Vande Bharat: ಬೆಂಗಳೂರು-ಹೈದರಾಬಾದ್ ಮಧ್ಯೆ ಟ್ರಯಲ್‌ರನ್‌ ಯಶಸ್ವಿ, 110 kmph ವೇಗ.. ಇಷ್ಟೇ ಟೈಮ್ ಸಾಕು!

ಬಹುನೀರಿಕ್ಷಿತ ಬೆಂಗಳೂರು (Bengaluru) ಹಾಗೂ ಹೈದರಾಬಾದ್‌ (Hyderabad) ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು, ಸೆಪ್ಟೆಂಬರ್ 25ರಿಂದ ಕಾರ್ಯಾಚರಣೆಯನ್ನು ಶುರು ಮಾಡಲಿದೆ. ನಿನ್ನೆಯಷ್ಟೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಮಗಿಸಿದ್ದು, ನಿರೀಕ್ಷೆಗೂ ಮೀರಿದ ವೇಗದಲ್ಲಿ ಸಂಚರಿಸಿದೆ.

ಕಾಚಿಗುಡ (ಹೈದರಾಬಾದ್‌) ಹಾಗೂ ಯಶವಂತಪುರ (ಬೆಂಗಳೂರು) ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಪರೀಕ್ಷಾರ್ಥ ಸಂಚಾರ (ಟ್ರಯಲ್‌ರನ್‌) ವೇಳೆಯಲ್ಲಿ 110 kmph ವೇಗದಲ್ಲಿ ಚಲಿಸಿದೆ. ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದು, ಎರಡು ದೈತ್ಯ ಐಟಿ ನಗರಗಳ ನಡುವೆ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ.

Vande Bharat: ಬೆಂಗಳೂರು-ಹೈದರಾಬಾದ್ ಮಧ್ಯೆ ಟ್ರಯಲ್‌ರನ್‌ ಯಶಸ್ವಿ, 110 kmph ವೇಗ.. ಇಷ್ಟೇ ಟೈಮ್ ಸಾಕು!

ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಗುರುವಾರ ಬೆಳಗ್ಗೆ 5:30ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಿ, ಮಧ್ಯಾಹ್ನ 1.15ಕ್ಕೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪಿದೆ. ನಿಗದಿಪಡಿಸಿದ ಸಮಯಕ್ಕಿಂತ (7 ಗಂಟೆ) 20-30 ನಿಮಿಷ ಮೊದಲೇ ಆಗಮಿಸಿದೆ. ಧರ್ಮಾವರಂ ಮತ್ತು ಯಶವಂತಪುರ ನಡುವೆ 100 kmph ವೇಗದಲ್ಲಿ ಚಲಿಸಿದ ಹಿನ್ನೆಲೆ, ಬೇಗನೇ ಗಮ್ಯ ಸ್ಥಾನವನ್ನು ಸೇರಲು ಸಾಧ್ಯವಾಗಿದೆ.

ಇನ್ಮುಂದೆ ಹೈದರಾಬಾದ್‌ ಮತ್ತು ಬೆಂಗಳೂರು ನಡುವೆ ಓಡಾಟ ನಡೆಸುವ ಈ ರೈಲು, 609.81 ಕಿಲೋಮೀಟರ್ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಹೇಳಲಾಗಿದೆ. ಇವೆರಡು ನಗರಗಳ ಮಧ್ಯೆ ಸಂಚರಿಸುವ ಸಾಮಾನ್ಯ ರೈಲುಗಳಿಗೆ ಹೋಲಿಕೆ ಮಾಡಿದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಒಂದೆರಡು ಗಂಟೆ ಮೊದಲೇ ನಿಗದಿಪಡಿಸಿದ ಗಮ್ಯ ಸ್ಥಳವನ್ನು ತಲುಪಲಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಇವೆರೆಡು ನಗರಗಳ ನಡುವೆ ಸಂಚರಿಸಿವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದ ಯಶವಂತಪುರ ಬಿಟ್ಟರೆ, ಬೇರೆ ಯಾವುದೇ ರೈಲು ನಿಲ್ದಾಣದಲ್ಲಿ ನಿಲುಗಡೆಯಾವುದಿಲ್ಲ. ಈ ಮೊದಲು ರಾಯಚೂರು ಮಾರ್ಗವಾಗಿ ಚಲಿಸಿ, ಯಲಹಂಕ ಸ್ಟೇಷನ್ ನಲ್ಲಿ ನಿಲ್ಲುತ್ತದೆ ಎನ್ನಲಾಗಿತ್ತು. ಆದರೀಗ ಹುಸಿಯಾಗಿದೆ. ಬುಧವಾರ ಹೊರತುಪಡಿಸಿ, ವಾರದಲ್ಲಿ ಎಲ್ಲ ದಿನವು ವಂದೇ ಭಾರತ್ ಓಡಾಟ ನಡೆಸಬಹುದು.

ದಕ್ಷಿಣ ಮಧ್ಯ ರೈಲ್ವೆ (SCR) ಈ ರೈಲನ್ನು ನಿರ್ವಹಣೆ ಮಾಡಲಿದ್ದು, ಈವರೆಗೆ, ಟಿಕೆಟ್ ದರದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಲಭ್ಯವಿರುವ ವಿವರಗಳ ಪ್ರಕಾರ, ಮುಂಜಾನೆ 5.30ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಹೊರಡುವ ರೈಲು (ಸಂಖ್ಯೆ - 20703), 7 ಗಂಟೆಗೆ ಮೆಹಬೂಬ್ ನಗರ, 8.40ಕ್ಕೆ ಕರ್ನುಲ್ ಸಿಟಿ, 10.55ಕ್ಕೆ ಅನಂತಪುರ, 11.30ಕ್ಕೆ ಧರ್ಮಾವರಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಮಧ್ಯಾಹ್ನ 2 ಗಂಟೆಗೆ ಯಶವಂತಪುರ (ಬೆಂಗಳೂರು) ಕ್ಕೆ ಬರಲಿದೆ. ಇಲ್ಲಿಂದ ಮಧ್ಯಾಹ್ನ 2.45ಕ್ಕೆ ಪುನಃ ಸಂಚಾರ ಆರಂಭಿಸುವ ರೈಲು (ಸಂಖ್ಯೆ - 20704), 5.20ಕ್ಕೆ ಧರ್ಮಾವರಂ, 5.41ಕ್ಕೆ ಅನಂತಪುರ, 7.51ಕ್ಕೆ ಕರ್ನುಲ್ ಸಿಟಿ, 9.40ಕ್ಕೆ ಮೆಹಬೂಬ್ ನಗರದಲ್ಲಿ ನಿಲುಗಡೆಯಾಗಿ, ರಾತ್ರಿ 11.15ಕ್ಕೆ ಕಾಚಿಗುಡವನ್ನು ತಲುಪುತ್ತದೆ.

ಇನ್ನು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರೀಮಿಯಂ ರೈಲು ಆಗಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ಸಂಪೂರ್ಣ ಎಸಿ ವ್ಯವಸ್ಥೆಯಿದ್ದು, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿದೆ. ಪ್ರಮುಖ ಐಟಿ ನಗರಗಳ ಮಧ್ಯೆ ಸಂಚಾರ ಶುರು ಮಾಡುವುದರಿಂದ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 22, 2023, 15:13 [IST]
English summary
Bengaluru hyderabad vande bharat clocks 110 kmph trial run details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+