬರ್ 19ರಂದು ಪೋಸ್ಟ್ ಮಾಡಲಾಗಿರುವ ಈ ವಿಡಿಯೋ, ಈವರೆಗೆ 87 ಸಾವಿರಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದೆ. ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ಅವರು ಸ್ವಲ್ಪ ಸಂಚಾರ ದಟ್ಟಣೆ ಉಂಟು ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಪ್ರಾಣಿಗಳನ್ನು ನೋಯಿಸದಿರುವ ಇವರ ಈ ಪರಿಕಲ್ಪನೆಯನ್ನು ಪ್ರೀತಿಸಿ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಇನ್‌ಸ್ಟಾಗ್ರಾಮ್‌ ಬಳಕೆದಾರ, 'ಅವನು ಬಹುಶಃ ಎಲೆಕ್ಟ್ರಿಕ್ ಎಂಜಿನಿಯರ್ ಆಗಿರಬಹುದು' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

Bengaluru: ದುಬಾರಿ ಮದುವೆಗೆ ಬಾಡಿಗೆ ಸ್ಕೂಟರ್‌ಗಳಲ್ಲಿ ಬಂದ ಗಂಡಿನ ಕಡೆಯವರು.. ಹೀಗೋ ಸಾಧ್ಯ!

ಕಳೆದ ತಿಂಗಳು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲೂ ಜೋಡಿಯೊಂದು ವಿಭಿನ್ನವಾಗಿ ಮದುವೆಯಾಗಿ ಭಾರೀ ಸುದ್ದಿಯಾಗಿತ್ತು ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮಿಥುನ್ ಹಾಗೂ ಪೂಜಾ ಎಂಬುವವರ ವಿವಾಹ ಸಮಾರಂಭದಲ್ಲಿ ನವದಂಪತಿ, ವರನ ಮನೆಗೆ ತೆರಳಲು ಅವರ ಸ್ನೇಹಿತರು ಜೆಸಿಬಿ ವ್ಯವಸ್ಥೆ ಮಾಡಿದ್ದರು.

ಹೂವಿನಿಂದ ಸಿಂಗಾರಗೊಂಡ ಜೆಸಿಬಿ ಮುಂಭಾಗ ವಿಶೇಷವಾದ ಸೋಫಾವನ್ನು ಜೋಡಿಸಿ, ಅದರ ಮೇಲೆ ವಧು - ವರರನ್ನು ಕುರಿಸಿ ಮೆರವಣಿಗೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ನವ ದಂಪತಿಗಳ ಸ್ನೇಹಿತರು ಭರ್ಜರಿಯಾಗಿ ನೃತ್ಯ ಮಾಡಿ ಸಂಭ್ರಮಿಸಿದ್ದರು. ಈ ವಿವಾಹ ಸಮಾರಂಭದಲ್ಲಿ ಶಾಸ್ತ್ರಗಳು ಮಗಿಯುತ್ತಿದ್ದಂತೆ ವಧು - ವರರ ಸ್ನೇಹಿತರು ಕೋಳಿ ಕಾಳಗವನ್ನು ಆಯೋಜಿಸಿದ್ದರು. ಅದು ಎಲ್ಲರ ಆಕರ್ಷಣೆಯಾಗಿತ್ತು.

ಬೆಂಗಳೂರಿನಲ್ಲಿ ಯುಲು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಾಡಿಗೆ ಮಾತ್ರ ಲಭ್ಯವಿವೆ. ಹೋದ ವರ್ಷದ ನವೆಂಬರ್ ತಿಂಗಳು ಕಂಪನಿಯೂ ವೈನ್ (Wynn) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಲಾಂಚ್ ಮಾಡಿತ್ತು. ಇದು ಕಡಿಮೆ ಬೆಲೆಯನ್ನು ಹೊಂದಿದ್ದು, ಈ ಸ್ಕೂಟರ್ ಓಡಿಸಲು ಯಾವುದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ ಎನ್ನುವುದು ಇದರ ಪ್ರಮುಖ ಹೈಲೈಟ್ ಆಗಿದೆ.

ಈ ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 984.3 Wh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 68 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಹಬ್ ಮೌಂಟೆಡ್ ಮೋಟರ್ ಇದ್ದು, 25km/h ಟಾಪ್ ಸ್ವೀಡ್ ಹೊಂದಿದೆ. ಫ್ರಂಟ್ & ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 3, 2024, 14:41 [IST]
English summary
Bengaluru groom and his family reached wedding venu on rented yulu scooter video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+